Hot Posts

6/recent/ticker-posts

ತೋಟದ ಮಂಡಕಾಲುವೆ ಹೀಗೆ ಮಾಡಿದ್ರು ಇವ್ರು

ಶಿರಸಿ ಬಳಿಯ ಮುಂಡ್ಗೆಜಡ್ಡಿ ಊರಿನ ಪ್ರಗತಿಪರ ಕೃಷಿಕ ಪ್ರಭಾಕರ ಹೆಗಡೆ ಅವರು ತಮ್ಮ ಅಡಿಕೆ ತೋಟದಲ್ಲಿ ಪಾಟಿಕಲ್ಲು, ಸಿಮೆಂಟ್ ಕಂಬ ಬಳಸಿ ಮಂಡಕಾಲುವೆ ನಿರ್ಮಿಸಿ ಶಾಶ್ವತ ಪರಿಹಾರ ಕಂಡುಕೊಂಡಿದ್ದಾರೆ

              ಆಲೋಚನೆ ಹೇಗೆ ಬಂತು?

ಮಂಡ ಕಾಲುವೆಯ ಕಲ್ಲುಗಳು ಪದೇಪದೇ ಬೀಳಲು ತೊಡಗಿದಾಗ ಇದಕ್ಕೊಂದು ಶಾಶ್ವತ ಪರಿಹಾರ ಬೇಕೆನಿಸಿತು. ಪಾಟಿಕಲ್ಲು ಮತ್ತು ಸಿಮೆಂಟ್ ಕಂಬ ಬಳಸಿದರೆ ಕಲ್ಲು ಹಿಸೆಯದಂತೆ ತಡೆಯಬಹುದು.

              ಮಾಡಿದ್ದು ಹೀಗೆ
4*1 ಪಾಟಿಕಲ್ಲು 5-ಫೂಟ್ ಎತ್ತರದ ಸಿಮೆಂಟ್ ಕಂಬ ಆಯ್ದುಕೊಂಡರು. ಸಿಮೆಂಟ್ ಕಂಬಕ್ಕೆ 8 ಎಂಎಂ ಬಾರ್ ಹಾಕಿರಬೇಕು, ಕಂಬವು 3*3 ಇಂಚಿನಲ್ಲಿದ್ದರೆ ಉತ್ತಮ. ಕಂಬವನ್ನು 2 ಫೂಟ್ ಹುಗಿಯಬೇಕು. 3 ಫೂಟ್ ಎತ್ತರದಲ್ಲಿ ಹಾಗೂ ಕಂಬದಿಂದ ಕಂಬಕ್ಕೆ ನಾಲ್ಕು ಫೂಟ್ ಅಂತರದಲ್ಲಿ 4*1 ರ ಮೂರು ಪಾಟಿಕಲ್ಲು ಹೊಂದಿಸಿದರು.. 

                      ಸ್ವಲ್ಪ ಖರ್ಚು ಹೆಚ್ಚು

ಕಲ್ಲು ಮತ್ತು ಸಿಮೆಂಟ್ ಕಂಬ ಖರ್ಚು ಸ್ವಲ್ಪ ಹೆಚ್ಚು. ಆದರೆ ಒಮ್ಮೆ ಇದನ್ನು ಅಳವಡಿಸಿದರೆ, ಮಂಡ ಕಾಲುವೆ ಹಿಸಿಯುವುದನ್ನು ತಪ್ಪಿಸಲು ಸುಲಭ ಉಪಾಯ ಎನಿಸುತ್ತದೆ. ಪಾಟಿಕಲ್ಲು ಏಕೆ? ಸಿಮೆಂಟ್ ಹಲಗೆ ಏಕೆ ಬೇಡ ಎನ್ನುವುದಕ್ಕೆ ಕಾರಣ ಮತ್ತೇನಿಲ್ಲ… ಈಗಿನ ದಿನಮಾನದಲ್ಲಿ ಸಿಮೆಂಟ್ ಹಲಗೆ ಮಾಡಲು ಹೊರಟರೆ ಖರ್ಚು ಅತಿ ದುಬಾರಿ ಅನಿಸುತ್ತದೆ. ತೋಟದಲ್ಲಿ ಅದನ್ನು ಮಾಡಲು ಸಾಧ್ಯವಿರುವುದಿಲ್ಲ. ಪಾಟಿಕಲ್ಲನ್ನು ಸುಲಭದಲ್ಲಿ ಒಬ್ಬ ವ್ಯಕ್ತಿ ತೋಟಕ್ಕೆ ಸಾಗಿಸಬಹುದು. ಫಿಕ್ಸಿಂಗ್ ಕಾಸ್ಟ್ ಕೂಡ 10 ರೂ ನಲ್ಲಿ ಮುಗಿಯುತ್ತದೆ. 

                    ಅನುಕೂಲ ಹೇಗೆ?
ಏಡಿ, ಹಾವು ನುಸುಳಲು ಸಾಧ್ಯವಿಲ್ಲ. ಮಳೆಗಾಲದಲ್ಲಿ ನೀರು ಸರಾಗವಾಗಿ ಕಾಲುವೆಯಲ್ಲಿ ಸಾಗುತ್ತದೆ. ಪ್ರತಿ ವರ್ಷ ಕೆಂಪುಗಲ್ಲು ಕಟ್ಟಿ ಸರಿ ಪಡಿಸುವ ಪ್ರಮೇಯವಿಲ್ಲ. ಪಾಟಿಕಲ್ಲು ಕಡಿಮೆ ದರದಲ್ಲಿ ಲಭ್ಯವಾಗುತ್ತದೆ.
ವಿಡಿಯೋ ತುಣುಕು ವೀಕ್ಷಿಸಲು ಕೆಳಗಿರುವ ಲಿಂಕ್ ಅನ್ನು ಕಾಪಿ ಮಾಡಿ ಗೂಗಲ್ ಸರ್ಚ್ ಮಾಡಿ

https://youtu.be/164FRfDw28Q

ಮಾಹಿತಿ
ಪ್ರಭಾಕರ ಹೆಗಡೆ ಮುಂಡ್ಗೆಜಡ್ಡಿ 

ಪ್ರತಿಕ್ರಿಯೆ

Post a Comment

0 Comments