Hot Posts

6/recent/ticker-posts

ನಾಣಿಕಟ್ಟದಲ್ಲಿ‌ ವಸಂತ ಸಂಭ್ರಮ; ಸನ್ಮಾನ

   

ಸಿದ್ದಾಪುರ: ವಿಶ್ವಶಾಂತಿ‌ ಸೇವಾ ಟ್ರಸ್ಟ್ ಸಂಸ್ಥೆಯು‌ ನಾಣಿಕಟ್ಟದಲ್ಲಿ ತ್ಯಾಗಲಿ ಸೊಸೈಟಿಯ ಸಹಕಾರದೊಂದಿಗೆ ಮೇ.೧೮ರ ಸಂಜೆ ೫:೪೦ಕ್ಕೆ ವಸಂತ ಸಂಭ್ರಮ ಕಾರ್ಯಕ್ರಮ ಆಯೋಜನೆಗೊಂಡಿದೆ.

ನಾಣಿಕಟ್ಟದ ಸೊಸೈಟಿಯ ಶತಮಾನೋತ್ಸವ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಯಕ್ಷ ಭಜನೆ, ಸನ್ಮಾನ, ಯಕ್ಷ ರೂಪಕ ಪ್ರದರ್ಶನವನ್ನು ಶಾಸಕ ಭೀಮಣ್ಣ‌ ನಾಯ್ಕ‌ ಉದ್ಘಾಟಿಸಲಿದ್ದಾರೆ. ಹಿರಿಯ ಸಾಹಿತಿ ಸುಬ್ರಾಯ ಮತ್ತೀಹಳ್ಳಿ ಅವರನ್ನು ಪ್ರಜಾವಾಣಿ ದೈನಿಕದ‌ ಸಂಪಾದಕ ರವೀಂದ್ರ ಭಟ್ಟ ಅವರು ಸನ್ಮಾನಿಸಲಿದ್ದಾರೆ. ಅತಿಥಿಗಳಾಗಿ‌ ಸೊಸೈಟಿ ಅಧ್ಯಕ್ಷ‌ ನಾರಾಯಣ‌ ಬಿ.ಹೆಗಡೆ ‌ಪಾಲ್ಗೊಳ್ಳುವರು.

ಒಂದೇ ಸಾಹಿತ್ಯದ ಎರಡು‌ ಅನುಭೂತಿಯ ಯಕ್ಷ ಭಜನೆಯಲ್ಲಿ ಸ್ವರ್ಣವಲ್ಲೀ‌ ಮಾತೃ ವೃಂದದ ಕಲಾವಿದರಾದ ಸಂಧ್ಯಾ ಹೆಗಡೆ, ಶ್ರತಿ ವೈದ್ಯ , ಗೀತಾ ಹೆಗಡೆ , ವಿಶಾಲಾಕ್ಷಿ ಭಟ್ಟ, ನಾಗರತ್ನಾ ಭಟ್ಟ, ವಾಣಿ ಭಟ್ಟ, ಚಂದ್ರಕಲಾ ಭಟ್ಟ, ಚೇತನಾ ಹೆಗಡೆ, ಸುಮನಾ ಭಟ್ಟ ಹಾಡಲಿದ್ದು, 

ಹಾರ್ಮೋನಿಯಂದಲ್ಲಿ ರಾಧಾ ಭಟ್ಟ, ತಬಲಾದಲ್ಲಿ ಕಿರಣ ಕಾನಗೋಡು ಸಹಕಾರ‌ ನೀಡಲಿದ್ದಾರೆ. ಬಳಿಕ ಕು. ತುಳಸಿ ಹೆಗಡೆ‌ ಅವಳಿಂದ ಎಂ.ಎ.ಹೆಗಡೆ‌ ಅವರ ಸಾಹಿತ್ಯ, ನಿರ್ದೇಶನದ ಶ್ರೀಕೃಷ್ಣಂ ವಂದೇ ಯಕ್ಷ ರೂಪಕ ಪ್ರದರ್ಶನ ಕಾಣಲಿದೆ. ಯಕ್ಷ ಭಜನೆ ಹಾಗೂ ರೂಪಕದ‌ ಹಿಮ್ಮೇಳದಲ್ಲಿ ಪ್ರಸಿದ್ಧ ಕಲಾವಿದರಾದ ಕೇಶವ ಹೆಗಡೆ ‌ಕೊಳಗಿ, ಶಂಕರ ಭಾಗವತ್, ವಿಘ್ನೇಶ್ವರ ಕೆಸರಕೊಪ್ಪ ಸಹಕಾರ‌ ನೀಡಲಿದ್ದಾರೆ. ಪ್ರಸಾಧನದಲ್ಲಿ ವೆಂಕಟೇಶ‌ ಬೊಗ್ರಿಮಕ್ಕಿ ಸಹಕಾರ‌ ನೀಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ಟ್ರಸ್ಟ್ ಉಪಾಧ್ಯಕ್ಷ‌ ರಮೇಶ ಹಳೆಕಾನಗೋಡ, ಕಾರ್ಯದರ್ಶಿ ಗಾಯತ್ರೀ ರಾಘವೇಂದ್ರ ತಿಳಿಸಿದ್ದಾರೆ.

ಪ್ರತಿಕ್ರಿಯೆ

Post a Comment

0 Comments