Hot Posts

6/recent/ticker-posts

ಫೆಬ್ರವರಿ 1 ಶನಿವಾರ ನೆಮ್ಮದಿ ರಂಗಧಾಮದಲ್ಲಿ “ನಿಮ್ಮೊಂದಿಗೆ ನಾವು” ಚಿತ್ರಕಲಾ ಪ್ರದರ್ಶನ

          

ಶಿರಸಿ: ಕರ್ನಾಟಕ ಲಲಿತಕಲಾ ಅಕಾಡೆಮಿ, ಬೆಂಗಳೂರು ಹಾಗೂ ಸುವರ್ಣ ಕೋ-ಆಪರೇಟಿವ್‌ ಸೊಸೈಟಿ, ಶಿರಸಿ ಸಹಕಾರದಲ್ಲಿ ಫೆ.1, ಶನಿವಾರದಂದು ನಗರದ ರಂಗಧಾಮದಲ್ಲಿ ‘ನಿಮ್ಮೊಂದಿಗೆ ನಾವು’ ಚಿತ್ರಕಲಾ ಪ್ರದರ್ಶನ, ಪ್ರಾತ್ಯಕ್ಷಿಕೆ, ಕಲಾ ವಿಮರ್ಶೆ, ಶಾಲಾ ಮಕ್ಕಳ ಚಿತ್ರಕಲಾ ಶಿಬಿರ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

         

ಕಾರ್ಯಕ್ರಮವನ್ನು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೇಶವಮೂರ್ತಿ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಪ.ಸ. ಕುಮಾರ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಿಕ್ಷಣ ಇಲಾಖೆ ಉಪನಿರ್ದೇಶಕ ಪಿ ಬಸವರಾಜ್, ಸುವರ್ಣ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಸಂತೋಷ್ ಶೇಟ್, ಹಿರಿಯ ಕಲಾವಿದರಾದ ನೀರ್ನಳ್ಳಿ ಗಣಪತಿ, ಜಿ.ಎಂ. ಹೆಗಡೆ ತಾರಗೋಡ, ಎಂಇಎಸ್ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಪ್ರಾಂಶುಪಾಲ ಜಿ.ಟಿ.ಭಟ್ಟ ಆಗಮಿಸಲಿದ್ದಾರೆ. ಚಿತ್ರ ಕಲಾವಿದ ನಾಗರಾಜ್ ಹನೇಹಳ್ಳಿ ಪ್ರಾತ್ಯಕ್ಷಿಕೆ ನಡೆಸಿಕೊಡಲಿದ್ದಾರೆ. ಕಲೆ ಮತ್ತು ಸಂಸ್ಕೃತಿ ಹಾಗೂ ಕಲಾವಿದನ ಬದುಕು ವಿಷಯದ ಕುರಿತಾದ ವಿಮರ್ಶೆಯನ್ನು ಚಿತ್ರ ಕಲಾವಿದ, ಸಾಹಿತಿ ಶ್ರೀಧರ್ ಶೇಟ್ ನಡೆಸಿಕೊಡಲಿದ್ದಾರೆ. ಕಾರ್ಯಕ್ರಮಕ್ಕೆ ಸರ್ವರೂ ಆಗಮಿಸಿ ಕಾರ್ಯಕ್ರಮದಲ್ಲಿ ಶಾಂತಾ ಪ್ರವೀಣ ಕೊಲ್ಲೆ ಸದಸ್ಯ ಸಂಚಾಲಕರು ಕರ್ನಾಟಕ ಲಲಿತ ಕಲಾ ಅಕಾಡೆಮಿ, ಬಿ ನೀಲಮ್ಮ ರಿಜಿಸ್ಟಾರ್ ಕರ್ನಾಟಕ ಲಲಿತ ಕಲಾ ಅಕಾಡೆಮಿ ಬೆಂಗಳೂರು ಇರಲಿದ್ದಾರೆ.

ಪ್ರತಿಕ್ರಿಯೆ

Post a Comment

0 Comments