ಶಿರಸಿ: ನಗರದಲ್ಲಿ ಈಗಾಗಲೇ ತಮ್ಮ ಅನನ್ಯ ಸೇವೆಯ ಮೂಲಕ ಗಮನ ಸೆಳೆದಿರುವ ಅಮೋಘ ಮೋಟಾರ್ಸ್ 2.75 ಲಕ್ಷ ರೂ. ಮೌಲ್ಯದ ಬ್ಯಾಟರಿ ಚಾಲಿತ ಇ-ಅಗ್ರಿಕಾರ್ಟ್‌ನ್ನು ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳ ಹಾಗೂ ಶ್ರೀಮದ್ ಆನಂದ ಬೋಧೇಂದ್ರ ಸರಸ್ವತೀ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ಶ್ರೀ ಸ್ವರ್ಣವಲ್ಲಿ ಮಹಾಸಂಸ್ಥಾನಕ್ಕೆ ಕೊಡುಗೆಯಾಗಿ ಸಮರ್ಪಿಸಿದರು.
ಅಮೋಘ ಮೋಟಾರ್ಸ್‌ನ ಮಾಲಕರಾದ ಹಿತ್ತಳ್ಳಿ ಕುಂಬಾರ ಜಡ್ಡಿಯ ಸಂತೋಷ ಹೆಬ್ಬಾರ್ ಮತ್ತು ಗುಂಡಾನಜಡ್ಡಿಯ ಮಹಾಬಲೇಶ್ವರ ಭಟ್ಟ ಹಾಗೂ ಕುಟುಂಬದವರನ್ನು ಉಭಯ ಶ್ರೀಗಳು ಗೌರವ ಮಂತ್ರಾಕ್ಷತೆಗಳೊಂದಿಗೆ ಹರಸಿದರು. ಈ ಸಂದರ್ಭದಲ್ಲಿ ಸ್ವರ್ಣವಲ್ಲಿ ಕೃಷಿ ಪ್ರತಿಷ್ಠಾನದ ಅಧ್ಯಕ್ಷ ಆರ್ ಎನ್ ಹೆಗಡೆ ಉಳ್ಳಿಕೊಪ್ಪ, ಕಾರ್ಯದರ್ಶಿ ಸುರೇಶ್ ಹಕ್ಕಿಮನೆ ,ಮಹಾಸಂಸ್ಥಾನದ ವ್ಯವಸ್ಥಾಪಕ ಎಂ ಎನ್ ಹೆಗಡೆ ಕಿಬ್ಬಳ್ಳಿ ಉಪಸ್ಥಿತರಿದ್ದರು.

0 Comments