ಈ ವರ್ಷದ ಆರೋಹಿ ಸಾಧಕ ಪ್ರಶಸ್ತಿಗೆ ಭಾಜನರಾದ ಡಾ|| ಹರೀಶ ಹೆಗಡೆ, ಪ್ರಾಚಾರ್ಯರು, ಸ್ವರಾತ್ಮ ಗುರುಕುಲ,ವಿಷ್ಣುಗುಪ್ತ ವಿಶ್ವವಿದ್ಯಾಲಯ, ಅಶೋಕೆ, ಗೊಕರ್ಣ ಇವರನ್ನು ಮಾನ್ಯ ಶಾಸಕರುಗಳಾದ ಭೀಮಣ್ಣ ನಾಯ್ಕ, ಶಿವರಾಂ ಹೆಬ್ಬಾರ, ಉದ್ಯಮಿಗಳಾದ ಉಪೇಂದ್ರ ಪೈ, ಅನಂತಮೂರ್ತಿ ಹೆಗಡೆ, ಕೆ.ಬಿ. ಲೋಕೇಶ ಹೆಗಡೆ, ನಿವೃತ್ತ ಶಿಕ್ಷಕರಾದ ಎಸ್.ಎನ್. ಭಟ್ ಹಾಗೂ ಪತ್ರಕರ್ತರಾದ ಕೃಷ್ಣಮೂರ್ತಿ ಕೆರೆಗದ್ದೆ ಇವರ ಉಪಸ್ಥಿತಿಯಲ್ಲಿ ಸನ್ಮಾನಿಸಲಾಗುವುದು. ಆಹ್ವಾನಿತ ಕಲಾವಿದರುಗಳಾಗಿ ಅಶ್ವಿನ್ ವಾಲ್ವಾಲ್ಕರ್ ಸಂತೂರ್, ನಿರಂಜನ ಹೆಗಡೆ ಕೊಳಲು, ಗಣೇಶ ಗುಂಡ್ಕಲ್ ತಬಲಾದ ನಾದ-ನಿನಾದ-ಸಂಗೀತ ಜುಗಲ್ ಬಂದಿ ಕಾರ್ಯಕ್ರಮ 24-1-2026 ರಂದು ಸಂಜೆ 7ಕ್ಕೆ , ದಿನಾಂಕ 25-1-2026 ರಂದು ಮಧ್ಯಾಹ್ನ 12 ಕ್ಕೆ ವಿದುಷಿ ದೀಪಾ ಶಶಾಂಕ ಹೆಗಡೆ ಅವರ ಗಾಯನ
ಸಂಜೆ 5 ಕ್ಕೆ ವಿನಾಯಕ ಸಾಗರ ಇವರಿಂದ ತಬಲಾ ಸೋಲೊ ನಂತರದಲ್ಲಿ ಆರೋಹಿ ಸಾಧಕ ಪ್ರಶಸ್ತಿ ಪ್ರಧಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ, ಕೊನೆಯಲ್ಲಿ ಡಾ|| ಹರೀಶ ಹೆಗಡೆಯವರ ಗಾಯನ ಕಾರ್ಯಕ್ರಮಗಳಿರುತ್ತದೆ. ಅಜಯ ವರ್ಗಾಸರ ಸಂವಾದಿನಿ ಹಾಗೂ ಗಣೇಶ ಗುಂಡ್ಕಲ್ ತಬಲಾ ಸಹಕಾರವಿದೆ. ನಿರಂತರ ಹದಿನೆಂಟು ಗಂಟೆಗಳ ವಿದ್ಯಾರ್ಥಿಗಳ ಗಾಯನ- ವಾದನಗಳಿಗೆ ಸುಬ್ಬಣ್ಣ ಮಂಗಳೂರು, ಶಿವರಾಂ ಹೆಗಡೆ, ಚಿನ್ಮಯ ಕೆರೆಗದ್ದೆ ತಬಲಾ ಸಹಕಾರ ನೀಡಲಿದ್ದಾರೆ. ಆರೋಹಿ ಪಾಲಕ ಬಳಗ, ಶಿರಸಿಯ ನೆಮ್ಮದಿ ಪರಿವಾರ, ಶ್ರೀಪ್ರಭಾ ಸ್ಟುಡಿಯೊ, ಉದಯ ಸೌಂಡ್ಸ್ ಸಹಯೋಗದಲ್ಲಿ ಈ ಕಾರ್ಯಕ್ರಮ ಸಂಘಟಿಸಲಾಗಿದೆ. ಸಂಗೀತಾಸಕ್ತ ಕಲಾಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲು, ಯುವ ಕಲಾವಿದರನ್ನು ಹರಸುವಂತೆ ಸಂಸ್ಥೆಯ ಅಧ್ಯಕ್ಷರಾದ ಶಶಾಂಕ ಹೆಗಡೆ, ಕಾರ್ಯದರ್ಶಿಗಳಾದ ವಿದುಷಿ ದೀಪಾ ಶಶಾಂಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



0 Comments