Hot Posts

6/recent/ticker-posts

ಐದು ಸಾವಿರಕ್ಕೂ ಹೆಚ್ಚು ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಅದ್ಧೂರಿ ಅಷ್ಟಬಂಧ ಮಹೋತ್ಸವಕ್ಕೆ ಕಡಬಾಳ ಸಜ್ಜು

ಐದು ಸಾವಿರಕ್ಕೂ ಹೆಚ್ಚು ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಅದ್ಧೂರಿ ಅಷ್ಟಬಂಧ ಮಹೋತ್ಸವಕ್ಕೆ ಕಡಬಾಳ ಸಜ್ಜು 

ಶಿರಸಿ: ಕದಂಬರ ಆಳ್ವಿಕೆಯ ಕೋಟೆ ಕುರುಹುಗಳು ಇಲ್ಲಿವೆ, ನಾಗಬನವಿದ್ದು, ನಾಗ ಸಂಚಾರ ಇಲ್ಲಿ ಇದೆ, ಪುರಾತನ ದೇಗುಲ ಹದಿನೈದಕ್ಕೂ ಅಧಿಕ ಶಿಲಾಶಾಸನಗಳು ಕಾಣಲು ಸಿಗುತ್ತದೆ, ಉತ್ತರ ಕನ್ನಡ ಜಿಲ್ಲೆಯ ಎರಡನೇ ಅತಿದೊಡ್ಡ ಶಿವಲಿಂಗ ಇದು, ಪುರುಷ ಪ್ರಮಾಣದ 5.5 ಅಡಿ ಎತ್ತರದ ಶಿವಲಿಂಗ, ಇಲ್ಲೊಂದು ಝರಿ ನೀರಿನ ಕಲ್ಯಾಣಿ ಇದೆ ಇಷ್ಟೆಲ್ಲಾ ಇರುವ ಈ ದೇಗುಲ 

ಶಿರಸಿ ತಾಲೂಕಿನ ಕಡಬಾಳದ ಶ್ರೀ ಕದಂಬೇಶ್ವರ ದೇವರ ಅಷ್ಟಬಂಧ ಮಹೋತ್ಸವ ಹಾಗೂ ದೇವಾಲಯ ಸಮರ್ಪಣೆ ಕಾರ್ಯಕ್ರಮ ಮೇ 7 ರಿಂದ 10 ರವರೆಗೆ ನಾಲ್ಕು ದಿನಗಳ ಕಾಲ ನೆಡೆಯಲಿದೆ. ಕದಂಬರ ಆಳ್ವಿಕೆಯ ವೈಭವಗಳನ್ನು ಸಾರಿ ಹೇಳುವ ಶಿಲಾಶಾಸನಗಳು, ಕದಂಬರ ಗತ ಇತಿಹಾಸಕ್ಕೆ ಸಾಕ್ಷಿನೀಡುವ ವೀರಗಲ್ಲು, ಹೆಜ್ಜೆಹೆಜ್ಜೆಗೂ ನಾಗಬನವನ್ನು ಉಲ್ಲೇಖಿಸುವ ನೂರಾರು ನಾಗ ವಿಗ್ರಹಗಳನ್ನು ಒಳಗೊಂಡ ಪುಣ್ಯ ಕ್ಷೇತ್ರ ಎಂದೆ ಹೇಳಬಹುದು.

ಸುಮಾರು 1400 ವರ್ಷಗಳ ಹಿಂದೆ ಹಾನಗಲ್ ಕದಂಬರ ಆಳ್ವಿಕೆಯ ಕಾಲದಲ್ಲಿ ಕದಂಬೇಶ್ವರ ದೇವರನ್ನು ಪ್ರತಿಷ್ಠಾಪಿಸಲಾಗಿದೆ ಎಂದು ಇತಿಹಾಸಕಾರರಿಂದ ಉಲ್ಲೇಖಿತಗೊಂಡಿದೆ. ಅಲ್ಲದೇ ಕದಂಬರ ಆಳ್ವಿಕೆಯ ಬಹುಮುಖ್ಯ ನೆಲೆಯಾಗಿದ್ದ ಶಿಲಾಶಾಸನಗಳ ಕುರುಹುಗಳು, ಕೋಟೆಯ ಭಗ್ತಾವಶೇಷಗಳು, ಜೈನ ಪರಂಪರೆಯ ವೈಶಿಷ್ಟ್ಯತೆಗಳನ್ನು ತಿಳಿಸುವ ಕೆಲ ಶಿಲಾಶಾಸನಗಳನ್ನು ಇಲ್ಲಿ ಕಾಣಬಹುದಾಗಿದೆ. ಒಂದು ಕೋಟಿ ಗೂ ಅಧಿಕ ವೆಚ್ಚದಲ್ಲಿ ಆಗಮಶಾಸ್ತ್ರದ ಪ್ರಕಾರ ನಿರ್ಮಿಸಲಾದ ನೂತನ ದೇವಾಲಯವು ಗರ್ಭಗುಡಿ, ನೈವೇದ್ಯ ಮಂಟಪ, ಸಂಧ್ಯಾ ಮಂಟಪ, ಘಂಟೆ ಮಂಟಪ, ಪ್ರದಕ್ಷಿಣಾಪಥ, ಭೋಜನಶಾಲೆ, ಯಾಗಶಾಲೆ, ಧ್ವಜಸ್ಥಂಭ, ಕಲ್ಯಾಣಿ, ಕ್ಷೇತ್ರಪಾಲ ಇವುಗಳನ್ನು ಒಳಗೊಂಡಿದೆ. ನಾಲ್ಕು ದಿನಗಳ ಕಾಲ ಅದ್ದೂರಿಯಾಗಿ ನಡೆಯಲಿರುವ ಅಷ್ಟಬಂಧ ಮಹೋತ್ಸವದಲ್ಲಿ ಅಂದಾಜು 5 ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದ್ದು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ

ಕಾರ್ಯಕ್ರಮಗಳು ಹೀಗಿದೆ ಮಂಜುಗುಣಿಯ ಶ್ರೀನಿವಾಸ ಭಟ್ಟರ ಮಾರ್ಗದರ್ಶನದಲ್ಲಿ ಹಾಗೂ ಕುಮಾರ ಭಟ್ಟ ಕೊಳಗಿಬೀಸ್ ಅವರ ಅಧ್ವರ್ಯ ದಲ್ಲಿ ಮೇ 7ರ ಬುಧುವಾರ ಮುಂಜಾನೆ ಗಣೇಶ ಪ್ರಾರ್ಥನೆ, ಪಂಚಗವ್ಯ ಹೋಮ, ಕುಷ್ಮಾಂಡ ಹೋಮ, ಮಹಾಗಣಪತಿ ಹೋಮ, ಪಂಚಗವ್ಯ, ಉಪವೀತ, ಗಣಪತಿ ಪೂಜೆ, ದೇವನಾಂದಿ, ಮಾತೃಕಾ ಪೂಜೆ, ಮಹಾ ಸಂಕಲ್ಪ, ಪುಣ್ಯಾವಾಚನೆ, ಋತ್ವಿಗರ್ಣನೆ, ಮಧುಪರ್ಕ ಅಧಿವಾಸ, ಸಾಯಂಕಾಲ ಪರಿಗ್ರಹ, ಸಪ್ತಶುದ್ದಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ದಿಗಲಿ, ಯಾಗಶಾಲಾ ಪ್ರವೇಶ, ಕಲಶ ಸ್ಥಾಪನೆ, ಅಧಿವಾಸಗಳು ನಡೆಯಲಿದೆ. ಮೇ 8ರ ಗುರುವಾರ ನವಗ್ರಹ ಸೇವೆ, ಯಕ್ಷಗಾನ ನಡೆಯಲಿದೆ. ಮೇ 10 ರಂದು ತತ್ವಕಲಾ ಹೋಮ, ಕುಂಭಾಭಿಷೇಕ, ಪೂರ್ಣಾಹುತಿ, ಮಹಾಪೂಜೆ, ಅನ್ನ ಸಂತರ್ಪಣೆ, ಸಭಾಕಾರ್ಯಕ್ರಮ, ಭಜನೆ, ಯಕ್ಷಗಾನ ನಡೆಯಲಿದೆ

ಯಕ್ಷಗಾನ: 

ಮೇ 9 ಶುಕ್ರವಾರ ರಾತ್ರಿ ಉದಯ ಹೆಗಡೆ ಕಡಬಾಳ ಸೇವಾಕರ್ತ ದಲ್ಲಿ ಯಕ್ಷಗಾನ ಸೇವೆ

ಹಾಗೂ 

ಮೇ 10 ಶನಿವಾರ ರಾತ್ರಿ ಶ್ರೀ ಕ್ಷೇತ್ರ ಮೆಕ್ಕೆ ಕಟ್ಟು ಮೇಳ ವೆಂಕಟರಮಣ ನಾಯ್ಕ ಕಡಬಾಳ ಸೇವಾಕರ್ತದಲ್ಲಿ ಯಕ್ಷಗಾನ ಸೇವೆ ನಡೆಯಲಿದೆ.

ಪ್ರತಿಕ್ರಿಯೆ

Post a Comment

0 Comments