ವಿಶ್ವೇಶ್ವರ ಹೆಗಡೆ ಕಾಗೇರಿ ಪರವಾಗಿ ಅನಂತಮೂರ್ತಿ ಹೆಗಡೆ ಪ್ರಚಾರ
ಶಿರಸಿ: ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಹಾಗು ವಿಶ್ವೇಶ್ವರ ಹೆಗಡೆ ಕಾಗೇರಿಯವರು ಉತ್ತರ ಕನ್ನಡ ಜಿಲ್ಲೆಯ ಸಂಸದ ರಾಗಬೇಕು ಎಂದು ಪ್ರತಿನಿತ್ಯ ಅನಂತ ಮೂರ್ತಿ ಹೆಗಡೆ ಯವರು ಪ್ರತಿನಿತ್ಯ ನಿರಂತರ ಪ್ರಚಾರ ಮಾಡಿ ಜನರ ಮನಸ್ಸನ್ನು ಗೆಲ್ಲುವ ಕೆಲಸ ಮಾಡುತ್ತಿದ್ದಾರೆ .
ಈಗಾಗಲೆ ಶಿರಸಿ ಸಿದ್ದಾಪುರ ವಿಧಾನ ಸಭಾ ಹಾಗು ಯಲ್ಲಾಪುರ - ಮುಂಡಗೋಡ ಬನವಾಸಿ ಭಾಗದಲ್ಲಿ ಪ್ರಚಾರ ಮಾಡಿರುವ ಅವರು ಬಿಜೆಪಿ ಕಾರ್ಯ ಕಾರ್ಯಕರ್ತರ ಮನ ಗೆದ್ದಿದ್ದಾರೆ, ಕಾಗೇರಿ ಯವರು ಗೆದ್ದು ದೆಹಲಿಗೆ ಹೋಗಬೇಕೆನ್ನುವುದು ನನ್ನ ಗುರಿ ಎಂದು ತಿಳಿಸಿದ್ದಾರೆ
ಮುಂಡಗೋಡು ಭಾಗದಲ್ಲಿ ಬಿಜೆಪಿ ವಕ್ತಾರ ಹರಿಪ್ರಕಾಶ್ ಕೋಣೆಮನೆ ಪ್ರಚಾರ
ಮುಂಡಗೋಡ: ಲೋಕಸಭಾ ಚುನಾವಣಾ ನಿಮಿತ್ತ ಮುಂಡಗೋಡು ತಾಲೂಕಿನ ವಿವಿಧ ಭಾಗಗಳಲ್ಲಿ ಬಿಜೆಪಿ ವಕ್ತಾರ ಹರಿಪ್ರಕಾಶ್ ಕೋಣೆಮನೆ ಪ್ರಚಾರ ನಡೆಸಿದರು. ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಅವರೊಂದಿಗೆ ಪ್ರಚಾರ ಸಭೆಗಳು ಮತ್ತು ಪ್ರಮುಖರ ಮನೆ ಭೇಟಿ ನಡೆಸಿ ಉಕ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಪರವಾಗಿ ಮತ ಯಾಚಿಸಲಾಯಿತು. 'ಮೋದಿ ಮತ್ತೊಮ್ಮೆ' ಘೋಷಣೆ ಮೊಳಗುತ್ತಿದೆ ಎಲ್ಲಾ ಕಡೆಗಳಲ್ಲಿ ಜನರಿಂದ ಉತ್ತಮ ಸ್ಪಂದನೆ ದೊರಕುತ್ತಿದ್ದು ಈ ಲೋಕಸಭಾ ಚುನಾವಣೆಯಲ್ಲಿ ಹಿಂದಿನ ಚುನಾವಣೆಗಳಿಗಿಂತ ಹೆಚ್ಚು ಬಹುಮತ ಪಡೆಯುವ ವಿಶ್ವಾಸ ಮೂಡುತ್ತಿದೆ ಎಂಬ ಅಭಿಪ್ರಾಯ ವ್ಯಕ್ತಗೊಂಡಿದೆ ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರು ಜೊತೆಗಿದ್ದರು.
0 Comments