ಶಿರಸಿ: ತಾಲೂಕಿನ ಪ್ರತಿಷ್ಠಿತ ಸಂಗೀತ ವಿದ್ಯಾಲಯಗಳಲ್ಲಿ ಒಂದಾದ ಸ್ವರಾಂಜಲಿ ಮ್ಯೂಸಿಕ್ ಫೋರಂ ಗಾಂಧಿನಗರ ಇದರ ವಾರ್ಷಿಕ ಸ್ನೇಹ ಸಮ್ಮೇಳನ ದಿನಾಂಕ : 25-01-2026, ಭಾನುವಾರ ಸಂಜೆ 3.00 ಗಂಟೆಯಿಂದ ನಯನ ಸಭಾಂಗಣ, ಗಣೇಶ ನೇತ್ರಾಲಯ, ಶಿರಸಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವoಭರ ಟಿವಿ ಸಂಪಾದಕರಾದ ಅನಂತಮೂರ್ತಿ ಹೆಗಡೆ ವಹಿಸಲಿದ್ದಾರೆ. ಮನುವಿಕಾಸ ಸಂಸ್ಥೆಯ ಗಣಪತಿ ಭಟ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಇದೇ ಸಂದರ್ಭದಲ್ಲಿ 'ಪ್ರಣತಿ' ಹಿಂದೂಸ್ಥಾನಿ ಸಂಗೀತ ಭಾಗ-2 ಪುಸ್ತಕ ಲೋಕಾರ್ಪಣೆ ಗೊಳ್ಳಲಿದೆ. ಸಂಜೆ 4:00 ಯಿಂದ ಸಂಗೀತ ಶಾಲೆಯ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಂದ ಗಾಯನ ವೈವಿಧ್ಯ ನಡೆಯಲಿದೆ. ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಬೇಕೆಂದು ಸಂಘಟಕರು, ಶಿಕ್ಷಕಿ ಆಗಿರುವ ವೀಣಾ ಜೋಶಿ ಕೋರಿದ್ದಾರೆ

0 Comments