Hot Posts

6/recent/ticker-posts

ಶಿರಸಿಯ ಒಂದು ಅಂಗಡಿ, ಒಂದು ಸಂಪ್ರದಾಯ, ಅನೇಕ ಉಪಕಾರಗಳು:

             

ಶಿರಸಿಯ ಒಂದು ಅಂಗಡಿ, ಒಂದು ಸಂಪ್ರದಾಯ, ಅನೇಕ ಉಪಕಾರಗಳು:

ಡಾ. ರವಿಕಿರಣ ಪಟವರ್ಧನ

ಪಟವರ್ಧನ ಆಯುರ್ವೇದ ಕ್ಲಿನಿಕ್

ಹೋಸಪೇಟೆ ರಸ್ತೆ, ಶಿರಸಿ – 581401

📞 08384 225836

ಪ್ರತಿ ವರ್ಷ ಇಸವಿ ವರ್ಷ ಬದಲಾದೊಡನೆ ಹೊಸ ಕ್ಯಾಲೆಂಡರ್ ಬಳಸುವ ಪದ್ಧತಿ ನಮ್ಮ ಸಮಾಜದಲ್ಲಿ ಪುರಾತನ ಕಾಲದಿಂದಲೂ ನಡೆದು ಬಂದಿರುವ ಒಂದು ಸುಂದರ ಸಂಪ್ರದಾಯ. ವಿವಿಧ ಸಂಘ–ಸಂಸ್ಥೆಗಳು, ಅಂಗಡಿ ಮುಂಗಟ್ಟುಗಳು ಹಾಗೂ ಸಹಕಾರಿ ಸಂಸ್ಥೆಗಳು ತಮ್ಮ ಗ್ರಾಹಕರಿಗೂ ಸದಸ್ಯರಿಗೂ ಕ್ಯಾಲೆಂಡರ್‌ಗಳನ್ನು ಮುದ್ರಿಸಿ ವಿತರಿಸುವ ರೂಢಿ ಇನ್ನೂ ಜೀವಂತವಾಗಿದೆ.

ಇಂದಿನ ಡಿಜಿಟಲ್ ಹಾಗೂ ಎಲೆಕ್ಟ್ರಾನಿಕ್ ಯುಗದಲ್ಲಿ ಮೊಬೈಲ್ ಮತ್ತು ಕಂಪ್ಯೂಟರ್‌ಗಳಲ್ಲೇ ದಿನಾಂಕಗಳು ಲಭ್ಯವಿದ್ದರೂ, ಕ್ಯಾಲೆಂಡರ್‌ಗೆ ಇದ್ದ ಮಹತ್ವ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿರುವುದು ಸತ್ಯ. ಆದರೂ ಸಹ, ಸಂಪ್ರದಾಯದ ಗೌರವ ಹಾಗೂ ಸಾಮಾಜಿಕ ಬಾಂಧವ್ಯವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅನೇಕ ಸಂಸ್ಥೆಗಳು ಈ ವಾಡಿಕೆಯನ್ನು ಇಂದಿಗೂ ಮುಂದುವರಿಸಿಕೊಂಡು ಬಂದಿರುವುದು ಶ್ಲಾಘನೀಯ.

ಇಡೀ ಕರ್ನಾಟಕದಲ್ಲೇ ಅತ್ಯಂತ ವಿಭಿನ್ನವಾಗಿ ಹಾಗೂ ಅರ್ಥಪೂರ್ಣವಾಗಿ ಕ್ಯಾಲೆಂಡರ್ ಮುದ್ರಿಸುವ ಕೆಲವೇ ಕೆಲವು ಸಂಸ್ಥೆಗಳಲ್ಲಿ, ಶಿರಸಿಯ ಹೊಸಪೇಟೆ ರಸ್ತೆಯ ರವಿ ಪಾನ್ ಸೆಂಟರ್ ವಿಶೇಷವಾಗಿ ಗಮನ ಸೆಳೆಯುತ್ತದೆ. ಹಲವು ವರ್ಷಗಳ ಹಿಂದೆ ಆರಂಭವಾದ ಈ ಸಂಪ್ರದಾಯವನ್ನು ಅವರು ನಿರಂತರತೆ ಹಾಗೂ ನಿಷ್ಠೆಯಿಂದ ಮುಂದುವರಿಸಿಕೊಂಡು ಬಂದಿದ್ದಾರೆ.

ಇವರ ಕ್ಯಾಲೆಂಡರ್‌ನ ಅತ್ಯಂತ ವಿಶೇಷ ಅಂಶವೆಂದರೆ, ಪ್ರತಿವರ್ಷ ಕ್ಯಾಲೆಂಡರ್‌ನ ಕೊನೆಯ ಭಾಗದಲ್ಲಿ ತುರ್ತ್ತಿಗೆ ತುರ್ತಾಗಬಲ್ಲ 

ತುರ್ತು ಉಪಯೋಗದ ದೂರವಾಣಿ ಸಂಖ್ಯೆಗಳ ವಿವರವನ್ನು ನೀಡಿರುವುದು. ಇದು ಕೇವಲ ದಿನಾಂಕಗಳನ್ನು ಸೂಚಿಸುವ ಒಂದು ಕ್ಯಾಲೆಂಡರ್ ಮಾತ್ರವಲ್ಲ; ತುರ್ತು ಸಂದರ್ಭಗಳಲ್ಲಿ ಜನರಿಗೆ ಸಹಾಯವಾಗುವಂತಹ ಸಾಮಾಜಿಕ ಜವಾಬ್ದಾರಿಯ ಪ್ರತೀಕವೂ ಹೌದು. ಈ ಸಣ್ಣದಾದರೂ ಅರ್ಥಪೂರ್ಣ ಸೇವೆಯೇ ಇವರ ಕ್ಯಾಲೆಂಡರ್‌ಗೆ ವಿಭಿನ್ನ ಮೌಲ್ಯವನ್ನು ನೀಡುತ್ತದೆ.

ಡಿಜಿಟಲ್ ಯುಗದಲ್ಲಿಯೂ ಸಹ, ಇಂತಹ ಸ್ಥಳೀಯ ಹಾಗೂ ಮಾನವೀಯ ಉಪಕ್ರಮಗಳು ಸಂಪ್ರದಾಯ ಮತ್ತು ಸಮಾಜಸೇವೆಯನ್ನು ಸುಂದರವಾಗಿ ಒಂದಾಗಿ ಬೆಸೆಯುತ್ತವೆ ಎಂಬುದಕ್ಕೆ ರವಿ ಪಾನ್ ಸೆಂಟರ್ ಒಂದು ಅತ್ಯುತ್ತಮ ಉದಾಹರಣೆಯಾಗಿದೆ.

ಪ್ರತಿಕ್ರಿಯೆ

Post a Comment

0 Comments