Hot Posts

6/recent/ticker-posts

ಇಂದಿನಿಂದ (ಮೇ 24) ಶ್ರೀ ಕ್ಷೇತ್ರ ಪಂಚಲಿಂಗದಲ್ಲಿ ಶ್ರೀ ಲಕ್ಷ್ಮೀನಾರಾಯಣ ದೇವರ ನೂತನ ಮೂರ್ತಿ ಪ್ರತಿಷ್ಠಾ ಮಹೋತ್ಸವ

ಇಂದಿನಿಂದ (ಮೇ 24) ಶ್ರೀ ಕ್ಷೇತ್ರ ಪಂಚಲಿಂಗದಲ್ಲಿ ಶ್ರೀ ಲಕ್ಷ್ಮೀನಾರಾಯಣ ದೇವರ ನೂತನ ಮೂರ್ತಿ ಪ್ರತಿಷ್ಠಾ ಮಹೋತ್ಸವ 

ಶಿರಸಿ: ತಾಲೂಕಿನ ಪ್ರಸಿದ್ಧ ಪರಶಿವನ ಕ್ಷೇತ್ರಗಳಲ್ಲಿ ಒಂದಾದ ಶ್ರೀ ಕ್ಷೇತ್ರ ಪಂಚಲಿಂಗದಲ್ಲಿ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಹಾಗೂ ಶ್ರೀ ಶ್ರೀಮದ್ ಆನಂದಬೋಧೇಂದ್ರ ಸರಸ್ವತೀ ಮಹಾಸ್ವಾಮಿಗಳು,ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ಇವರ ದಿವ್ಯ ಆಶೀರ್ವಾದದೊಂದಿಗೆ ಮೇ ತಿಂಗಳ 24 25 26ರಂದು ಶ್ರೀ ಲಕ್ಷ್ಮೀನಾರಾಯಣ ದೇವರ ನೂತನ ಮೂರ್ತಿ ಪ್ರತಿಷ್ಠಾ ಮಹೋತ್ಸವ ಜರುಗಲಿದೆ. ಈ ಮೂರು ದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಸಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ 

ವೇ॥ ಮೂ॥ ಶ್ರೀನಿವಾಸ ಭಟ್ಟ ಇವರ ಮಾರ್ಗದರ್ಶನದಲ್ಲಿ ವೇ॥ ಮೂ॥ಕುಮಾರ ಭಟ್ಟ, ಕೊಳಗಿಬೀಸ್ ಇವರ ಅದ್ವರ್ಯ ಯದಲ್ಲಿ ಶ್ರೀ ಲಕ್ಷ್ಮೀನಾರಾಯಣ ದೇವರ ನೂತನ ಮೂರ್ತಿ ಪ್ರತಿಷ್ಠೆ ಕಾರ್ಯಕ್ರಮ ಅಂಗವಾಗಿ ಧಾರ್ಮಿಕ ಕಾರ್ಯಕ್ರಮಗಳು ವೈಶಾಖ ಬಹುಳ ದ್ವಾದಶಿ (24-05-2025) ಯಿಂದ ಚತುರ್ದಶಿ (26-05-2025) ಯವರೆಗೆ ನಡೆಯಲಿದೆ.

ದಿನಾಂಕ 25-05-2025 ಭಾನುವಾರದಂದು ನಡೆಯುವ ಕಾರ್ಯಕ್ರಮದ ವಿವರ

ಬೆಳಿಗ್ಗೆ ಶ್ರೀ ಲಕ್ಷ್ಮೀ ನಾರಾಯಣ ನೂತನ ಮೂರ್ತಿಯ ಪ್ರತಿಷ್ಠಾಪನೆ ಕಾರ್ಯಕ್ರಮ 

ಮದ್ಯಾಹ್ನ ಪ್ರಸಾದ ಭೋಜನ 

ಮದ್ಯಾಹ್ನ 4 ಗಂಟೆಗೆ ಸಭಾವೇದಿಕೆಯಲ್ಲಿ ಚಂಡೆ ವಾದನ 

ನಂತರ "ಧರ್ಮಸಭೆ "

ಉಪಸ್ಥಿತಿ 

ವೇದಮೂರ್ತಿ ಶ್ರೀನಿವಾಸ ಭಟ್ ಮಂಜಗುಣಿ 

ವೇದಮೂರ್ತಿ ಶ್ರೀ ಕುಮಾರ ಭಟ್ ಕೊಳಗಿಬೀಸ್

ಅಧ್ಯಕ್ಷರು ಆಡಳಿತ ಕಮಿಟಿ ಪಂಚಲಿಂಗ

ಸಾಯಂಕಾಲ 6 ಗಂಟೆಗೆ

"ಕೀರ್ತನೆ" ಪ್ರಿಯಾಂಕಾ ಪರಮಾನಂದ ಹೆಗಡೆ ಶಿರಸಿ ಇವರಿಂದ

ದೇವರ ಪಲ್ಲಕ್ಕಿ ಉತ್ಸವ

ಶ್ರೀ ದೇವರ ಅಷ್ಟಾವಧಾನ ಸೇವೆ

ಪ್ರಸಾದ ಭೋಜನ

ರಾತ್ರಿ 10 ಗಂಟೆಯಿಂದ ಸ್ಥಳೀಯ ಕಲಾವಿದರಿಂದ ನಾಟಕ

" ವೃದ್ದಾಶ್ರಮ "

ಸರ್ವರಿಗೂ ಸುಸ್ವಾಸ್ವಾಗತ

ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗ ಬೇಕಾಗಿ ವಿನಂತಿ

-ಆಡಳಿತ ಮಂಡಳಿ ಪಂಚಲಿಂಗ

ದಿನಾಂಕ 26-05-2025 ಸೋಮವಾರದಂದು ನಡೆಯಲಿರುವ ಕಾರ್ಯಕ್ರಮದ ವಿವರಗಳು 

ಬೆಳಿಗ್ಗೆ ಮುಂಜಾನೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ ಗಳು 

ಶ್ರೀ ಸ್ವರ್ಣವಲ್ಲಿ  ಶ್ರೀಗಳ ಆಗಮನ 

ಶ್ರೀ ಗಳಿಗೆ ಪೂರ್ಣ ಕುಂಭ ಸ್ವಾಗತ 

 ಪೂರ್ಣಹುತಿ ಕಾರ್ಯಕ್ರಮ 

ಶ್ರೀಗಳ ಅಮೃತ ಹಸ್ತದಿಂದ ಬ್ರಹ್ಮ ಕುಂಭಾಭಿಷೇಕ

ಶ್ರೀ ಶ್ರೀಗಳವರ ಪಾದುಕಾ ಪೂಜೆ 

ಮಹಾ ಮಂಗಳಾರತಿ 

ತೀರ್ಥ ಪ್ರಸಾದ, ಪ್ರಸಾದ ಭೋಜನ 

ಮದ್ಯಾಹ್ನ 4 ಗಂಟೆಗೆ ಸಮಾರೋಪ ಸಮಾರಂಭ 

ಸಾಯಂಕಾಲ 5 ಗಂಟೆಯಿಂದ 

"ಭಜನ್ ಶಿವಳ್ಳಿ " ಶಿವಳ್ಳಿ ಸೀಮೆಯ ಮಾತೆಯರಿಂದ ಹಾಗೂ 

ಶ್ರೀ ರಾಜರಾಜೇಶ್ವರಿ ಮಹಿಳಾ ಮಂಡಲ ಹುಳಗೊಳ ಇವರಿಂದ ಭಜನಾ ಕಾರ್ಯಕ್ರಮ 

ಸಂಜೆ 6.30 ರಿಂದ ಮನರಂಜನಾ ಕಾರ್ಯಕ್ರಮ 

ರಾತ್ರಿ 8.30 ಕ್ಕೆ "ಭರತನಾಟ್ಯ ಕಾರ್ಯಕ್ರಮ " ಜಯಶ್ರೀ ಹೆಗಡೆ ಕೊಡೆಮನೆ ಮತ್ತು ಬಳಗ ದವರಿಂದ.

ರಾತ್ರಿ 10 ಗಂಟೆಯಿಂದ ಬಡಗು ತಿಟ್ಟಿನ ಸುಪ್ರಸಿದ್ದ ಕಲಾವಿದರ ಕುಡುವಿಕೆಯಲ್ಲಿ ಯಕ್ಷಗಾನ ಪ್ರದರ್ಶನ "ದಕ್ಷ ಯಜ್ಞ "

ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ

- ಆಡಳಿತ ಕಮಿಟಿ ಪಂಚಲಿಂಗ

ನಾಟಕ ಪರಿಕಲ್ಪನೆಯ ಬಗ್ಗೆ ಒಂದಿಷ್ಟು 

(ಮೇ 25 ರವಿವಾರ ವೃದ್ಧಾಶ್ರಮ ರಾತ್ರಿ 10 ಗಂಟೆಗೆ)

   

“ವೃದ್ಧಾಶ್ರಮ” ನಮಗೆಲ್ಲರಿಗೂ ಹಿರಿಯರು ಹೊರೆಯಲ್ಲ ಎಂಬ ಘೋಷ ವಾಕ್ಯದಲ್ಲಿ ನಡೆಯುವ ನಾಟಕ ಪರಿಕಲ್ಪನೆ ಹಾಗೂ ನಿರ್ದೇಶನ ಆರ್. ಟಿ. ಹೆಗಡೆ ತೀರ್ಥಗಾನ ಸಂಭಾಷಣೆ ಸತೀಶ ಹೆಗಡೆ, ಮೆಣಸಿಮನೆ ಸಂಗೀತ ಕೆ. ಪಿ ಹೆಗಡೆ ದಾಸನಕೊಪ್ಪ ಪಾತ್ರವರ್ಗದಲ್ಲಿ ಸುಬ್ಬಣ್ಣ ಕಲ್ಲರೆಗದ್ದೆ ಪ್ರಸನ್ನ ಭಟ್ಟ, ಓಣಿಕೈ ರಾಘವೇಂದ್ರ ಹೆಗಡೆ, ಹೆಗ್ಗರ್ಸಿಮನೆ ಶ್ರೀಶ ಹೆಗಡೆ ಮೂಡಗಾರ ಗಣಪತಿ ಹೆಗಡೆ, ಮೂಡಗಾರ ನಾಗಪತಿ ಹೆಗಡೆ, ಓಣಿಕೈ ಗಾಯತ್ರಿ ಹೆಗಡೆ, ಓಣಿಕೈ ರಶ್ಮಿ ಹೆಗಡೆ, ಕೊರ್ಟಿಬೈಲ್ ಆಶಾ ಹೆಗಡೆ, ಅಮಚಿಮನೆ ಸರಸ್ವತಿ ಹೆಗಡೆ, ಓಣಿಕೈ ಇರಲಿದ್ದಾರೆ 

ಯಕ್ಷಗಾನ “ದಕ್ಷಯಜ್ಞ” ಯಾವ ಕಲಾವಿದರು ಇರಲಿದ್ದಾರೆ?

(ಮೇ 26 ರವಿವಾರ ರಾತ್ರಿ 10:00 ಗಂಟೆಗೆ)

   
ರಾತ್ರಿ 10 ರಿಂದ - ಬಡಗುತಿಟ್ಟಿನ ಸುಪ್ರಸಿದ್ದ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಪ್ರದರ್ಶನ "ದಕ್ಷಯಕ್ಷ” ನಡೆಯಲಿದೆ. ಹಿಮ್ಮೇಳ ಶಂಕರ ಭಟ್ಟ, ಬ್ರಹ್ಮೂರು, ಸುನೀಲ ಭಂಡಾರಿ, ಕಡತೋಕ ಗಜಾನನ ಸಾಂತೂರ ಇರಲಿದ್ದಾರೆ ಮುಮ್ಮೇಳ ದಲ್ಲಿ ಗೋಪಾಲ ಆಚಾರಿ, ಶಶಿಕಾಂತ ಶೆಟ್ಟಿ, ಅಶೋಕ ಭಟ್ಟ, ಸಿದ್ದಾಪುರ, ಸಂಜಯ ಬಿಳಿಯೂರು, ನಾಗೇಂದ್ರ ಮುರೂರು ಚಂದ್ರಹಾಸ ಗೌಡ, ಹೊಸಪಟ್ನ, ಮಹಾಬಲೇಶ್ವರ ಗೌಡ ಪ್ರದರ್ಶನ ನೀಡಲಿದ್ದಾರೆ 

ನೂತನ ಮೂರ್ತಿ ಪ್ರತಿಷ್ಠಾ ಕಾರ್ಯಕ್ರಮ ಎನ್ನುವುದು ಒಬ್ಬ ವ್ಯಕ್ತಿಯ ಜೀವನದಲ್ಲಿ ನೋಡಲೇಬೇಕಾದಂತಹ ಒಂದು ಅಮೂಲ್ಯ ಕ್ಷಣ. ಶಿರಸಿ ಸುತ್ತಮುತ್ತಲಿನ ಎಲ್ಲಾ ಸಾರ್ವಜನಿಕರು ಸದ್ಭಕ್ತರು ಮೇ 24 ರಿಂದ ಮೇ 26 ರ ವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕೋರಿದೆ 

ಶ್ರೀ ದೇವರಿಗೆ ಸೇವೆ ಸಲ್ಲಿಸುವವರು, ದೇಣಿಗೆ ನೀಡುವವರ ಗಮನಕ್ಕೆ

ದೇವಸ್ಥಾನದ ಬ್ಯಾಂಕ್ ವಿವರ

A/c. Name: Shree Laxminarayana Shree Panchalingeshwara

Bank of Baroda

A/c No.: 84610100004517

IFSC BARBOVJHEGD (5th letter Zero)

ಸಂಪರ್ಕ ಸಂಖ್ಯೆ 

ಮಧುಕೇಶ್ವರ ಹೆಗಡೆ ಕೊರ್ಟಿಬೈಲ್ 9480790847

ಕೃಷ್ಣ ಹೆಗಡೆ ಕಮಟಿ 9449059686

ಮಂಜುನಾಥ ಹೆಗಡೆ ಶಾಂತಿಧಾಮ 9845970779

ಪ್ರತಿಕ್ರಿಯೆ

Post a Comment

0 Comments