Hot Posts

6/recent/ticker-posts

ಮೃತ ರಾಮಚಂದ್ರ ಗೌಡ ಕೆಳಾಸೆ ಮನೆಗೆ ಬಿಜೆಪಿ ಮುಖಂಡ ಅನಂತಮೂರ್ತಿ ಭೇಟಿ; ಸಾಂತ್ವನ, ಧನಸಹಾಯ

ಶಿರಸಿ: ತಾಲೂಕಿನ ಗ್ರಾಮಾಂತರ ಭಾಗವಾದ ಸಾಲಕಣಿ ಕೆಳಾಸೆಯ ರಾಮಚಂದ್ರ ರಾಮೇ ಗೌಡ ಅವರು ಇತ್ತೀಚಿಗೆ ಕೃಷಿ ಕೆಲಸದಲ್ಲಿರುವಾಗ ಅಡಕೆ ಮರದಿಂದ ಬಿದ್ದು, ಮೃತರಾಗಿದ್ದು, ಅವರ ಮನೆಗೆ ಬುಧವಾರ ಅನಂತಮೂರ್ತಿ ಹೆಗಡೆ ಭೇಟಿ ನೀಡಿ, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ, ಧನ ಸಹಾಯ ಮಾಡಿದರು.

ಅಡಕೆ ಕೊನೆ ಕೊಯ್ಯುವಾಗ ಮರ ಅರ್ಧಕ್ಕೆ ತುಂಡಾದ ಪರಿಣಾಮ ಮರದಿಂದ ಬಿದ್ದು ಮೃತರಾಗಿರುವುದು ದುರದೃಷ್ಟಕರವಾದ ಘಟನೆಯಾಗಿದೆ. ಕುಟುಂಬಕ್ಕೆ ಆಧಾರವಾಗಿರುವ ಯಜಮಾನ ಹೀಗೆ ದುರ್ಘಟನೆಗೆ ತುತ್ತಾಗಿದ್ದು ತೀವ್ರ ನೋವನ್ನುಂಟುಮಾಡಿದೆ. ನಿಮ್ಮ ಕುಟುಂಬದ ಜೊತೆಗೆ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರಾಗಿ ನಾವೆಲ್ಲರೂ ಸದಾ ಜೊತೆಗಿರಲಿದ್ದಾರೆ ಎಂದು ಅವರು ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.


ಈ ವೇಳೆ ಸ್ಥಳೀಯರಾದ ಸತೀಶ ಹೆಗಡೆ ಮುರೇಗಾರ್, ಕೃಷ್ಣಮೂರ್ತಿ ಮುರೇಗಾರ್, ನಾಗರಾಜ ಹೆಗಡೆ ಕಡಕಿನಬೈಲು, ವೆಂಕಟರಮಣ ಕೆಳಾಸೆ, ವಿನಾಯಕ ಪೂಜಾರಿ, ಈಶ್ವರ ಗೌಡ ಕೆಳಾಸೆ ಇದ್ದರು.

ಪ್ರತಿಕ್ರಿಯೆ

Post a Comment

0 Comments