Hot Posts

6/recent/ticker-posts

ಬಾಳೆ ಇಲ್ಲದೆ ಹೊಸ ತೋಟ ಇದೊಂದು ಪ್ರಯೋಗ


ಸಾಮಾನ್ಯವಾಗಿ ತೋಟ ಹಾಕುವಾಗ ಬಾಳೆ ಗಿಡವನ್ನು ತಂಪು ಮತ್ತು ಆದಾಯಕ್ಕಾಗಿ ನೆಡುವುದನ್ನು ನಾವು ನೋಡಿದ್ದೇವೆ. ಗದ್ದೆಯಲ್ಲಿ ತೋಟ ಹಾಕುವಾಗ ಮುಖ್ಯವಾಗಿ ಬಾಳೆಗಿಡದ ಆಸರೆ ಬೇಕಾಗುತ್ತದೆ. ಆದರೆ ಬಾಳೆ ಗಿಡವನ್ನು ಹಾಕದೆ ಅಡಿಕೆ ತೋಟ ಈಗೊಂದು ಪ್ರಯೋಗ ನಡೆಯುತ್ತಿದೆ. ಕೆಲವರು ಅದರಲ್ಲಿ ಸಾಧನೆಯನ್ನು ಕೂಡ ಮಾಡಿದ್ದಾರೆ. 
ಶಿರಸಿ ಬಳಿಯ ಕೊರಟಿಬೈಲ್ ಊರಿನ ಅಣ್ಣ ತಮ್ಮಂದಿರಾದ ಗಜಾನನ ಹೆಗಡೆ ಮತ್ತು ಗೋಪಾಲ ಹೆಗಡೆ ಗದ್ದೆಯಲ್ಲಿ 20 ಗುಂಟೆ ತೋಟವನ್ನು ಶ್ರಮದಿಂದ ಮಾಡಿದ್ದು ತಮ್ಮ ಸಂಬಂಧಿಗಳ ಸಲಹೆ ಪಡೆದು ಬಾಳೆಗಿಡವನ್ನು ಹಾಕದೆ ತೋಟವನ್ನು ಹಾಕಿದ್ದಾರೆ. ಇದರಿಂದ ಅವರು ಈ ತಂತ್ರ ತಮಗೆ ಫಲ ನೀಡಿದೆ ಎನ್ನುತ್ತಾರೆ. ನಿಗದಿತ ಮೂರು ವರ್ಷದ ನಂತರ ಫಲ ಬರುವ ತೋಟ ಈ ವಿಧಾನದಿಂದ ಮೂರು ವರ್ಷದ ಒಳಗೆ ಫಲ ನೀಡಲು ಆರಂಭಿಸಿದೆ. ನಾಲ್ಕಾರು ಸಸಿಗಳು ಸಿಂಗಾರ ಒಡೆದು ಮುಂದಿನ ವರ್ಷ ಮತ್ತು ಹೆಚ್ಚು ಫಲ ಬರುವ ಸೂಚನೆ ನೀಡುತ್ತಿದೆ. 
ಎರಡು ವರ್ಷ ಒಳಗಿನ ಅಡಿಕೆ ಸಸಿಗೆ ಇವರು ಎಮ್ಮೆ ಸಗಣಿಯ ನೀರನ್ನು ಇಡೀ ಸಸಿಗೆ ಸೋಕುತ್ತಾರೆ. ಕೃಷಿಕ ಗೊಬ್ಬರ, ಹದಿನೈದು ದಿನಕ್ಕೆ ಒಮ್ಮೆ ನೀರು ಕಟ್ಟು, ಸಗಣಿ ಗೊಬ್ಬರ ಹಾಕಿ ಪೋಷಿಸುತ್ತಿದ್ದಾರೆ. ಸಸಿಗಳು ಬಲಯುತವಾಗಿ ಬೆಳೆಯುತ್ತಿವೆ. 
ಸದ್ಯಕ್ಕೆ ಏನು ಆದಾಯ ಇಲ್ಲದಿದ್ದರೂ ಭವಿಷ್ಯದಲ್ಲಿ ಒಂದು ಉತ್ತಮ ತೋಟದ ನಿರ್ಮಾಣ ಇವರ ಕನಸು. ಕೆಲವೊಮ್ಮೆ ಎರಡು ವರ್ಷದ ಸಸಿ ಕೆಂಪಾದ ಸಂದರ್ಭದಲ್ಲಿ ತಜ್ಞರ ಸಲಹೆ ಪಡೆದು ರಾಸಾಯನಿಕ ಸಿಂಪಡಿಸಿದ್ದಾರೆ. ಇವರ ಹೊಸ ಅಡಿಕೆತೋಟ ಮೂರು ವರ್ಷವನ್ನು ಪೂರೈಸಿಲ್ಲ ಆದರೂ ಅದರ ಬೆಳವಣಿಗೆ ಇವರಿಗೆ ತೃಪ್ತಿ ತಂದಿದೆ. 
ಹಂಸ ಯೂಟ್ಯೂಬ್ ಚಾನಲ್ ನಲ್ಲಿ ವಿಡಿಯೋ ಕೂಡ ಪ್ರಸಾರವಾಗಿದ್ದು ಈ ಕೆಳಗಿನ ಲಿಂಕ್ ಅನ್ನು ಕಾಪಿ ಮಾಡಿ ಗೂಗಲ್ ಸರ್ಚ್ ಮಾಡಿ 


https://youtu.be/LmsmDp30ZgI


ಜನಪ್ರಿಯ ಹಂಸ ಗುಂಪು ಸೇರಲು ಇಲ್ಲಿ ಒತ್ತಿ


ಪ್ರತಿಕ್ರಿಯೆ

Post a Comment

0 Comments