Hot Posts

6/recent/ticker-posts

"ಹಸಿರೆಲೆ ರಸ ಗೊಬ್ಬರ" ಅಡಿಕೆ ತೋಟದ ರೈತರಿಗೆ ವರದಾನ


ತಯಾರಿಸುವ ವಿಧಾನ: ಮುಚ್ಚಳವಿರುವ 100 ಲೀಟರ್ ಇಲ್ಲವೇ 200 ಲೀಟರ್ ಪ್ಲಾಸ್ಟಿಕ್ ಅಥವಾ ಫೈಬರ್ ಕಂಟೇನರ್ ನ ತುಂಬ ಜಮೀನಿನಲ್ಲಿ ಬೆಳೆದಿರುವ ಹಸಿರು ಕಳೆ ಸಸ್ಯ,ಹುಲ್ಲು ಅಥವಾ ಸುತ್ತಮುತ್ತಲಿನಲ್ಲಿ ಸಿಗುವ ಹಸಿರು ಸೊಪ್ಪು ಹಾಕಬೇಕು. ಜೊತೆಯಲ್ಲಿ ಅಡುಗೆ ಮನೆ ಹಸಿ ತ್ಯಾಜ್ಯ, ಹಣ್ಣಿನ ಸಿಪ್ಪೆ ಇತ್ಯಾದಿಗಳನ್ನೂ ಜೊತೆಯಲ್ಲಿ ಸೇರಿಸಬಹುದು. ನಂತರದಲ್ಲಿ ಕಂಟೇನರ್ ನ ಮುಕ್ಕಾಲು ಭಾಗ ನೀರು ಹಾಕಬೇಕು. ಇದಕ್ಕೆ ನಾಲ್ಕು ಮುಷ್ಠಿ ಜಮೀನಿನ ಅಥವಾ ಸಮೀಪದ ಕಾಡಿನ ಸಾವಯವ ಯುಕ್ತ ಕಪ್ಪು ಮಣ್ಣನ್ನು ಹಾಕಿ ಕಲಕಿ ಮುಚ್ಚಳ ಹಾಕಿಡಬೇಕು. ಈ ಮಣ್ಣಿನಲ್ಲಿ ಸಾವಯವ ಪದಾರ್ಥಗಳನ್ನು ವಿಘಟಿಸುವ ಸೂಕ್ಷ್ಮಾಣು ಜೀವಿಗಳು ಇರುವುದರಿಂದ ಅವು ಹಸಿರೆಲೆ,ಹುಲ್ಲು ಇತ್ಯಾದಿಗಳು ಬೇಗನೆ ಕಳಿಯುವಂತೆ ಮಾಡುತ್ತವೆ. ಪ್ರಾರಂಭದಲ್ಲಿ ಒಮ್ಮೆ ಸೂಕ್ಷ್ಮಾಣು ಜೀವಿಗಳು ಬೇಗನೆ ವೃದ್ಧಿಸಲು ಅನುಕೂಲವಾಗುವಂತೆ ಮಾಡಲು ಸ್ವಲ್ಪ ಬೆಲ್ಲವನ್ನು ಬೇಕಾದರೂ ಸೇರಿಸಬಹುದು. ನಂತರದಲ್ಲಿ ಎರಡು ದಿನ ಬಿಟ್ಟು ಕೋಲಿನಿಂದ ಕಲಕಬೇಕು. ಪ್ರಾರಂಭದಲ್ಲಿ ಹತ್ತು ಹನ್ನೆರಡು ದಿನಗಳಲ್ಲಿ ಸೊಪ್ಪು ಸಂಪೂರ್ಣವಾಗಿ ಕಳಿತು ಹಸಿರು ದ್ರವ ಉಂಟಾಗುತ್ತದೆ. ಆಮೇಲೆ ಅದರಲ್ಲಿರುವ ಸೊಪ್ಪಿನ ದಂಟು,ನಾರಿನ ಪದಾರ್ಥ ಇತ್ಯಾದಿ ಜೀರ್ಣವಾಗದೇ ಇರುವುದನ್ನು ಗಿಡ,ಮರಗಳ ಬುಡಕ್ಕೆ ಹಾಕಿಕೊಂಡು ಈ ಹಸಿರು ದ್ರವವನ್ನು ಗಿಡ,ಮರಗಳ ಸುತ್ತ ಮಣ್ಣಿಗೆ ಸೇರಿಸಿದರಾಯಿತು. ಇದನ್ನು ನೀರಾವರಿ ಇಲ್ಲವೇ ರಸಾವರಿ ಮೂಲಕ ಬೇಕಾದರೂ ಗಿಡ,ಮರಗಳ ಬುಡ ತಲುಪುವಂತೆ ಮಾಡಬಹುದು. ಕೊನೆಯಲ್ಲಿ ನಾಲ್ಕೈದು ಲೀಟರ್ ದ್ರವವನ್ನು ಉಳಿಸಿಕೊಂಡು ಅದಕ್ಕೆ ಮತ್ತೊಮ್ಮೆ ಹಸಿರು ಪದಾರ್ಥ ತುಂಬಿ ನೀರು ಹಾಕಿಟ್ಟರಾಯಿತು. ಮತ್ತೆ ಇದಕ್ಕೆ ಕಪ್ಪು ಮಣ್ಣು ಹಾಕುವ ಅಗತ್ಯವಿರುವುದಿಲ್ಲ. ಈಗ ಕೇವಲ ಏಳೆಂಟು ದಿನಗಳಿಲ್ಲಿಯೇ ರಸ ಗೊಬ್ಬರ ತಯಾರಾಗುತ್ತದೆ. ಇದಕ್ಕೆ ಹುಳಿ ಮಜ್ಜಿಗೆಯನ್ನು ಸಹ ಸೇರಿಸುತ್ತ ಹೋಗಬಹುದು. ಈ ಗೊಬ್ಬರಕ್ಕೆ ಒಂದು ಸಲಕ್ಕೆ ಒಂದರಂತೆ ಟ್ರೈಕೋಡರ್ಮಾ, ಸುಡೋನೊನಾಸ್, ಬೋರಾನ್, ಝಿಂಕ್ ಸಲ್ಫೇಟ್ ಇತ್ಯಾದಿಗಳನ್ಬು ಸಹ ಸೇರಿಸಿ ಗಿಡ ಮರಗಳಿಗೆ ಹಾಕಬಹುದು. ಬೇಕಾದರೆ ನೀರನ್ನು ಸೇರಿಸಿಕೊಂಡು ಬೇಕಾದರೂ ಬಳಸಬಹುದು. ಇದರ ಸಿಂಪಡಣೆ ಮಾಡುವುದು ಕೂಡ ಉಪಯುಕ್ತವೆಂದು ಕಂಡು ಬಂದಿದೆ. 

ಹಸಿರೆಲೆ ಗೊಬ್ಬರ,ಪೋಷಕಾಂಶಗಳ ಆಗರ.

ಹಸುರು ಸೊಪ್ಪು ಮೆದುವಾಗಿರುವ ಕಾರಣ ಅದು ಬೇಗನೇ ಕರಗಿ ಬೇಗನೇ ಪೋಷಕವಾಗಿ ಮಾರ್ಪಾಡು ಹೊಂದುತ್ತದೆ. ಸಾಮಾನ್ಯವಾಗಿ ಹಸುರು ಸೊಪ್ಪುಗಳು ಒಂದು ತಿಂಗಳ ಒಳಗೆ ಕಳಿಯುತ್ತವೆ.

ಬಹುವಾರ್ಷಿಕ ಸಸ್ಯಗಳಾದ ಹೊಂಗೆ ಮರದ ಸೊಪ್ಪಿನಲ್ಲಿ 100 ಗ್ರಾಂ ಒಣ ತೂಕಕ್ಕೆ 3.2 ಗ್ರಾಂ ಸಾರಜನಕ 0.3 ಗ್ರಾಂ ರಂಜಕ ಮತ್ತು 1.3 ಗ್ರಾಂ ಪೊಟ್ಯಾಶ್ ಇರುತ್ತದೆ.

ಗ್ಲೆರಿಸೀಡಿಯಾ ಸೊಪ್ಪಿನಲ್ಲಿ 100 ಗ್ರಾಂ ಒಣ ತೂಕಕ್ಕೆ 2.9 ಗ್ರಾಂ N 0.5 ಗ್ರಾಂ P 2.8 ಗ್ರಾಂ K ಹಾಗೂ ಬೇವಿನ ಸೊಪ್ಪಿನಲ್ಲಿ 100 ಗ್ರಾಂ ಒಣ ತೂಕದಲ್ಲಿ 2.6 ಗ್ರಾಂ ಸಾರಜನಕ 0.3 ಗ್ರಾಂ ರಂಜಕ ಮತ್ತು .4 ಗ್ರಾಂ ಪೊಟ್ಯಾಶ್ ಇರುತ್ತದೆ.

ಲಂಟಾನ ಸಸ್ಯದಲ್ಲಿ ಅತ್ಯಧಿಕ ಪೊಟ್ಯಾಶ್ ಅಂಶ ಇರುತ್ತದೆ.

ಕಾರಸರಕ ಸೊಪ್ಪಿನಲ್ಲಿ ಸತುವಿನ ಅಂಶ ಇರುತ್ತದೆ.

ಎಕ್ಕದ ಗಿಡದಲ್ಲಿ 100 ಗ್ರಾಂ ಒಣ ತೂಕಕ್ಕೆ 2.1 ಗ್ರಾಂ ಸಾರಜನಕ 0.7 ಗ್ರಾಂ ರಂಜಕ ಮತ್ತು 3.6 ಗ್ರಾಂ ಪೊಟ್ಯಾಶ್ ಇರುತ್ತದೆ.

ಎಕ್ಕದ ಗಿಡದಲ್ಲಿ 100 ಗ್ರಾಂ ಒಣ ತೂಕಕ್ಕೆ 2.1 ಗ್ರಾಂ ಸಾರಜನಕ 0.7 ಗ್ರಾಂ ರಂಜಕ ಮತ್ತು 3.6 ಗ್ರಾಂ ಪೊಟ್ಯಾಶ್ ಇರುತ್ತದೆ.

ಇದಲ್ಲದೆ ಔಡಲ ಸಸ್ಯ ಬಹಳ ಉತ್ತಮ ಪೋಷಕಾಂಶಗಳುಳ್ಳ ಹಸುರೆಲೆ ಸಸ್ಯವಾಗಿದೆ.

ಇದಲ್ಲದೆ ಕರಾವಳಿಯಲ್ಲಿ ಲಭ್ಯವಾಗುವ ದಡ್ದಾಲ ಸೊಪ್ಪು Careyaarborea Roxb., ಸಳ್ಳೆ ಸೊಪ್ಪು ಸಹ ಉಪಯುಕ್ತವಾಗಿವೆ.





ಪ್ರತಿಕ್ರಿಯೆ

Post a Comment

0 Comments