ಕುಸುಮಕ್ಕಳ ಮನೆ ಬಾಗಿಲಿನಲ್ಲಿ ಕಾಯುತಿದ್ದ ಜೋಡಿ ಬೊಚ್ಚಮ್ಮ ಮತ್ತು ಬೀರಪ್ಪ. ಬಾಗಿಲಿಗೆ ಇನ್ನೂ ಹತ್ತಿರವಾದಂತೆ ಯಾರಿವರು ? ಎಂದು ಆಲೋಚಿಸುತ್ತ ಅವಳು ನಮ್ಮನ್ನೇ ದಿಟ್ಟಿಸಿ ನೋಡುತ್ತಿರುವಂತೆ ಭಾಸವಾಯಿತು. ನಾವು ನೋಡಿದ್ದು ಹೊಂಬಾಳೆ ಬೊಚ್ಚಮ್ಮ ಮತ್ತು ಬೀರಪ್ಪ! ಅವರೆಲ್ಲ ಮತ್ಯಾರು ಅಲ್ಲ ಮಾನವ ನಿರ್ಮಿತ ಬೊಂಬೆಗಳು. ಕಲಗಾರ ಕುಸುಮಕ್ಕ ತಯಾರಿಸಿದ ಕಲಾಕೃತಿ !.
ಕುಸುಮಾ ವೆಂಕಟ್ರಮಣ ಭಟ್ಟ ಶಿರಸಿಯಿಂದ ಸುಮಾರು ಐದು ಕಿ.ಮೀ ದೂರದ ಕಲಗಾರ ಒಡ್ಡು ಊರಿನವರು. ‘ಹೊಂಬಾಳೆ’ ಅಡಿಕೆ ತೋಟದಲ್ಲಿ ಅಡಿಕೆ ಮರಕ್ಕೆ ಸಿಂಗಾರ (ಹೂ) ಅರಳುವ ಸಮಯದಲ್ಲಿ ದೊರಕುವ ವಸ್ತು. ಹೊಂಬಾಳೆಗಳನ್ನು ಆಯ್ದು ತಂದು ಅವುಗಳನ್ನು ಬಿಸಿಲಿನಲ್ಲಿ ಒಣಗಿಸಿ ಸುಂದರ ವಸ್ತುಗಳನ್ನು ತಯಾರಿಸುತ್ತಾರೆ. ಹೊಂಬಾಳೆಗಳಿoದ ಹಲವು ಕಲಾಕೃತಿಗಳನ್ನು ತಯಾರಿಸಿದ್ದಾರೆ ಕುಸುಮಾ. ಬೂಚ್ಚ ಬಾಯಿಯ ಅವರನ್ನು ಬೊಚ್ಚಮ್ಮ ಮತ್ತು ಬೀರಪ್ಪ ಎಂದು ಹೆಸರಿಸುತ್ತಾರೆ.
0 Comments