ಅಡಿಕೆ ತೋಟದ ನಡುವೆ ಅರಿಶಿನ… ಮನಸ್ಸಿದ್ದಲ್ಲಿ ಮಾರ್ಗ!

ಅಡಿಕೆ ತೋಟದ ನಡುವೆ ಅರಿಶಿನ… ಮನಸ್ಸಿದ್ದಲ್ಲಿ ಮಾರ್ಗ!
ಅಡಿಕೆ ತೋಟದಲ್ಲಿ ಉಪಬೆಳೆಯಾಗಿ ಏಲಕ್ಕಿ ಲವಂಗ ಬಾಳೆ ಇವುಗಳನ್ನು ಬೆಳೆಯುವುದನ್ನು ನೋಡಿದ್ದೇವೆ. ಅಡಿಕೆ ತೋಟದ ನಡುವೆ ಅರಿಶಿನ ಬೆಳೆಯನ್ನು ಬೆಳೆದು ಲಾಭ ಗಳಿಸಬಹುದು. ವಿಶೇಷ ಕೆಲಸವಿಲ್ಲ, ಅನಗತ್ಯ ರೋಗಭಾದೆ ಇಲ್ಲ, ಕೆಲಸವೂ ಹಗುರ. ಹೀಗೊಂದು ಪ್ರಯತ್ನಕ್ಕೆ ಮುಂದಾಗಿ ಹೆಸರು ಪಡೆದವರು ಮಹಾದೇವ ಭಟ್ಟ ದೇವತೆ ಮನೆ ಊರಿನವರು. ಇಂದು ಅಡಿಕೆಗೆ ದರ ಇದೆ… ಮುಂದೆ ಇರಲಿ ಇರಬೇಕೆಂಬುದು ನಮ್ಮೆಲ್ಲರ ಆಶಾಭಾವ. ಆದರೆ ಸಾರ್ವತ್ರಿಕವಾಗಿ ಅಡಿಕೆಯನ್ನು ಜನರು ಬಯಲುಸೀಮೆ ಇತರ ಭಾಗಗಳಲ್ಲಿಯೂ ಬೆಳೆಯುತ್ತಿದ್ದಾರೆ. ಅಡಿಕೆ ವಿದೇಶದಿಂದ ಆವಕ ಆಗುತ್ತಾ ಬಂದಂತೆ ದರದಲ್ಲಿ ವ್ಯತ್ಯಾಸ ಕಾಣಬಹುದು. ಹೀಗಾದಾಗ ನಮ್ಮನ್ನು ಕಾಪಾಡುವುದು ಉಪಬೆಳೆಗಳು. 

ಅರಿಶಿನ ಕೃಷಿ, ಶುದ್ಧ ಅರಿಶಿನ ಬೇಕಾದಲ್ಲಿ ಕರೆ ಮಾಡಿ ಮಹಾದೇವ ಭಟ್ಟ 9449655573

        ನಿವೃತ್ತಿಯ ಮೊದಲೇ ಮುಂದಿನ ಹೆಜ್ಜೆಯ ರೂಪುರೇಷೆ

ಮಹಾದೇವ ಭಟ್ಟ ಸಹಕಾರಿ ಸಂಘದಲ್ಲಿ ಗುಮಾಸ್ತರಾಗಿ ನಿವೃತ್ತರಾದವರು. ತಾವು ನಿವೃತ್ತರಾಗುವ ಪೂರ್ವದಲ್ಲಿ ತಮ್ಮ ಮುಂದಿನ ಹೆಜ್ಜೆಯ ಬಗ್ಗೆ ನಿರ್ಧರಿಸಿದ್ದರು. ಅವರು ಏಳು ವರ್ಷಗಳಿಂದ ತಮ್ಮ ಒಂದು ಎಕರೆ ತೋಟದ ನಡುವೆ ಉಪಬೆಳೆಯಾಗಿ ಅರಿಶಿನ ಬೆಳೆಯುತ್ತಿದ್ದಾರೆ. ವಾರ್ಷಿಕ ಹದಿನೈದರಿಂದ ಇಪ್ಪತ್ತು ಕ್ವಿಂಟಾಲ್ ಇಳುವರಿ ಪಡೆಯುತ್ತಿದ್ದಾರೆ. ಸಂಪೂರ್ಣವಾಗಿ ಸಾವಯವವಾಗಿ ಬೆಳೆಯುತ್ತಿರುವುದು ಇವರ ವಿಶೇಷ. ಅರಿಶಿನ ಬೆಳೆಯುವ ಹಂತದಿಂದ ಅದರ ಪುಡಿ ಮಾಡುವವರೆಗೆ ತಮ್ಮದೇ ಆದ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ. ಅರಿಶಿನ ಬೆಳೆಯಿಂದ ಪುಡಿಯವರೆಗೆ ಇವರು ಯಾವುದೇ ರಾಸಾಯನಿಕ ಮಿಶ್ರಣ ಮಾಡದೆ ಜನರಿಗೆ ತಲುಪಿಸುತ್ತಿದ್ದಾರೆ. ಅರಿಶಿನ ಎಂದು ಕಳಪೆ ಗುಣಮಟ್ಟಕ್ಕೆ ಎಂದು ರಾಜಿಯಾಗಿಲ್ಲ ಅವರು. ಮಾರುಕಟ್ಟೆಯಲ್ಲಿ ಸಿಗುವ ಅರಿಶಿನ ಖಾತ್ರಿಯಿಲ್ಲದ ಜನರು ಒಂದು ಬಾರಿ ಇವರಿಂದ ಅರಿಶಿನ ಕೊಂಡುಕೊಂಡರೆ ಮತ್ತೆ ಕೊಂಡುಕೊಳ್ಳುತ್ತಿರುವುದು ವಿಶೇಷ. 

ಅರಿಶಿನ ಕೃಷಿ, ಶುದ್ಧ ಅರಿಶಿನ ಬೇಕಾದಲ್ಲಿ ಕರೆ ಮಾಡಿ ಮಹಾದೇವ ಭಟ್ಟ 9449655573

                           ಕಾರ್ಯ ಸುಲಭ 

ಅರಿಶಿನ ಉಪಬೆಳೆಯಾಗಿ ಬೆಳೆದಲ್ಲಿ ಅಷ್ಟೊಂದು ಶ್ರಮ ವಹಿಸಬೇಕಾಗಿಲ್ಲ. ಅರಿಶಿನವನ್ನು ಮೇ ತಿಂಗಳಿನಲ್ಲಿ ನೆಡಬೇಕು. ಅನಂತರ ವಿಶೇಷ ಕೆಲಸವಿಲ್ಲ. ನಂತರ ಜನವರಿಯಲ್ಲಿ ಅದು ಕೀಳಲು ಬರುತ್ತದೆ. ಜನವರಿಯಲ್ಲಿ ಅದನ್ನು ಕಿತ್ತು ಚೆನ್ನಾಗಿ ತೊಳೆದು ಕತ್ತರಿಸಿ ಬಿಸಿಲಿನಲ್ಲಿ ಒಣಗಿಸಿ ಸಂಗ್ರಹಿಸಿಕೊಳ್ಳಬೇಕು. ಹೀಗೆ ಸಂಗ್ರಹಿಸಿಟ್ಟುಕೊಂಡ ಅರಿಶಿನಕ್ಕೆ ಬೇಡಿಕೆ ಬಂದಾಗ ತಾನೇ ಪುಡಿ ಮಾಡಿ ಗ್ರಾಹಕರಿಗೆ ಪೂರೈಸುತ್ತೇನೆ. ತಾವು ತಯಾರಿಸುವ ಅರಿಶಿನ ಶುದ್ಧವಾಗಿರುವುದರಿಂದ ಬಹಳ ಬೇಡಿಕೆ ಇದೆ ಎನ್ನುತ್ತಾರೆ ಮಹಾದೇವ ಭಟ್ಟ.

ಅರಿಶಿನ ಬೆಳೆ ಬೆಳೆಯುವುದರಿಂದ ಪುಡಿ ಮಾಡುವ ವರೆಗೆ ಮಹಾದೇವ ಭಟ್ಟರ ವಿಡಿಯೋ ಪ್ರಕಟವಾಗಿದೆ ಕೆಳಗಿರುವ ಲಿಂಕ್ ಅನ್ನು ಒತ್ತಿ ಹಿಡಿದು ಕಾಪಿ ಮಾಡಿ ಗೂಗಲ್ ಸರ್ಚ್ ಮಾಡಿ ವಿಡಿಯೋ ವೀಕ್ಷಿಸಿ 

https://youtu.be/PfBVzRqB3ec

                        ಪರಿಮಳಭರಿತ ಅರಿಶಿನ 
ಸಾಮಾನ್ಯವಾಗಿ ನೋಡಿದರೆ ತಿಳಿಯುತ್ತದೆ ಇವರ ಅರಿಶಿನವನ್ನು ಕೈಯಲ್ಲಿ ಹಿಡಿದುಕೊಂಡರೆ ಘಮಘಮಿಸುತ್ತದೆ. ಶಿರಸಿ ಭಾಗದಲ್ಲಿ ತಾವು ಬೆಳೆದ ಬೆಳೆಯನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುತ್ತಿರುವವರು ಕಡಿಮೆ. ಶುದ್ಧ ಉತ್ಪನ್ನವನ್ನು ಗ್ರಾಹಕರು ಯಾವಾಗಲೂ ಇಷ್ಟಪಡುತ್ತಾರೆ. ಅದಕ್ಕೆ ತಾವೇ ಸಾಕ್ಷಿ ತಮ್ಮಿಂದ ಅರಿಶಿನ ಕೊಂಡುಕೊಂಡವರು ಮತ್ತೆ ನಮಗೆ ಕರೆ ಮಾಡುತ್ತಿದ್ದಾರೆ, ಆರೋಗ್ಯಕ್ಕೆ ಇದೇ ಅರಿಶಿನ ಉತ್ತಮ ಎಂಬುದನ್ನು ನನ್ನ ಗ್ರಾಹಕರು ಮನಗಂಡಿದ್ದಾರೆ ಅನ್ನುತ್ತಾರೆ ಭಟ್ಟರು. 

ಅರಿಶಿನ ಕೃಷಿ, ಶುದ್ಧ ಅರಿಶಿನ ಬೇಕಾದಲ್ಲಿ ಕರೆ ಮಾಡಿ ಮಹಾದೇವ ಭಟ್ಟ 9449655573

ಅರಿಶಿನ ಬೆಳೆ ಬೆಳೆಯುವುದರಿಂದ ಪುಡಿ ಮಾಡುವ ವರೆಗೆ ಮಹಾದೇವ ಭಟ್ಟರ ವಿಡಿಯೋ ಪ್ರಕಟವಾಗಿದೆ ಕೆಳಗಿರುವ ಲಿಂಕ್ ಅನ್ನು ಒತ್ತಿ ಹಿಡಿದು ಕಾಪಿ ಮಾಡಿ ಗೂಗಲ್ ಸರ್ಚ್ ಮಾಡಿ ವಿಡಿಯೋ ವೀಕ್ಷಿಸಿ 

https://youtu.be/PfBVzRqB3ec

Post a Comment

0 Comments