ಡಿ.14 ಭಾನುವಾರ ಯಕ್ಷ ವಂದನೆ ಮತ್ತು ನಾಣಿಕಟ್ಟಾ ಹಬ್ಬ
ಸಿದ್ದಾಪುರ: ಶ್ರೀ ಸಿದ್ಧಿವಿನಾಯಕ ಯಕ್ಷಮಿತ್ರ ಬಳಗ ನಾಣಿಕಟ್ಟಾಸಿದ್ದಾಪುರ ವೇದಮೂರ್ತಿವಿನಾಯಕ ಸು ಭಟ್ಟ ಮತ್ತೀಹಳ್ಳಿ ಅವರ ಗೌರವ ಉಪಸ್ಥಿತಿಯಲ್ಲಿ ಕಲಾಭಿಮಾನಿಗಳ ಸಂಪೂರ್ಣ ಸಹಕಾರದೊಂದಿಗೆ ಸಿದ್ದಾಪುರ ತಾಲೂಕು ನಾಣಿಕಟ್ಟಾದಲ್ಲಿ ಯಕ್ಷ ವಂದನೆ ಮತ್ತು ನಾಣಿಕಟ್ಟಾ ಹಬ್ಬ ಆಯೋಜಿತವಾಗಿದೆ.
ತನ್ನಿಮಿತ್ತ ಯಕ್ಷರಂಗದ ಅಗ್ರಗಣ್ಯ ದಿಗ್ಗಜರ ಸಮಾಗಮ ದಲ್ಲಿ ಡಿಸೆಂಬರ್ 14 ಭಾನುವಾರ ಮುಸ್ಸಂಜೆ 6:03 ನಿಮಿಷದಿಂದ ಕನಕಾಂಗಿಕಲ್ಯಾಣ ಮತ್ತು ಧರ್ಮಾಂಗದ ಯಕ್ಷಗಾನ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.
ಹಿಮ್ಮೇಳದಲ್ಲಿ ಗಾನನಿಧಿ ಶಂಕರ ಭಟ್ಟ ಬ್ರಹ್ಮೂರು ಗಾನಸಿರಿ ರಾಮಕೃಷ್ಣ ಹೆಗಡೆ ಹಿಲ್ಲೂರು ಮದ್ದಲೆ ಪರಮೇಶ್ವರ ಭಂಡಾರಿ ಕರ್ಕಿ ನಾಗರಾಜ ಭಂಡಾರಿ ಹಿರೇಬೈಲ್ ಚಂಡೆ ಶಿವಾನಂದ ಕೋಟ ವಿಘ್ನೇಶ್ವರ ಕೆಸರಕೊಪ್ಪ ಕುಮಾರ ಶ್ರೀವತ್ಸ ಗುಡ್ಡೆದಿಂಬ ಇರಲಿದ್ದಾರೆ
ಮುಮ್ಮೇಳದಲ್ಲಿ ಕೃಷ್ಣಯಾಜಿ, ಸುಬ್ರಹ್ಮಣ್ಯ ಹೆಗಡೆ ಚಿಟ್ಟಾಣಿ, ವಿದ್ಯಾಧರರಾವ್ ಜಲವಳ್ಳಿ, ಅಶೋಕ ಭಟ್ಟ ಸಿದ್ದಾಪುರ, ಶ್ರೀಧರ ಭಟ್ಟ ಕಾಸರಕೋಡು ಸಂಜಯ ಬಿಳಿಯೂರು, ವಿನಯ ಬೇರೊಳ್ಳಿ, ಗಣೇಶ ನಾಯ್ಕ ಮುಗ್ವಾ, ವೆಂಕಟೇಶ ಹೆಗಡೆ ಬಗರಿಮಕ್ಕಿ, ಮಂಜುನಾಥ ಶೆಟ್ಟಿ ನಾಣಿಕಟ್ಟಾ, ಸಂತೋಷ ಹುಣ್ಸೆಮಕ್ಕಿ, ಅವಿನಾಶ ಕೊಪ್ಪ ಇರಲಿದ್ದಾರೆ
ಯಕ್ಷಗಾನದ ಯುವ ಉದಯೋನ್ಮುಖ ಕಲಾವಿದರಾದ ಕಾರ್ತಿಕ ಹೆಗಡೆ ಚಿಟ್ಟಾಣಿ ಅವರಿಗೆ "ಯಕ್ಷ ವಂದನೆ"ಗೌರವ ನಾಗರೀಕ ಸನ್ಮಾನ ಇದ್ದು, ಹಾಗೂ ಹಿರಿಯ ಸಹಕಾರಿ ಧುರೀಣ ಸಾಮಾಜ ಸೇವಕರಾದ ಎಂ ಆರ್ ಹೆಗಡೆ ಬಾಳೆಜಡ್ಡಿ ಮತ್ತೀಹಳ್ಳಿ ಅಭಿನಂದನಾ ಗೌರವ ಸನ್ಮಾನ ಮಾಡಲಾಗುತ್ತದೆ
ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕಾಗಿ ಸಂಘಟಕರು ಕೋರಿದ್ದಾರೆ ಗೌರವ ಪ್ರವೇಶ ಹೊರತುಪಡಿಸಿ ಪ್ರವೇಶ ದರ ₹200 ಇದ್ದು ಟಿಕೆಟ್ ಪಡೆಯಲು ಸಂಪರ್ಕಿಸಿ ಬಹುದಾಗಿದೆ 9482212046, 6360595517

0 Comments