Hot Posts

6/recent/ticker-posts

ತೋಟಕ್ಕೆ ಮಣ್ಣು… ಅಪ್ಪ, ಮಗ ಹೇಗೆ ಹಾಕಿದ್ರು ನೋಡಿ… ಇದೊಂದು ಅದ್ಭುತ ಸಾಧನೆ…

ಒಂದು ತಿಂಗಳು ಎರಡು ಜನರು… ಅದೂ ಅರ್ಧ ಕಿಮೀ ದೂರದ ತಮ್ಮ ತೋಟಕ್ಕೆ ಮಣ್ಣು ಹೊಯ್ಯುತ್ತಾರೆ. ಇಕ್ಕಟ್ಟಾದ, ಕಿರಿದಾದ ದಾರಿಯಲ್ಲಿ ಅಪ್ಪ ಮಗ ಇಬ್ಬರು ಒಂದು ಕೈಗಾಡಿಯಲ್ಲಿ ಮಣ್ಣು ತುಂಬಿಕೊಂಡು ಸಾಗುತ್ತಾರೆ. ಅರ್ಧ ಕಿಮೀ ಮಗ ಗಾಡಿ ಎಳೆಯುತ್ತಾ ಸಾಗುತ್ತಾನೆ… ಅಪ್ಪ ಗಾಡಿ ದೂಡುತ್ತಾ ಮುಂದುವರಿಯುತ್ತಾ ಸಾಗಿ ಮಣ್ಣು ತೋಟಕ್ಕೆ ಹಾಕಿದಾಗ ಅವರಲ್ಲಿ ಶ್ರಮದಿಂದ ಸಾಧಿಸಿದ ಅನುಭವ. 
ಕಾನಳ್ಳಿ ಊರಿನ ಶ್ರೀಕಾಂತ ಹೆಗಡೆ ಹಾಗೂ ಅವರ ಮಗ ನೂತನ ಹೆಗಡೆ ಇಂಥದ್ದೊಂದು ಸಾಧನೆ ಮಾಡಿ ಗಮನ ಸೆಳೆದಿದ್ದಾರೆ. ಕಡಿಮೆ ಕೂಲಿ ಬಳಸಿ ಸ್ವಂತದ್ದಾದ ಸುಂದರ ತೋಟ ಮಾಡಿದ್ದಾರೆ. ತೋಟದ ಬಣ್ಣಕ್ಕೆ 65 ಮಾರು ಮಣ್ಣು ಹೊಯ್ದಿದ್ದಾರೆ. ಮನೆಯ ಹಿಂದಿನ ಧರೆ ಅಗೆದು ಅಲ್ಲಿಂದ ತೋಟಕ್ಕೆ ಮಣ್ಣು ಸಾಗಿಸಲು ಇವರು ಕೈಗಾಡಿ ತಯಾರಿಸಿದ್ದಾರೆ. ಇದರಲ್ಲಿ ಕೇವಲ ಮಣ್ಣು ಹೊಯ್ಯುವುದಷ್ಟೆ ಅಲ್ಲ ಅಡಿಕೆ ಕೊಯ್ಲು ಸಮಯದಲ್ಲಿ ಅಡಿಕೆ ಕೊನೆ ಸಾಗಿಸಲೂ ಬಳಸುತ್ತಾರೆ. ಇವರ ಸ್ವಂತ ಪರಿಶ್ರಮ ಸಾಧನೆ ಮೆಚ್ಚುವಂತದ್ದು. 


ನಾವು ಕೂಲಿ ಆಳು ಇದೇ ಕೆಲಸಕ್ಕೆ ಬಳಸಿದ್ದರೆ 60 ಸಾವಿರದಷ್ಟು ಖರ್ಚು ಬರುತ್ತಿತ್ತು ಅನ್ನುತ್ತಾರೆ ಶ್ರೀಕಾಂತ ಹೆಗಡೆ. ಸಾಧ್ಯವಾದಷ್ಟು ಕಡಿಮೆ ಕ್ಷೇತ್ರ ಇರುವವರು ತಮ್ಮ ತೋಟದ ಕೆಲಸಗಳನ್ನು ಸ್ವಂತವಾಗಿ ಮಾಡಿಕೊಳ್ಳಬಹುದು ಅದಕ್ಕೆ ಕನಿಷ್ಠ ತಂತ್ರಜ್ಞಾನದ ಅಳವಡಿಕೆ ಸಾಕು ಎಂಬುದು ಅವರ ಅಭಿಪ್ರಾಯ. 
ಅವರ ಅಡಿಕೆ ಸಸಿ ಬಲಿಷ್ಠವಾಗಿ ಬೆಳೆದಿದೆ. ಅಡಿಕೆ ಸಸಿ ಮಾರಾಟ ಮಾಡುತ್ತಿದ್ದು ಅಗತ್ಯವಿದ್ದವರು ಅವರನ್ನು ಈ ನಂಬರಿಗೆ ಸಂಪರ್ಕಿಸಬಹುದು 9448753916


ಪ್ರತಿಕ್ರಿಯೆ

Post a Comment

0 Comments