Hot Posts

6/recent/ticker-posts

ಜನವರಿ 26 ಹಿರಿಯ ನಾಗರಿಕರ ಸಂಘಟನೆ ಪ್ರಥಮ ವಾರ್ಷಿಕೋತ್ಸವ

  
ಹಿರಿಯ ನಾಗರಿಕರ ಸಂಘಟನೆ (ಹಿನಾಸಂ) ಶಿರಸಿ ಇದರ ಪ್ರಥಮ ವಾರ್ಷಿಕೋತ್ಸವ ಮತ್ತು ಗಣರಾಜ್ಯೋತ್ಸವ 

ಶಿರಸಿಯ ನೆಮ್ಮದಿ ಕುಟೀರದ ಆವರಣದಲ್ಲಿ ಇದೆ ಬರುವ 26-01-2026 ಸೋಮವಾರದಂದು ಬೆಳಿಗ್ಗೆ 9:00 ಗಂಟೆಗೆ ಹಿರಿಯ ನಾಗರಿಕರ ಸಂಘಟನೆ (ಹಿನಾಸಂ) ಶಿರಸಿ ಇದರ ಪ್ರಥಮ ವಾರ್ಷಿಕೋತ್ಸವ ಮತ್ತು ಗಣರಾಜ್ಯೋತ್ಸವ ಜರುಗಲಿದೆ. ಶಿರಸಿಯ ಜೀವಜಲ  ಕಾರ್ಯಪಡೆ ಅಧ್ಯಕ್ಷರಾದ ಶ್ರೀನಿವಾಸ್ ಹೆಬ್ಬಾರ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವ ಈ ಕಾರ್ಯಕ್ರಮದಲ್ಲಿ ಸಾಮಾಜಿಕ ಧುರೀಣರು, ಉದ್ಯಮಿಗಳು ಆದ ಉಪೇಂದ್ರ ಪೈ ಮತ್ತು ಶಿರಸಿಯ ನೆಮ್ಮದಿ ಸಂಕೀರ್ಣದ ವ್ಯವಸ್ಥಾಪಕರು ಮತ್ತು ಸಾಮಾಜಿಕ ಕಾರ್ಯಕರ್ತರು ಆದ  ವಿ.ಪಿ. ಹೆಗಡೆ ವೈಶಾಲಿ ಇವರುಗಳು ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿರುವರು. ಸಂಸ್ಥೆಯ ಅಧ್ಯಕ್ಷ ಎಮ್.ಎನ್ ಹೆಗಡೆ ಹಲಸಿನಹಳ್ಳಿ ಇವರು 77ನೇ ಗಣರಾಜ್ಯೋತ್ಸವದ ದ್ವಜಾರೋಹಣ ಮಾಡಿ ನಂತರದ ಸಭೆಯ ಅಧ್ಯಕ್ಷತೆ ವಹಿಸಲಿರುವರು. ಈ ಸಂದರ್ಭದಲ್ಲಿ ಕೆಲವು ಸಂಘದ ಹಿರಿಯ ಸದಸ್ಯರನ್ನು ಗೌರವಿಸಲಾಗುವುದು. 

ಸುಬಾಶಚಂದ್ರ ಕಾರ್ಯಪಡೆ ಶಿರಸಿ (ಸುಕಾಶಿ) ಇದರ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಆಮಂತ್ರಿತರಾಗಿ ಪಾಲ್ಗೊಳ್ಳಲಿದ್ದಾರೆ. ಶಿರಸಿಯ ಮತ್ತು ಸರಹದ್ದಿನ ಹಿರಿಯ ನಾಗರಿಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಅಧ್ಯಕ್ಷ ಎಮ್ ಎನ್ ಹೆಗಡೆ ಹಲಸಿನಹಳ್ಳಿ ಮತ್ತು ಕಾರ್ಯದರ್ಶಿ  ಡಿ.ಎಸ್ ಹೆಗಡೆ, ಎಸ್.ಪಿ ಹೆಗಡೆ ಇವರುಗಳು ವಿನಂತಿಸಿದ್ದಾರೆ. 

ಪ್ರತಿಕ್ರಿಯೆ

Post a Comment

0 Comments