Hot Posts

6/recent/ticker-posts

ಮಾವಿನ ಹಣ್ಣಿನ ಕಾಯಿ ಉಂಡೆ

ಮಾವಿನ ಹಣ್ಣಿನ ಕಾಯಿ ಉಂಡೆ

ಬೇಕಾಗುವ ಸಾಮಗ್ರಿಗಳು.

1ತೆಂಗಿನ ಕಾಯಿ

2 ಮಾವಿನ ಹಣ್ಣು

1 ಕಪ್ ಹಾಲಿನ ಪೌಡರ್

ಏಲಕ್ಕಿ, 1 ಕಪ್ ಸಕ್ಕರೆ.

ಮಾಡುವ ವಿಧಾನ

ತೆಂಗಿನ ಕಾಯಿಯನ್ನು ಒಡೆದು ಚಿಕ್ಕ ಚೂರುಗಳನ್ನು ಮಾಡಿಕೊಳ್ಳಬೇಕು. ಚುರುಗಳನ್ನು ತೆಂಗಿನ ಚಿಪ್ಪಿನಿಂದ ಬೇರ್ಪಡಿಸಿ, ಚೂರುಗಳ ಕಂದು ಭಾಗವನ್ನು ಕೆತ್ತಿ ತೆಗೆಯಬೇಕು(ಕಾಯಿಯ ಬಿಳಿ ಭಾಗವನ್ನು ಮಾತ್ರ ತೆಗೆದುಕೊಳ್ಳಿ ). ನಂತರ ಚೂರು ಗಳನ್ನು ಮಿಕ್ಸಿಗೆ ಹಾಕಿ ಪುಡಿ ಮಾಡಿಕೊಳ್ಳಿ. ಹಾಗೆ ಮಾವಿನ ಹಣ್ಣು ಮತ್ತು ಸಕ್ಕರೆ, 1 ಅಥವಾ 2 ಏಲಕ್ಕಿ ಹಾಕಿ ರುಬ್ಬಿ ಇಟ್ಟುಕೊಳ್ಳಿ. ರುಬ್ಬಿದ ಕಾಯಿ ಪುಡಿ ಯನ್ನು ಬಾಣಲೆಗೆ ಹಾಕಿ ತಿರುವುತ್ತಿರಬೇಕು. 5 ನಿಮಿಷದಲ್ಲಿ ಬಳಿಕ ರುಬ್ಬಿದ ಮಾವಿನಹಣ್ಣಿನ ಮಿಶ್ರಣವನ್ನು ಸೇರಿಸಿ 10 ನಿಮಿಷದ ನಂತರ ಹಾಲಿನ ಪೌಡರ್ ಹಾಕಬೇಕು. ಪಾತ್ರೆಯ ತಳ ಹಿಡಿಯದಂತೆ ತಿರುವುತ್ತಲೇ ಇರಬೇಕು. 5 ನಿಮಿಷದಲ್ಲಿ ಉಂಡೆ ಹದ ಬರುತ್ತದೆ ಅದನ್ನು ಸ್ಟೋವ್ ಇಂದ ಇಳಿಸಿ ಉಂಡೆ ಅಥವಾ ಬರ್ಫಿ  ಮಾಡಿಕೊಳ್ಳಬಹುದು. ಉಂಡೆಯ ಮೇಲಿಂದ ಕಾಯಿ ಪುಡಿ ಅಥವಾ ಸಕ್ಕರೆ ಪುಡಿ ಯನ್ನು  ಉದುರಿಸಬಹುದು.

ಇದರಿಂದ ಹೋಳಿಗೆ ಅಥವಾ ಕರ್ಜಿಕಾಯಿ ಹೂರಣವಾಗಿಯೂ ಬಳಸಬಹುದು.



ಆಶ್ರಿತಾ ಹೆಗಡೆ ತುಂಬೆಮನೆ 

ಪ್ರತಿಕ್ರಿಯೆ

Post a Comment

0 Comments