Hot Posts

6/recent/ticker-posts

ಆರೋಗ್ಯಕರ ಹುರುಳಿ ಸಾಂಬಾರ್

ಹುರುಳಿಸಾಂಬಾರ್....ನ್ನು ತುಂಬಾ ಸುಲಭವಾಗಿ ಮಾಡಬಹುದು. 

ಬೇಕಾಗುವ ಸಾಮಗ್ರಿಗಳು ಎಣ್ಣೆ , ಸಾಸಿವೆ , ಜೀರಿಗೆ , ಅರಿಶಿನ,1ಕ್ಯಾಪ್ಸಿಕಂ , ಹುರುಳಿ ಸಾಂಬಾರ್ ಪೌಡರ್, ಉಪ್ಪು ಸ್ವಲ್ಪ ಹುಳಸೆ ಹಣ್ಣಿನ ರಸ, 2ಟೊಮೆಟೊ,2ಈರುಳ್ಳಿ.

ಮಾಡುವ ವಿಧಾನ:

ಮೊದಲಿಗೆ ಒಂದು ಪಾತ್ರೆಗೆ ಎಣ್ಣೆ ಹಾಕಿ ಸಾಸಿವೆ, ಜೀರಿಗೆ,ಅರಿಶಿನ ಹಾಕಿ ಫ್ರೈ ಮಾಡಿ. ನಂತರ ಹೆಚ್ಚಿಟ್ಟ ಈರುಳ್ಳಿ ಹಾಗೂ ಟೊಮೇಟೊ ಹಾಕಿ ಎರಡು ನಿಮಿಷ ಚೆನ್ನಾಗಿ ಫ್ರೈ ಮಾಡಿ. ಈಗ ಅದಕ್ಕೆ ನಾಲ್ಕು ಚಮಚ ಸಾಂಬಾರ್ ಹುರಳಿ ಹಿಟ್ಟನ್ನು ಒಂದು ಲೋಟ ತಣ್ಣೀರಿನಲ್ಲಿ ಮಿಕ್ಸ್ ಮಾಡಿಕೊಂಡು ಫ್ರೈ ಮಾಡಿರುವ ಈರುಳ್ಳಿ ಟೊಮೆಟೊ ಮಿಶ್ರಣಕ್ಕೆ ಹಾಕಿ. ನಂತರ ನಾಲ್ಕು ಲೋಟ ನೀರನ್ನು ಸೇರಿಸಿ. ಈಗ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಗೆ ಉಳಿಸೇ ರಸ ಎಲ್ಲವನ್ನು ಹಾಕಿ ಚೆನ್ನಾಗಿ ಕುದಿಸಿ. ಈಗ ಇದು ಅನ್ನದ ಜೊತೆ ಸವಿಯಲು ಸಿದ್ಧ.   

ನಾನು ಪೂರ್ಣಿಮಾ ಭಟ್ ಶಿರಸಿ ತಾಲೂಕಿನ ನಾಡ್ಗುಳಿ ಊರಿನವಳು.

ಹುರುಳಿ ಹಿಟ್ಟು ನನ್ನ ಹೋಂ ಪ್ರಾಡಕ್ಟ್. ಸಾಂಬಾರ್ ಹುರುಳಿ ಹಿಟ್ಟು ಮತ್ತು ಸಾದಾ ಹುರುಳಿ ಹಿಟ್ಟು ಸಿಗುತ್ತದೆ. 

          
ಸಾಂಬಾರ್ ಹುರುಳಿ ಹಿಟ್ಟಿನಿಂದ ಅನ್ನಕ್ಕೆ ವಿವಿಧ ಬಗೆಯ ಸಾಂಬಾರ್, ತಿಳಿಸಾರು, ಕುಡಿಯುವ ಸಾರು ಹಾಗೆ ಬಾಜಿ ಮಾಡಬಹುದು.

 ಪ್ಲೈನ್ ಹುರುಳಿ ಹಿಟ್ಟಿನಿಂದ ಮಾಲ್ಟ್,ಉಂಡೆ, ಸೂಪ್ ಮಾಡಬಹುದು.ಹುರುಳಿ ಕಾಳಿನ ಪ್ರಯೋಜನಗಳು ::

1)ದೇಹದ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

2) ಮಹಿಳೆಯರಲ್ಲಿ ಪಿಸಿಓಎಸ್ ತೊಂದರೆಗೆ ಉತ್ತಮ ಆಹಾರ. 

3)ಮಧುಮೇಹ ರೋಗಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. 4)ಉಸಿರಾಟದ ಸಮಸ್ಯೆಯನ್ನು ನಿವಾರಿಸುತ್ತದೆ. 

5)ರಕ್ತವನ್ನು ಶುದ್ಧೀಕರಿಸುತ್ತದೆ ಮತ್ತು ಯಕೃತ್ತಿನ ಆರೋಗ್ಯಕ್ಕೆ ಒಳ್ಳೆಯದು.

6)ನಮ್ಮ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.  

7)ಹೆಚ್ಚಿನ ಪ್ರೋಟೀನ್ ಅನ್ನು ಹೊಂದಿದೆ.

ಹುರುಳಿ ಸಾಂಬಾರ್ ಪೌಡರ್ ಮತ್ತು ಹುರುಳಿ ಹಿಟ್ಟು ಬೇಕಾದಲ್ಲಿ ಸಂಪರ್ಕಿಸಿ. ವಾಟ್ಸಪ್ ನಂಬರ್ 9480583270. ಹಾಗೆಯೇ ವಿವಿಧ ಬಗೆಯ ರೆಸಿಪಿಗಳ ವಿಡಿಯೋ ಕೂಡಾ ಲಭ್ಯವಿದೆ.

ಹುರುಳಿ ಸಾಂಬಾರ್ ಪೌಡರ್ ಸಿರಸಿಯಲ್ಲಿ ಕದಂಬ,ಟಿಎಂಎಸ್ ಸೂಪರ್ ಮಾರ್ಕೆಟ್, ಹಾಗೂ ನೆಲೆಸಿರಿ ಆರ್ಗಾನಿಕ್ ಹಬ್ ನಲ್ಲಿ ಸಿಗುತ್ತದೆ. ಸಿದ್ದಾಪುರದಲ್ಲಿ ಮಹಾಲಕ್ಷ್ಮಿ ಕೋಲ್ಡ್ ಡ್ರಿಂಕ್ಸ್ ನಲ್ಲೂ ಸಿಗುತ್ತದೆ ವಿಚಾರಿಸಿ.

ಪೋಸ್ಟ್ ಸರ್ವಿಸ್ ಹಾಗೂ ಕೋರಿಯರ್ ಸರ್ವಿಸ್ ಕೂಡ ಲಭ್ಯವಿದೆ.

ಹೋಂ ಪ್ರಾಡಕ್ಟ್ ಸೇಲರ್ಸ್ ಕೂಡ ಸಂಪರ್ಕಿಸಬಹುದು

ಪೂರ್ಣಿಮಾ ಭಟ್ ನಾಡಗುಳಿ

ಪ್ರತಿಕ್ರಿಯೆ

Post a Comment

0 Comments