Hot Posts

6/recent/ticker-posts

ಕೃಷಿಯೊಂದಿಗೆ ಖುಷಿಕೊಟ್ಟ ಸಂಗಾತಿಗಳು… ನೋಡಿ ಯುವಕನ ವನ್ಯ ಜೀವಿ ವ್ಯಾಮೋಹ

 

ಕೃಷಿ ಬದುಕಿನ ನಡುವೆ ಖುಷಿ ಕೊಡುವ ಸಂಗತಿಗಳು ಅನೇಕ. ವನ್ಯಜೀವಿ ಸಂಕುಲಗಳ ಸಾಕಾಣಿಕೆಯಿಂದ ಕೃಷಿಗೂ ಇದೆ ಲಾಭ. ಜೊತೆಗೆ ಕೃಷಿಕನಿಗೂ ಇದೆ ಲಾಭ. ದನಕರು ಸಾಕಣೆ, ಗಿಳಿ ಸಾಕಣೆ, ಮೊಲ ಸಾಕಣೆ, ಜೊತೆಗೆ ಆಮೆ ಸಾಕಣೆ ಇವರ ಕೃಷಿ ಬದುಕಿನ ಸಂಗಾತಿಗಳಾಗಿವೆ. 

ಟಿಎಂಎಸ್ ಉದ್ಯೋಗಿಯ ವನ್ಯಜೀವಿ ವ್ಯಾಮೋಹ

ಶಿರಸಿ ಬಳಿಯ ಶಿರಸಿಮಕ್ಕಿ ಊರಿನ ವಿನಾಯಕ ರಾ ಭಟ್ಟ ಶಿರಸಿಯ ಟಿಎಂಎಸ್ ಉದ್ಯೋಗಿಯಾಗಿ, ಕೃಷಿಕನಾಗಿ ಜೊತೆಜೊತೆಗೆ ವನ್ಯಜೀವಿ ವ್ಯಾಮೋಹ ಬೆಳೆಸಿಕೊಂಡು ಪ್ರಾಣಿ ಪಕ್ಷಿಗಳನ್ನು ಸಾಕಿ ಗಮನಸೆಳೆಯುತ್ತಿದ್ದಾರೆ. ತನ್ನ ಕೃಷಿ ಬದುಕಿಗೆ ಇವು ಉತ್ಸಾಹ ತುಂಬುತ್ತಿವೆ ಮಾನವ ಜೀವನ ಕ್ರಮದ ನಡುವೆ ವನ್ಯಜೀವಿಗಳು ಪ್ರವೇಶ ಮಾಡಿದರೆ ಅವುಗಳೊಂದಿಗಿನ ಅವಿನಾಭಾವ ಸಂಬಂಧ ಗಾಢವಾಗುತ್ತಾ ಹೋಗುತ್ತದೆ. 

ವ್ಯಾಪಾರಕ್ಕೆಂದು ಸಾಕಿದರು 

ಮೊದಲು ವ್ಯಾಪಾರಕ್ಕೆಂದು ವಿದೇಶಿ ತಳಿಯ ಇಲಿ ಸಾಕಿದರು ನಂತರ ಮೊಲ, ದೇಶೀ ತಳಿಯ ಆಮೆ, ಗಿಳಿ, ವಿದೇಶಿ ತಳಿಯ ಶ್ವಾನ ಸಾಕಿದರು. ದಿನ ಸಾಗುತ್ತಾ ಹೋದಂತೆ ಅವುಗಳ ನಡುವಿನ ಸಂಬಂಧ ಆತ್ಮೀಯವಾಗುತ್ತಾ ಹೋಯಿತು. ಇಂದು ಅವರು ಕೊಟ್ಟಿಗೆಗೆ ಹೋದರೆ ಎಲ್ಲಾ ಸಂಕುಲಗಳು ಅವರನ್ನೇ ಕರೆಯುತ್ತದೆ. ಪ್ರೀತಿಸುತ್ತವೆ. ಇವರ ಕೃಷಿ ಬದುಕಿಗೆ ಉತ್ಸಾಹವನ್ನು ತುಂಬುತ್ತವೆ. ಇವುಗಳ ತ್ಯಾಜ್ಯಗಳು ಹೂ ಗಿಡಗಳಿಗೆ ಗೊಬ್ಬರವಾಗಿ ಮಾರ್ಪಾಡಾಗುತ್ತದೆ..

ನಾನು ದಿನವೂ ನಮ್ಮನೆಯಲ್ಲಿರುವ ವನ್ಯಜೀವಿಗಳ ಜೊತೆ ಕೆಲವು ಹೊತ್ತು ಕಾಲ ಕಳೆಯುತ್ತೇನೆ… ಇವು ಕೊಡುವ ಪ್ರೀತಿ ಮಾತ್ರ ನಿಜಕ್ಕೂ ಅನನ್ಯ…

          -ವಿನಾಯಕ ಭಟ್ಟ


ಸಂಬಂಧ ಬಲವಾಗತೊಡಗಿತು

ಈಗ ಸಂಬಂಧ ಮತ್ತೂ ಗಾಢವಾಗಿದೆ. ಇಂದು ಮರಿಯನ್ನು ಕೊಡುವಾಗ ಕೂಡ ಏನನ್ನೋ ಕಳೆದುಕೊಂಡ ಭಾವನೆ ಅವರನ್ನು ಅವರಿಸುತ್ತದೆ. ಅವುಗಳಿಗೆ ಏನೇ ತೊಂದರೆಯಾದರೂ ಅವರ ಪತ್ನಿ ಸಿಂಧು ಹಾಗೂ ಮನೆಯವರೆಲ್ಲರೂ ವ್ಯಾಕುಲಗೊಳ್ಳುತ್ತಾರೆ. ಯಾಕೆ ಏನನ್ನೂ ತಿನ್ನುತ್ತಿಲ್ಲ ಏನಾಗಿದೆ ಎಲ್ಲರ ಮನದಲ್ಲೂ ಅದೇ ಆಲೋಚನೆ. ಗಿಳಿಗಳು ವಿನಾಯಕ ಬಂದ ಕೂಡಲೇ ಅವರನ್ನು ಕರೆಯುತ್ತವೆ, ಮೊಲ, ಆಮೆ, ಆಕಳ ಕರು, ನಾಯಿ ಎಲ್ಲವೂ ಏನೋ ಒಂದು ಆತ್ಮೀಯತೆಯನ್ನು ಇವರ ಬಳಿ ತೋರಿಸುತ್ತದೆ. 

ಎಲ್ಲರ ಬಲ

ಶಿರಸಿಯ ಟಿಎಂಎಸ್ ಸಂಸ್ಥೆ ಕೂಡ ಇವರ ಹವ್ಯಾಸಕ್ಕೆ ಪ್ರೋತ್ಸಾಹ ನೀಡಿದೆ. ಹಲವು ಮಾದರಿಯಲ್ಲಿ ಸಹಕಾರವನ್ನು ನೀಡಿದೆ. ತಂದೆ ತಾಯಿ ಪತ್ನಿ ಸಿಂಧು ಇವರ ಭಾವನೆಗಳಿಗೆ ಒಲವು ನೀಡಿದ್ದಾರೆ. ವಿನಾಯಕನ ಕೃಷಿ ಬದುಕಿಗೆ ಖುಷಿ ನೀಡಿವೆ ಅವರ ಸಂಗಾತಿಗಳು ವಿನಾಯಕ ಭಟ್ಟ ಅವರ ಸಂಪರ್ಕ ಸಂಖ್ಯೆ 9902212601

ವಿಡಿಯೋ ಕೂಡ ಪ್ರಸಾರವಾಗಲಿದೆ 

ಹಂಸ ಯುಟ್ಯೂಬ್ ಚಾನೆಲ್ ನಲ್ಲಿ ವಿಡಿಯೋ ಜೂನ್ 24 ಶುಕ್ರವಾರದಂದು ಪ್ರಸಾರವಾಗಲಿದೆ 


ಪ್ರತಿಕ್ರಿಯೆ

Post a Comment

0 Comments