Hot Posts

6/recent/ticker-posts

ಯಕ್ಷ ಸಂಗೀತ ಲಹರಿ ಕಾರ್ಯಕ್ರಮ

ಯಲ್ಲಾಪುರ: ನಾರಾಯಣ ಸುಬ್ರಾಯ ಹೆಗಡೆ ಇವರ ಸ್ಮರಣಾರ್ಥ ನಾದಾವಧಾನ ಪ್ರತಿಷ್ಠಾನ ಕುಂದಾಪುರ ಇವರ ಸಂಯೋಜನೆಯಲ್ಲಿ ಮೇ.24ಕ್ಕೆ,ಮಧ್ಯಾಹ್ನ 3ರಿಂದ ತಾಲೂಕಿನ ಕಂಪ್ಲಿ, ಚುಂಚಿಗದ್ದೆಯಲ್ಲಿ ‘ಯಕ್ಷ ಸಂಗೀತ ಲಹರಿ’ ಕಾರ್ಯಕ್ರಮದಲ್ಲಿ ನಡೆಯಲಿದೆ.

ಕುಮಾರಿ ಶ್ರೀರಕ್ಷಾ ಹೆಗಡೆ, ಸಿದ್ದಾಪುರ ಗಾಯನದಲ್ಲಿ ಮನರಂಜಿಸಲಿದ್ದು, ಮದ್ದಲೆಯಲ್ಲಿ ಎನ್.ಜಿ.ಹೆಗಡೆ ಯಲ್ಲಾಪುರ, ಚಂಡೆಯಲ್ಲಿ ಗಣೇಶ ಗಾಂವ್ಕರ್, ತಬಲಾದಲ್ಲಿ ಗಣೇಶ ಗುಂಡ್ಕಲ್, ವಾದ್ಯಸಂಗೀತದಲ್ಲಿ ಶಿವರಾಮ ಭಾಗ್ವತ್ ಕನಕನಹಳ್ಳಿ,ರಿದಮ್ ಪ್ಯಾಡ್ ವಿ.ಟಿ.ಹೆಗಡೆ ಸಹಕರಿಸಲಿದ್ದಾರೆ. ಕಾರ್ಯಕ್ರಮಕ್ಕೆ ಸರ್ವ ಕಲಾಸಕ್ತರು ಆಗಮಿಸಲು ಸಂಘಟಕರು ಕೋರಿದ್ದಾರೆ.

ಪ್ರತಿಕ್ರಿಯೆ

Post a Comment

0 Comments