Hot Posts

6/recent/ticker-posts

ಸಸ್ಯ ಪ್ರೇಮಿಯೊಬ್ಬರ ಸಮಾಜಮುಖಿ ಲೈಫ್..

ಶಿರಸಿಯ ಸಸ್ಯಪ್ರೇಮಿಯೊಬ್ಬರ ಸಮಾಜಮುಖೀ ಕೆಲಸವನ್ನು ಗಮನಿಸಿದರೆ  ಪರಿಸರಕ್ಕಾಗಿ ಅವರು ಕಳೆದ 25 ವರ್ಷಗಳಿಗೂ ಹೆಚ್ಚು  ವರ್ಷಗಳಿಂದ ನಡೆಸಿಕೊಂಡು ಬಂದಿರುವ ಸೇವೆಯ ಪರಿ ನಿಮಗೆ ಆಶ್ಚರ್ಯ ತರಿಸುತ್ತದೆ. ಸಾಮಾನ್ಯವಾಗಿ ಮಳೆಗಾಲದ ಸಮಯದಲ್ಲಿ ಹಣ್ಣು, ಹಂಪಲು ಅಥವಾ ಬೇರಾವುದೋ ಗಿಡಗಳನ್ನು ಮಾರಾಟ ಮಾಡುವವರು, ಸರಕಾರದ ವತಿಯಿಂದ ಗಿಡ ಪಡೆದು ನೆಡುವವರು ಸಾಕಷ್ಟು ಇದ್ದಾರೆ. ಆದರೆ ನಂತರ ಸಸಿಯ ಆರೈಕೆ ಅಥವಾ ಬೆಳವಣಿಗೆಯ ಬಗ್ಗೆ ಗಮನ ಕೊಡದಿರುವವರೇ ಹೆಚ್ಚು.

ಳಗಿನ ಓಣಿಕೇರಿ ಗ್ರಾಮದ ದೇವರಗದ್ದೆ ಊರಿನ ಗುರುಪಾದ ಹೆಗಡೆ ಗುರುತಿಸಬಹುದಾದ ವ್ಯಕ್ತಿತ್ವ. ಅವರ ಮನೆಯಲ್ಲಿ ಹದಿಮೂರಕ್ಕೂ ಹೆಚ್ಚಿನ ತಳಿಯ ಮಾವಿನ ಗಿಡವನ್ನು ತಯಾರು ಮಾಡಿದ್ದಾರೆ. ಎಗ್ ಫ್ರೂಟ್, ಗಮ್ ಲೆಸ್ ಹಲಸು ಗಿಡಗಳನ್ನು ತಯಾರು ಮಾಡಿದ್ದಾರೆ.  ಇಲ್ಲೊಂದು ವಿಶೇಷವೆಂದರೆ ಸಾವಿರ ಸಾವಿರ  ಗಿಡಗಳು ಇವರ ಆರೈಕೆಯಲ್ಲಿ ಇಂದು ಬೆಳೆಯಲ್ಪಟ್ಟಿವೆ. ಬಹಳಷ್ಟು ಜನರಿಗೆ ಗಿಡ ನೆಡುವ ಹಾಗೂ ಆರೈಕೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಗಿಡ ನೆಡುವ, ನೀಡುವ ಪರಿಸರ ಪ್ರೇಮ ಇಷ್ಟಕ್ಕೇ ಮುಗಿದಿಲ್ಲ ಮತ್ತೆ ಅವರ ಮನೆಗೆ ಹೋಗಿ ಗಿಡದ ಬೆಳವಣಿಗೆ ಕಂಡು ಹರ್ಷಚಿತ್ತರಾಗುತ್ತಾರೆ. ಇಲ್ಲವೇ ಗಿಡ ಕೊಟ್ಟವರು ಸಿಕ್ಕಾಗ ಗಿಡ ಫಲ ನೀಡುತ್ತಿದೆಯೇ ? ಪ್ರಶ್ನಿಸುತ್ತಾರೆ.

' ಗಿಡ  ಚೆನ್ನಾಗಿ ಆರೈಕೆ ಮಾಡಿ, ನಂತರ ನಾನು ಕೇಳ್ತೀನಿ ಗಿಡ ಫಲ ಬಿಡುತ್ತಿದೆಯಾ ಅಂತ’ ಅನ್ನುವ ಅವರ ಆಶಯ ನಿಜಕ್ಕೂ ಅಭಿನಂದನಾರ್ಹ ವಿಚಾರ. ಗಿಡವನ್ನು  ಸಸ್ಯ ಸಂಕುಲಕ್ಕೆ ಅಪಾರವಾದ ಶಕ್ತಿಯಿದೆ, ಪ್ರಾಣಿ ಪಕ್ಷಿಗಳಿಗೆ ಅದರಿಂದ ಆಶ್ರಯ ಜೊತೆಗೆ ಆಹಾರ ಸಿಗುವಂತಾಗುತ್ತದೆ ಮತ್ತು ನಮಗೂ ಕೂಡ ಅನ್ನುವಾಗ ಅವರ ಮುಖದಲ್ಲಿ ಮಂದಹಾಸ. ಕೃಷಿ ಕೂಲಿ ಸಮಸ್ಯೆಯ ನಡುವೆ ಇಂತಹ ಗಿಡಗಳನ್ನು ನೆಟ್ಟು ಬೆಳೆಸುವದರಿಂದ, ಅದರ ಉಪ ಉತ್ಪನ್ನದಿಂದ ಆದಾಯ ದೊರೆಯುತ್ತದೆ. ಇಂತಹ ಗಿಡಗಳ ಆರೈಕೆಗೆ ತಗಲುವ ಖರ್ಚು ಕೂಡ ಕಡಿಮೆ ಎನ್ನುತ್ತಾರೆ.

 ಸಾಹಿತ್ಯ ಪ್ರೇಮಿ ಇವರು

 ಶಿರಸಿಯ ಸ್ವರ್ಣವಲ್ಲೀ ಮಠದ ಮಾಸಪತ್ರಿಕೆ ‘ಸ್ವರ್ಣವಲ್ಲಿ ಪ್ರಭಾ’ ದಲ್ಲಿ ಗುರುಪಾದ ಹೆಗಡೆಯವರು ಭಾಮಿನೀ ಷಟ್ಪದಿಯಲ್ಲಿ ಬರೆದಿರುವ ‘ಗಣಪ ಚರಿತ್ರೆ’ ಧಾರಾವಾಹಿಯಾಗಿ ಪ್ರಕಟವಾಗಿದೆ. ಕವನಗಳನ್ನು ರಚಿಸುವ ಹವ್ಯಾಸವೂ ಇದೆ. ಸ್ವರ್ಣವಲ್ಲೀ ಮಠದ ಶ್ರೀ ಗಂಗಾಧರೇoದ್ರ ಸರಸ್ವತೀ ಸ್ವಾಮಿಗಳವರ ಆಶೀರ್ವಾದ ಸಿಕ್ಕಿದ್ದು ಇವರಿಗೆ ಜೀವನದಲ್ಲಿ ಮರೆಯಲಾರದ ಸಂತಸದ ಘಳಿಗೆ.

ಆರೈಕೆ ಮಾಡುವವರಿಗೆ ಮಾತ್ರವೇ ಗಿಡ

 ಎಲ್ಲಿಯೋ ರಸ್ತೆ ಬದಿಯಲ್ಲಿ ಅವರು ಗಿಡವನ್ನು ನೆಟ್ಟಿಲ್ಲ. ಅಥವಾ ಕಾಡಿನಲ್ಲಿ ಕೂಡ. ತಾವು ರೂಪಿಸಿದ ಗಿಡ ಅನಾಥವಾಗಬಾರದು, ಅದರ ಉತ್ಪನ್ನ ಕೂಡ. ಗಿಡವೊಂದು ಆರೈಕೆ ಮಾಡುವ ಮನಸ್ಸಿರುವವರ ಬಳಿಯೇ ಹೋಗಬೇಕು ಅನ್ನುವ ಅವರ ಲಾಜಿಕ್ ಹಿಂದೆ ಮಹತ್ತರವಾದಂತಹ ಆಸೆಯಿದೆ. ಬದುಕಿ, ಫಲದಿಂದ ತುಂಬಿ ಹರ್ಷಚಿತ್ತವಾಗಿ ನಲಿಯುವ ಮರವನ್ನು ನೋಡುವ ಹಂಬಲವಿದೆ. ಆಶ್ರಯ, ಆಹಾರ ಸಿಕ್ಕು ಸಂತಸದಿoದ ಹಾರಾಡುವ ಹಕ್ಕಿ, ಪಕ್ಷಿಗಳ ನೋಡುವ ತುಮುಲವಿದೆ. ಇಂತಹ ಪರಿಸರ ಪ್ರೇಮಿ ಗುರುಪಾದ ಹೆಗಡೆ ಅವರು ಪತ್ನಿ ಸುನಂದಾ ಹಾಗೂ ಮಗ ವಿನಾಯಕ ಹೆಗಡೆಯವರ ಪ್ರೋತ್ಸಾಹ, ಸೊಸೆ ಪಲ್ಲವಿ ಅವರ ಅಕ್ಕರೆಯ ಸಹಕಾರ ಅವರ ಶಕ್ತಿ. ಗಿಡ ಮರಗಳು, ಹಕ್ಕಿ, ಪಕ್ಷಿಗಳು ಸಂತಸದಿoದ ನಲಿಯಲು ಕಾರಣರಾದ ಅವರು ನಮಗೆ ನಿಜಕ್ಕೂ ಮಾದರಿ. ಸಂಪರ್ಕ ಸಂಖ್ಯೆ Gurupad Hegde Devargadde 08283240048

ಹಂಸ ನ್ಯೂಸ್ ಗುಂಪು ಸೇರಲು ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯೆ

Post a Comment

0 Comments