Hot Posts

6/recent/ticker-posts

ವಿವಿಧೆಡೆ ಕಾರ್ಯಕ್ರಮಗಳು

ರಾಯರಪೇಟೆ ಇಂದು ರಾಮನವಮಿ ರಥೋತ್ಸವ 

ಶಿರಸಿ: ರಾಯರಪೇಟೆ ಶ್ರೀ ಮಹಾವಿಷ್ಣು ದೇವರ ರಾಮನವಮಿ ರಥೋತ್ಸವ ಎ.17ರಂದು ನಡೆಯಲಿದೆ. ಬೆಳಿಗ್ಗೆ 10ರಿಂದ ಕ್ಷೀರಾಭಿಷೇಕ, ಶ್ರೀಯಾಳಾಭಿಶೇಕ, 2ಗಂಟೆಗೆ ಮಹಾಪೂಜೆ, ಸಂಜೆ 4ಗಂಟೆಗೆ ಶ್ರೀ ದೇವರ ರಥಾರೋಹಣ, ರಥ ಕಾಣಿಕೆ, ಹಣ್ಣುಕಾಯಿ ಸಮರ್ಪಣೆ, ರಾತ್ರಿ 9.30ರಿಂದ ರಥೋತ್ಸವ ನಡೆಯಲಿದೆ. ರಾತ್ರಿ 10.30ಕ್ಕೆ ರಥಾವರೋಹಣ, ಪಲ್ಲಕ್ಕಿ ಉತ್ಸವ, ಮೃಗಬೇಟೆ, ಮಂಗಳಾಷ್ಠಕ, ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ.

ನಿತ್ಯಾನಂದ ಮಠದಲ್ಲಿ ಇಂದು ಶ್ರೀ ರಾಮನವಮಿ ಉತ್ಸವ

ಶಿರಸಿ: ಮರಾಠಿಕೊಪ್ಪದ ನಿತ್ಯಾನಂದ ಮಂದಿರದಲ್ಲಿ ಎ.17 ರಂದು ರಾವನವಮಿ ದಿನದಂದು 'ಶ್ರೀ ರಾಮನವಮಿ ಉತ್ಸವ ನಡೆಯಲಿದೆ. ಬೆಳಿಗ್ಗೆ 6 ರಿಂದ ಸಂಜೆ 7 ಗಂಟೆಯವರೆಗೆ ನಿತ್ಯಾನಂದ ಮತ್ತು ಮಹಾಬಲಾನಂದ ಸ್ವಾಮೀಜಿ, ರಾಮಾಂಜನೇಯ ಸೀತಾ, ಲಕ್ಷ್ಮಣ, ಉಮಾಮಹೇಶ್ವರ, ಮಹಾಗಣಪತಿ, ಶನೈಶ್ಚರ ದೇವರಿಗೆ ಅರ್ಚನೆ, ಸೀತಾ ಮತ್ತು ಉಮಾಮಹೇಶ್ವರಿ ದೇವಿಗೆ ಉಡಿ ಸೇವೆ ಸಲ್ಲಿಸಲಾಗುತ್ತದೆ. ಮಧ್ಯಾಹ್ನ 11.30 ರಿಂದ ಮಠದ ಆವರಣದಲ್ಲಿ ಪಲ್ಲಕ್ಕಿ ಮೆರವಣಿಗೆ, ಮಧ್ಯಾಹ್ನ 3.30 ರಿಂದ ನಗರದಲ್ಲಿ ಪಲ್ಲಕ್ಕಿ ಮೆರವಣಿಗೆ, ರಾತ್ರಿ 8 ಗಂಟೆಗೆ ಮಹಾಮಂಗಳಾರತಿ, ಅನ್ನಸಂತರ್ಪಣೆ ನಡೆಯಲಿದೆ.

ಏ.23 ರಾಘವೇಂದ್ರ ಮಠದಲ್ಲಿ ವಿಶೇಷ ಕಾರ್ಯಕ್ರಮ

ಶಿರಸಿ: ಹನುಮ ಜಯಂತಿ ನಿಮಿತ್ತ ರಾಘವೇಂದ್ರ ಮಠದಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಂಜೆ 4 ಗಂಟೆಯಿಂದ 108 ಕಲಶಗಳ ಸ್ಥಾಪನೆಯೊಂದಗೆ ಸತ್ಯ ಮಾರುತಿ ವ್ರತ ಕಥಾ ನೆರವೇರಿಸಲಾಗುವುದು. ಈ ಧಾರ್ಮಿಕ ಕಾರ್ಯಕ್ರಮಕ್ಕೆ ಹೂ, ತುಳಸಿ, ದೀಪದ ಎಣ್ಣೆ ನೀಡ ಬಯಸುವ ಭಕ್ತರು ಎ. 23ರ ಬೆಳಿಗ್ಗೆಯೇ ತಂದು ಕೊಡಲು ತಿಳಿಸಲಾಗಿದೆ.

ಎ. 23ಕ್ಕೆ ಮಂಜುಗುಣಿ ತೇರು

ಶಿರಸಿ: ಶ್ರೀಕ್ಷೇತ್ರ ಮಂಜುಗುಣಿಯ ವೆಂಕಟರಮಣ ದೇವಸ್ಥಾನದ ಶ್ರೀಮನ್ಮಹಾರಥೋತ್ಸವ ಎ. 23ರಂದು ಮಂಗಳವಾರ ನಡೆಯಲಿದೆ. ಅಂದು ಬೆಳಿಗ್ಗೆ 7 ಗಂಟೆಗೆ ರಥಾರೋಹಣ, ಪೂಜೆ. ಬಳಿಕ ರಥ ಎಳೆಯಲಾಗುತ್ತದೆ. ನಂತರ ರಾತ್ರಿ 12 ಗಂಟೆಯವರೆಗೆ ದರ್ಶನ, ಹಣ್ಣು-ಕಾಯಿ ಇತ್ಯಾದಿ ಸೇವೆಗಳು ಮುಂದುವರೆಯುತ್ತದೆ. ಬೆಳಿಗ್ಗೆ ರಥೋತ್ಸವದಲ್ಲಿ ಉಪಸ್ಥಿತರಿರುವ ಭಕ್ತರಿಗೆ ಉಪಹಾರ, ಮಧ್ಯಾಹ್ನ ಅನ್ನ ಪ್ರಸಾದ ವ್ಯವಸ್ಥೆ ಇರಲಿದೆ.

  

ಮಂಜುಗುಣಿ ವೆಂಕಟರಮಣ ದೇವಸ್ಥಾನದ ಹಾರಥೋತ್ಸವದ ಅಂಗವಾಗಿ ಎ. 9 ಮಂಗಳವಾರ ಯುಗಾದಿಯಂದು ಮಹಾರಥದ ಪೂಜೆ, ರಥಬಂಧ ಹಾಗೂ ನಿತ್ಯೋತ್ಸವ ಆರಂಭವಾಗಲಿದೆ. ಎ. 17ರಂದು ಪ್ರಾತಃ ಪ್ರಾರ್ಥನೆ, ಬೀಜಾವಾಪ, ಬೆಳಿಗ್ಗೆ ಉತ್ಸವ ಸಂಕಲ್ಪ, ಮಾತೃಕಾ ಸ್ಥಾಪನೆ, ದೇವನಾಂದಿ, ವರಣ, ಮಧುಪರ್ಕ, ಸಂಜೆ ಮೃತ್ತಿಕಾಹರಣ, ಭೇರಿತಾಡನ, ಯಾಗಶಾಲಾ ಪ್ರವೇಶ, ಬೀಜಾವಾಪ, ಕೌತುಕ(ಕಂಕಣ) ಇತ್ಯಾದಿ ನಡೆಯಲಿದೆ. ಎ. 18 ರಂದು ಬೆಳಿಗ್ಗೆ ಧ್ವಜಪೂಜಾ, ಧ್ವಜಾರೋಹಣ, ಧ್ವಜ ಬಲಿ, ಕ್ಷೇತ್ರಪ್ರಾಕಾರ ಬಲಿ(ಬೀದಿ ಬಲಿ), ಭೂತರಾಜ ಬಲಿ. ಸಂಜೆ ಕ್ಷೇತ್ರಪ್ರಾಕಾರ ಬಲಿ(ಬೀದಿ ಬಲಿ), ಭೂತರಾಜ ಬಲಿ, ರತ್ನಮಂಟಪೋತ್ಸವ ನಡೆಯಲಿದೆ. ಎ. 19ರಂದು ಬೆಳಿಗ್ಗೆ ಕ್ಷೇತ್ರಪ್ರಾಕಾರ ಬಲಿ(ಬೀದಿ ಬಲಿ), ಭೂತರಾಜ ಬಲಿ, ಅಪರಾಹ್ನ ಸೂರ್ಯಪ್ರಭಾ ಉತ್ಸವ(ಹಗಲೋತ್ಸವ), ಸಂಜೆ ಕ್ಷೇತ್ರಪ್ರಾಕಾರ ಬಲಿ(ಬೀದಿ ಬಲಿ), ಭೂತರಾಜ ಬಲಿ, ಗಜಯಂತ್ರೋತ್ಸವ ನಡೆಯಲಿದೆ. 20ರಂದು ಬೆಳಿಗ್ಗೆ ಕ್ಷೇತ್ರಪ್ರಾಕಾರ ಬಲಿ(ಬೀದಿ ಬಲಿ), ಭೂತರಾಜ ಬಲಿ, ಅಪರಾಹ್ನ ಸೂರ್ಯಪ್ರಭಾ ಉತ್ಸವ(ಹಗಲೋತ್ಸವ), ಸಂಜೆ ಕ್ಷೇತ್ರಪ್ರಾಕಾರ ಬಲಿ(ಬೀದಿ ಬಲಿ), ಭೂತರಾಜ ಬಲಿ, ಸಿಂಹಯಂತ್ರೋತ್ಸವ ನಡೆಯಲಿದೆ. ಎ. 21ರಂದು ಬೆಳಿಗ್ಗೆ ಕ್ಷೇತ್ರಪ್ರಾಕಾರ ಬಲಿ(ಬೀದಿ ಬಲಿ), ಭೂತರಾಜ ಬಲಿ, ಅಪರಾಹ್ನ: ಸೂರ್ಯಪ್ರಭಾ ಉತ್ಸವ(ಹಗಲೋತ್ಸವ), ಧನಲಕ್ಷ್ಮಿಪೂಜಾ, ಧನ-ಧಾನ್ಯ, ಫಲ ಸಂಗ್ರಹಣ( ಕಾಣಿಕೆ ಡಬ್ಬಿ ಪೂಜಾ) ಉಲೂಖಲ, ಮುಸಲಪೂಜಾ ಚೂರ್ಣಿಕರಣ(ಒರಳುಪೂಜಾ, ಹಿಟ್ಟು ಕುಟ್ಟುವುದು), ಸಂಜೆ ಕ್ಷೇತ್ರಪ್ರಾಕಾರ ಬಲಿ(ಬೀದಿ ಬಲಿ), ಭೂತರಾಜ ಬಲಿ, ಶೇಷಯಂತ್ರೋತ್ಸವ ನಡೆಯಲಿದೆ. ಎ. 22ರಂದು ದೇವರ ವರ್ಧಂತಿ ಉತ್ಸವ(ಪ್ರತಿಷ್ಠಾ ದಿನ ಪ್ರಾತಃ ಭಾಂಡ ಪೂಜಾ(ಹಂಡೆ ಪೂಜೆ) ಪಾಕಸಿದ್ದಿ, ಅನ್ನಸಂಗ್ರಹ, ಬೆಳಿಗ್ಗೆ ಕ್ಷೇತ್ರಪ್ರಾಕಾರ ಬಲಿ(ಬೀದಿ ಬಲಿ), ಭೂತರಾಜ ಬಲಿ, ವರ್ಧಂತಿ, ಮಹಾಸಂತರ್ಪಣೆ, ಅಪರಾಹ್ನ ಸೂರ್ಯಪ್ರಭಾ ಉತ್ಸವ (ಹಗಲೋತ್ಸವ), ರಾತ್ರಿ ಕ್ಷೇತ್ರಪ್ರಾಕಾರ ಬಲಿ(ಬೀದಿ ಬಲಿ), ಧ್ವಜಪ್ರಾರ್ಥನಾ, ಮಹಾ ದಂಡಬಲಿ, ವಿಶೇಷ ಭೂತರಾಜ ಬಲಿ, ಗರುಡ ಯಂತ್ರೋತ್ಸವ. ಎ. 23ರಂದು ಮಹಾರಥೋತ್ಸವ, ಪ್ರಾತಃ ಮಹಾರಥಶುದ್ದಿ, ರಥಪೂಜಾ, ರಥಬಲಿ, ರಥಾಗಮನ, ರಥಾರೋಹಣ, ಪೂಜಾ ಪ್ರಾರ್ಥನಾ, ರಥನಯನ(ರಥ ಎಳೆಯುವುದು) ನಂತರ ಸಾರ್ವತ್ರಿಕವಾಗಿ ಭಕ್ತರಿಗೆ ಶ್ರೀ ದೇವರ ದರ್ಶನ, ಫಲ ಸಮರ್ಪಣೆ, ರಾತ್ರಿ 11 ಗಂಟೆಗೆ ಮರ್ಯಾದೆ ಕಾಯಿ ಹಂಚುವುದು, ಫಲತಾಡನ (ರಥಗಾಲಿಗೆ ಕಾಯಿ ಒಡೆಯುವುದು) ಪೂಜೆ, ರಥಾವರೋಹಣ, ವಸಂತಪೂಜಾ(ಪಾನಕ ನೈವೇದ್ಯ) ನಡೆಯಲಿದೆ. .24ರಂದು ಅವಕೃತ, ಅಪರಾಹ್ನ ವಸಂತಪೂಜಾ ಸಂವಾದ, ಕಲಹ(ಬಾಳೆಹಣ್ಣು ಎಸೆಯುವುದು), ಅಂಕುರ ಸಮರ್ಪಣ ಪೂಜಾ ಪ್ರಸಾದ ವಿತರಣೆ, ಅವಕೃತ ತೀರ್ಥ ಸ್ನಾನ, ಪೂರ್ಣಾಹುತಿ, ಧ್ವಜಾವರೋಹಣ ನಡೆಯಲಿದೆ. ಮೇ 5ರಂದು ಸಂಪ್ರೋಕ್ಷಣ ನಡೆಯಲಿದೆ.

ಪ್ರತಿಕ್ರಿಯೆ

Post a Comment

0 Comments