Hot Posts

6/recent/ticker-posts

ಮೇ12 ಶ್ರೀ ವಾಣಿವಿನಾಯಕ ದೇವರ ಮಹಾರಥೋತ್ಸವ

ಶಿರಸಿ: ತಾಲೂಕು ಕರೂರು ಸೀಮೆಯ ಬಡಗಣಬಾಗಿ ನವಿಲಗಾರ ಗ್ರಾಮದಲ್ಲಿರುವ ಶ್ರೀ ವಾಣೀವಿಶ್ವೇಶ್ವರ ಶ್ರೀಮತ್ ವಾಣೀವಿನಾಯಕ ದೇವರ ಮಹಾ ರಥೋತ್ಸವ ಮೇ 12 ರಂದು ನಡೆಯಲಿದೆ. ಮೇ ತಿಂಗಳ 10ನೇ ತಾರೀಖ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿದ್ದು ಪೂರ್ವಾಂಗ ಬೆಳಿಗ್ಗೆ : ಗಣೇಶ ಪ್ರಾರ್ಥನೆ, ಕ್ಷೌರಮೃತ್ತಿಕಾ ಸ್ನಾನ, ಬ್ರಹ್ಮಕೂರ್ಚಾ ಹವನ, ಮಾತೃಕಾ ಪೂಜೆ, ದೇವನಾಂದಿ, ಪುಣ್ಯಾಹ, ಕೌತುಕ ಬಂಧನ ಸಂಜೆ : ಭೇರಿತಾಡನ, ಯಾಗಶಾಲಾ ಪ್ರವೇಶ, ಕುಂಡಮಂಟಪ ಸಂಸ್ಕಾರ, ಅಗ್ನಿ ಜನನ, ಕಲಶ ಸ್ಥಾಪನೆ, ಪ್ರಾಸಾದ ಶುದ್ಧಾದಿಕರ್ಮಗಳು ನಡೆಯಲಿದೆ 

     

ಮೇ 11ರಂದು ಶನಿವಾರ ಧ್ವಜಾರೋಹಣ, ಮೂಷಿಕ ಯಂತ್ರೋತ್ಸವ, ವಡ್ಡಂತಿ ಮಧ್ಯಾಹ್ನ : ಬ್ರಾಹ್ಮಣ ಸಂತರ್ಪಣೆ ರಾತ್ರಿ : ಮಹಾಬಲಿ, ಪುಷ್ಪಯಂತ್ರೋತ್ಸವ, ರಾಜೋಪಚಾರ ಪೂಜೆ ನಡೆಯಲಿದೆ. 

ಮೇ 12 ರವಿವಾರ ಶ್ರೀದೇವರ ಮಹಾ ರಥೋತ್ಸವ ಜರುಗಲಿದ್ದು ಬೆಳಗ್ಗೆ 11 ಗಂಟೆಗೆ ಶ್ರೀದೇವರ ರಥಾರೋಹಣ ಹಾಗೂ ಸಂಜೆ 7 ಗಂಟೆಗೆ ರಥೋತ್ಸವ ನಡೆಯಲಿದೆ. 

ಮೇ 13 ಸೋಮವಾರರಂದು ಮೃಗಯಾತ್ರಾ, ಅವಧೃತ, ಪೂರ್ಣಾಹುತಿ ಧ್ವಜಾಅವರೋಹಣ, ಆಶೀರ್‌ಗ್ರಹಣ, ಪ್ರಸಾದ ವಿತರಣೆ ನಡೆಯಲಿದ್ದು ಈ ಎಲ್ಲಾ ಕಾರ್ಯಕ್ರಮಗಳಿಗೆ ದೇವಸ್ಥಾನದ ಆಡಳಿತ ಮಂಡಳಿ ಭಕ್ತಾದಿಗಳನ್ನು ಆಮಂತ್ರಿಸಿದೆ. 

ಪ್ರತಿಕ್ರಿಯೆ

Post a Comment

0 Comments