ದಿನಾಂಕ 29/10/2025 ರಂದು ಶಿರಸಿ ಲಯನ್ಸ್ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಶಿರಸಿಯ ಮಾರ್ಕೆಟ್ ಅಂಚೆ ಕಚೇರಿಯಲ್ಲಿ ಅಂಚೆಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಅಂಚೆ ಇಲಾಖೆಯ ಅಧಿಕಾರಿ ಹೂವಪ್ಪ ಜಿ ಇವರು ವಿದ್ಯಾರ್ಥಿಗಳಿಗೆ ಪೊಸ್ಟ ಕಾರ್ಡ, ಇನ್‌ಲೆಂಡ್ ಲೆಟರ್‌ನ ಮೂಲಕ ಸಂದೇಶ ಕಳುಹಿಸುವುದರ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಪೋಸ್ಟಲ್ ಸೆವಿಂಗ್ಸ್, ಸುಕನ್ಯ ಸಮೃದ್ಧಿ ಹಾಗೂ ಅಂಚೆ ಇಲಾಖೆಯ ಹಲವಾರು ಯೋಜನೆಯ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು. ಈ ಸಂದರ್ಭದಲ್ಲಿ ಲಯನ್ಸ್ ಪೂರ್ವ ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕರಾದ ಶ್ರೀಮತಿ ನಯನಾ ಪ್ರಸನ್ನ, ಸಹಶಿಕ್ಷಕರುಗಳಾದ ಸಂಧ್ಯಾ ಭಟ್, ಸುಮನಾ ಹೆಗಡೆ, ಶ್ಯಾಮಲಾ ಶೆಟ್ಟಿ, ದೈಹಿಕ ಶಿಕ್ಷ ನಾಗರಾಜ ಜೋಗಳೇಕರ್, ಸಿಬ್ಬಂದಿ ಮನೋಜ್ ಕುರುಬರ್ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳು ಶಾಲೆಯ ಆವರಣದಿಂದ ಅಂಚೆ ಕಛೇರಿಗೆ ನಡಿಗೆ ಮುಖಾಂತರ ಕ್ಷೇಮವಾಗಿ ತೆರಳಿ, ಶಾಲೆಗೆ ಮರಳುವಲ್ಲಿ ಸಂಚಾರಿ ಪೋಲೀಸ್ ಸಹಕಾರ ನೀಡಿದರು.

0 Comments