ಶಿರಸಿ: ತಾಲೂಕಿನ ಹೆಗಡೆಕಟ್ಟಾ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಸಭಾಭವನದಲ್ಲಿ ಅಕ್ಟೋಬರ್ 9 ಗುರುವಾರ ಸಂಜೆ 3:30 ರಿಂದ ಅಡಿಕೆ ಜೊತೆ ಕಾಳುಮೆಣಸು ಮತ್ತು ಕಾಫಿ ಬೆಳೆ ಸವಾಲುಗಳು ಮತ್ತು ಪರಿಹಾರೋಪಾಯಗಳು ಕುರಿತು ಸಮಾಜ ಕಾರ್ಯಕ್ರಮ ಜರುಗಲಿದೆ.
ಸಂಘದ ಸಭಾಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆ, ಶಿರಸಿ ಮತ್ತು ಯಲ್ಲಾಪುರ ಸಹಾಯಕ ನಿರ್ದೇಶಕ ಸತೀಶ ಹೆಗಡೆ, ಡೆವಲಪ್ಟೆಂಟ್ ಸೊಸೈಟಿ ಕೃಷಿ ಸಲಹೆಗಾರ ಡಾ. ವಿ. ಎಂ. ಹೆಗಡೆ, ಕಾಫಿ ಬೆಳೆಗಾರ ಸೀತಾರಾಮ ಹೆಗಡೆ, ನೀರ್ನಳ್ಳಿ, ಕಾಳುಮೆಣಸು ಕೃಷಿಕರಾದ ಸುಬ್ರಹ್ಮಣ್ಯ ಹೆಗಡೆ, ಹೆಗಡೆಕಟ್ಟಾ ರೈತರೊಂದಿಗೆ ಸಂವಾದ ನಡೆಸಲಿದ್ದಾರೆ.
ಹೆಗಡೆಕಟ್ಟಾ ಸೊಸೈಟಿ ಅಧ್ಯಕ್ಷ ಎಂ ಆರ್ ಹೆಗಡೆ ಹೊನ್ನೆಕಟ್ಟಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ರೈತರು, ಸಾರ್ವಜನಿಕರು ಕಾರ್ಯಕ್ರಮದ ಸದುಪಯೋಗಪಡಿಸಿಕೊಳ್ಳುವಂತೆ ಕೋರಲಾಗಿದೆ
0 Comments