ಟಿಎಸ್ ಎಸ್ ಗೆ ವಿಶೇಷ ಆಡಳಿತಾಧಿಕಾರಿ ನೇಮಿಸಿ ಕೋರ್ಟ್ ತೀರ್ಪು;
ದಿ ತೋಟಗಾರ್ಸ್ ಕೋ-ಅಪರೇಟಿವ್ ಸೇಲ್ ಸೊಸೈಟಿ. ಲಿ.ಶಿರಸಿ ಈ ಸಹಕಾರ ಸಂಘಕ್ಕೆ ವಿಶೇಷಾಧಿಕಾರಿ ನೇಮಿಸುವ ಬಗ್ಗೆ. ಉಲ್ಲೇಖ : ಸಹಕಾರ ಸಂಘಗಳ ಉಪನಿಬಂಧಕರು, ಉತ್ತರಕನ್ನಡಜಿಲ್ಲೆ, ಕಾರವಾರ ಈ ನ್ಯಾಯಾಲಯದ ಆದೇಶ ಕ್ರಮಾಂಕ ಡಿಆರ್ಎನ್/ಎಫ್/ಡಿಡಿಎಸ್/439/2023-24 ಮತ್ತು 440/2023-24 ໖:24-5-2024
ದಿನಾಂಕ 20-8-2023 ರಂದು ದಿ ತೋಟಗಾರ್ಸ್ ಕೋ-ಆಪರೇಟಿವ್ ಸೇಲ್ ಸೊಸೈಟಿ ಲಿ.ಶಿರಸಿ ಈ ಸಹಕಾರ ಸಂಘದ 2023-24 ನೇ ಸಾಲಿನಿಂದ 2027-28 ನೇ ಸಾಲಿನವರೆಗಿನ ಅವಧಿಗೆ ಆಡಳಿತ ಮಂಡಲಿಗೆ ನಿರ್ದೇಶಕರುಗಳ ಸ್ಥಾನಕ್ಕೆ ಚುನಾವಣೆ ನಡೆಸಲಾಗಿತ್ತು. ಈ ಚುನಾವಣೆಯಲ್ಲಿ ಮತ ಎಣಿಕೆ ನಂತರ ಆಯ್ಕೆಯಾದ ನಿರ್ದೇಶಕರುಗಳ ಪಟ್ಟಿಯನ್ನು ರಿಟರ್ನಿಂಗ್ ಅಧಿಕಾರಿಗಳು ಘೋಷಣೆ ಮಾಡಿದ್ದರು. ತದನಂತರ ಈ ಸಹಕಾರ ಸಂಘದ ಆಡಳಿತ ಮಂಡಲಿ ನಿರ್ದೇಶಕರ ಆಯ್ಕೆಯ ಚುನಾವಣಾ ಪ್ರಕ್ರಿಯೆಯಲ್ಲಿ ತೀವು ಲೋಪದೋಷಗಳು ಜರುಗಿರುತ್ತದೆಂದು ಸದರಿ ಸಹಕಾರ ಸಂಘದ ಸದಸ್ಯರುಗಳಾದ ಗಣಪತಿ ಶೇಷಗಿರಿ ರಾಯದ್ ಮತ್ತು ವಿನಾಯಕ ದತ್ತಾತ್ರೇಯ ಭಟ್ ರವರುಗಳು ಉಲ್ಲೇಖದ ಕ್ರಮಾಂಕದ ಎರಡು ಚುನಾವಣಾ ದಾವಾ ಅರ್ಜಿಗಳನ್ನು ದಾಖಲಿಸಿದ್ದರು. ದಿನಾಂಕ 24-5-2024 ರಂದು ಈ ದಾವಾ ಅರ್ಜಿಗಳನ್ನು ಇತ್ಯರ್ಥಪಡಿಸಿದ ನ್ಯಾಯಾಲಯದಿಂದ, ದಿನಾಂಕ 20-8- 2023 ರಂದು ಸದರಿ ಸಹಕಾರ ಸಂಘದ ಆಡಳಿತ ಮಂಡಲಿಗೆ ನಡೆದ ಚುನಾವಣೆಯಲ್ಲಿ ಗಂಭೀರ ಲೋಪಗಳಾಗಿರುವುದನ್ನು ಮನಗಂಡು ರಿಟರ್ನಿಂಗ್ ಅಧಿಕಾರಿಯವರು ಈ ಸಹಕಾರ ಸಂಘದ ಆಡಳಿತ ಮಂಡಲಿಗೆ ಆಯ್ಕೆಯಾಗಿದ್ದಾರೆಂದು ಹೊರಡಿಸಲಾಗಿದ್ದ ದಿನಾಂಕ 20-8-2023 ರ ಚುನಾವಣಾ ಫಲಿತಾಂಶವನ್ನು ರದ್ದುಪಡಿಸಲಾಗಿದೆ. ಹಾಗು ಆಡಳಿತ ಮಂಡಲಿಯ ರದ್ದತಿಯಿಂದ ಉಂಟಾಗಿರುವ ಶೂನ್ಯತೆಯ ಕಾರಣ ಆಡಳಿತ ಮಂಡಲಿ ಜಾಗಕ್ಕೆ ವಿಶೇಷಾಧಿಕಾರಿಯನ್ನು ನೇಮಿಸಲು ನ್ಯಾಯಾಲಯದಿಂದ ಸಹಕಾರ ಸಂಘಗಳ ಅಧಿನಿಯಮ 1959 ರ ಅಧಿನಿಯಮ 30(1) ರಡಿಯಲ್ಲಿ ಆದೇಶ ಹೊರಡಿಸಲಾಗಿದೆ.
0 Comments