Hot Posts

6/recent/ticker-posts

ನಮೋ ಸ್ವಾಗತಿಸಲು ಶಿರಸಿ ಸಜ್ಜು: ಇಂದು(28 ಏಪ್ರಿಲ್) 11 ಗಂಟೆಯಿಂದ ಕಾರ್ಯಕ್ರಮ

ಶಿರಸಿ: ಲೋಕಸಭಾ ಪ್ರಚಾರ ಕಾರ್ಯಕ್ರಮ ಹಿನ್ನೆಲೆಯಲ್ಲಿ ಶಿರಸಿಗೆ ಆಗಮಿಸುತ್ತಿರುವ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ಸ್ವಾಗತಕ್ಕೆ ಶಿರಸಿಗರು ಹಾಗೂ ಉತ್ತರ ಕನ್ನಡ ಜನತೆ ಸಜ್ಜಾಗಿದ್ದಾರೆ. ದೇಶದ ಪ್ರಧಾನಿಯನ್ನು ಹತ್ತಿರದಿಂದ ನೋಡಲು ಜನರು ಕಾತರರಾಗಿದ್ದಾರೆ. ಬೆಳಗ್ಗೆ 11:00 ಗಂಟೆ ಯಿಂದ ಶಿರಸಿಯ ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಕಾರ್ಯಕ್ರಮಗಳು ಆರಂಭವಾಗಲಿದ್ದು ಒಂದು ಲಕ್ಷಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆ ಇದೆ. 

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಶಿರಸಿಯ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ಮೊದಲು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ನಮೋ ಯುವ ಆ್ಯಪ್ ಮೂಲಕ ನೋಂದಣಿ ಮಾಡಿಕೊಂಡ ಹೊಸ ಮತದಾರರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದು, ಮಹಿಳೆಯರಿಗೆ ಕುಳಿತುಕೊಳ್ಳಲು ಪ್ರತ್ಯೇಕ ಆಸನದ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಲಾಗಿದೆ. ಶುದ್ದೀಕೃತ ಕುಡಿಯುವ ನೀರಿನ ವ್ಯವಸ್ಥೆ, ಎಲ್‌ಇಡಿ ಸ್ತ್ರೀನ್ ವ್ಯವಸ್ಥೆ ಇದೆ. ಜೀವ ಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾ‌ರ್ ನೇತೃತ್ವದಲ್ಲಿ ಅಚ್ಚುಕಟ್ಟಾದ ವ್ಯವಸ್ಥೆ ನಿರ್ಮಾಣವಾಗಿದೆ. ಅಲ್ಲದೇ, ಸಾರ್ವಜನಿಕರಿಗೆ ನೀರಿನ ವ್ಯವಸ್ಥೆ ಮಾಡಲು ಸಕಲ ವ್ಯವಸ್ಥೆ ಮಾಡಿಕೊಂಡಿದ್ದಾರೆ ಎಂದಿದ್ದಾರೆ. 

ಇನ್ನು 11 ಗಂಟೆಗೆ ಸಭಾ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಇದಕ್ಕೂ ಮುನ್ನ ಸಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ. ನಂತರ ಪ್ರಧಾನಿಯವರು ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ದ ಜನತೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕ್ರೀಡಾಂಗಣದ ಪ್ರವೇಶಕ್ಕೆ ಐದು ದ್ವಾರಗಳನ್ನು ನಿರ್ಮಿಸಲಾಗಿದೆ. ಬೇಸಿಗೆಯ ಕಾರಣಕ್ಕಾಗಿ ಯಾರಿಗೂ ತೊಂದರೆಯಾಗದಂತೆ ನೀರಿನ ವ್ಯವಸ್ಥೆ ಹಾಗೂ ಫ್ಯಾನ್ ವ್ಯವಸ್ಥೆ ಇದ್ದು ಹಾಗೂ ಹತ್ತಿರದಿಂದ ಎಲ್ಇಡಿ ಸ್ಕ್ರೀನ್ ವ್ಯವಸ್ಥೆ ಕೂಡ ಮಾಡಲಾಗಿದೆ. ವೇದಿಕೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಂಸದ ಅನಂತಕುಮಾರ ಹೆಗಡೆ, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾವೇರಿ ಹಾಗೂ ಲೋಕಸಭಾ ಕ್ಷೇತ್ರದ ಉಸ್ತುವಾರಿ ಸುನಿಲ್ ಕುಮಾರ್ ಬಿಜೆಪಿ ಜೆಡಿಎಸ್ ಗಣ್ಯರು ಉಪಸ್ಥಿತರಿರಲಿದ್ದಾರೆ. 

ವಾಹನಗಳ ಪಾರ್ಕಿಂಗ್ ಗಾಗಿ ಈಗಾಗಲೇ ಸ್ಥಳ ನಿಗದಿಪಡಿಸಲಾಗಿದ್ದು ಯಲ್ಲಾಪುರ ರಸ್ತೆಯಿಂದ ಬರುವವರು ಪಂಚವಟಿ ಹೊಟೆಲ್ ಎದುರುಗಡೆ ಇರುವ ಟಿಎಸ್ ಎಸ್ ಹಸಿ ಅಡಿಕೆ ಟೆಂಡರ್ ಸ್ಥಳದಲ್ಲಿ, ಕುಮಟಾ ರಸ್ತೆ ಕಡೆಯಿಂದ ಬರುವಂತಹ ವಾಹನಗಳು ಎಪಿಎಂಸಿ ಯಾರ್ಡ್ ಮತ್ತು ಲಯನ್ಸ್ ಶಾಲೆಯ ಆವಾರ, ಸಿದ್ದಾಪುರ ಮತ್ತು ಬನವಾಸಿ ರಸ್ತೆ ಕಡೆಯಿಂದ ಬರುವವರು ಎಪಿಎಂಸಿ ಯಾರ್ಡ್, ಹುಬ್ಬಳ್ಳಿ ರಸ್ತೆ ಕಡೆಯಿಂದ ಬರುವವರು ಸರ್ಕಲ್ ಬಳಿ ಮತ್ತು ತರಬೇತಿ ಕೇಂದ್ರದ ಆವಾರ ಹಾಗೂ ದೊಡ್ನಳ್ಳಿ ರಸ್ತೆ ಜಿಲ್ಲಾ ಕೈಗಾರಿಕಾ ತರಬೇತಿ ಕೇಂದ್ರದ ಬಳಿ ಪಾರ್ಕಿಂಗ್ ಮಾಡುವುದು. ಬೈಕ್ ಮತ್ತು ಕಾರ್‌ಗಳಿಗೆ ಎಂಇಎಸ್ ಕಾಮರ್ಸ್ ಕಾಲೇಜ್ ಬಳಿ ಪಾರ್ಕಿಂಗ್ ಮಾಡಬೇಕಾಗಿರುತ್ತದೆ. 

ಒಟ್ಟಾರೆ ಶಿರಸಿ ಹಾಗೂ ಉತ್ತರ ಕನ್ನಡ ಜನತೆ ದೇಶದ ಪ್ರಧಾನಿಯನ್ನು ಸ್ವಾಗತಿಸಲು ಕಾತರದಿಂದ ಕಾಯುತ್ತಿದೆ. 

ಪ್ರತಿಕ್ರಿಯೆ

Post a Comment

0 Comments