Hot Posts

6/recent/ticker-posts

10 ವರ್ಷದಿಂದ ಅಡಿಕೆಗೆ ಇದೇ ಗೊಬ್ಬರ, ಸ್ಪೆಷಲ್ ಆಗಿ ತಯಾರಾಯ್ತು ಫಾರ್ಮುಲಾ!

ಯಾವುದೊಂದು ಪ್ರಯೋಗ ಯಶಸ್ವಿಯಾಗುವುದು ಕಷ್ಟ. ಬಹಳಷ್ಟು ರೈತರು ಪ್ರಯೋಗವನ್ನು ಮಾಡಿ ಕೈ ಸುಟ್ಟುಕೊಕೊಂಡಿದ್ದು ಉಂಟು. ಅಡಿಕೆಯ ಮಟ್ಟಿಗೆ ಹೇಳುವುದಾದರೆ ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಬಹಳಷ್ಟು ಜನರು ಮಾಡುತ್ತಿದ್ದಾರೆ. ಇನ್ನು ಕೆಲವು ರೈತರು ಸಾಂಪ್ರದಾಯಿಕ ಹಸಿರೆಲೆ ಗೊಬ್ಬರವನ್ನು ಮಾಡಿ ಯಶಸ್ವಿಯಾಗಿದ್ದು ಉಂಟು. ಇದರಿಂದಲೂ ಕೂಡ ಅಡಿಕೆ ತೋಟಕ್ಕೆ ಬಹಳಷ್ಟು ಅನುಕೂಲವಾಗಿದೆ. 

ಆದರೆ ಶಿರಸಿ ಬಳಿಯ ಕಾನಳ್ಳಿ ಊರಿನ ವಿನಾಯಕ ಹೆಗಡೆ ತಾವು ತಮ್ಮ ತೋಟಕ್ಕೆ ಸ್ವಂತವಾಗಿ ಗೊಬ್ಬರ ತಯಾರಿಸಿ ನೀಡುತ್ತಾ ಬಂದಿದ್ದಾರೆ. ಇದು ಅವರ ಹತ್ತು ವರ್ಷಗಳ ಅನುಭವದ ಮಾತು. ಈ ಗೊಬ್ಬರವನ್ನು ಕೊಡುತ್ತಾ ಬಂದಾಗಿನಿಂದ ಅವರ ತೋಟ ಪ್ರತಿವರ್ಷ ಇಳುವರಿಯಲ್ಲಿ ಹೆಚ್ಚನ್ನು ಕಂಡುಕೊಂಡಿದೆ. ಜೊತೆಗೆ ಅಡಿಕೆಗೆ ಬರುವಂತಹ ಬಿಳಿ ಮುಗುಡು ಉದುರುವ ರೋಗ, ಅಡಿಕೆ ಒಡಕು ರೋಗ ನಿಯಂತ್ರಣಕ್ಕೆ ಬರಲು ತೊಡಗಿದೆ. ಈಗ ಅವರು ಸಾಂಪ್ರದಾಯಿಕ ಗೊಬ್ಬರ ಗುಂಡಿಯನ್ನು ಮುಚ್ಚುವ ಆಲೋಚನೆ ಮಾಡಿದ್ದಾರೆ ಎಂದರೆ ಅವರಿಗೆ ಅವರು ತಯಾರಿಸುತ್ತಿರುವ ಗೊಬ್ಬರ ಸಂಪೂರ್ಣ ಯಶಸ್ಸು ನೀಡಿದೆ ಎಂದೇ ಅರ್ಥ. 

ವಿನಾಯಕ ಹೆಗಡೆ ತಯಾರಿಸಿದ್ದು ಎರೆ ಗೊಬ್ಬರ. ಎರೆಹುಳು ಗೊಬ್ಬರವನ್ನು ವಿಶೇಷವಾಗಿ ತಯಾರಿಸಿ ಅದನ್ನು ತೋಟಕ್ಕೆ ನೀಡಿದ್ದಾರೆ. ಪ್ಲಾಸ್ಟಿಕ್ ತೊಟ್ಟಿಯಲ್ಲಿ ಎರೆಹುಳುಗೊಬ್ಬರ ಜೊತೆಗೆ ತೆಂಗಿನ ಮಡಿಲನ್ನು ಸುತ್ತ ಕಟ್ಟಿ ಅದರಲ್ಲಿಯೂ ಹುಳು ಹಾಕಿ ಗೊಬ್ಬರವನ್ನು ತಯಾರು ಮಾಡಿಕೊಳ್ಳುತ್ತಿದ್ದಾರೆ. ಇನ್ನು ಈಗಿರುವ ಸಾಂಪ್ರದಾಯಿಕ ಗೊಬ್ಬರ ಗುಂಡಿಯಲ್ಲಿ ಕೂಡ ಅವರು ಎರೆಹುಳುಗಳನ್ನು ಬಿಡುವ ಅಲೋಚನೆ ಮಾಡಿದ್ದಾರೆ.

ಗೊಬ್ಬರವನ್ನು ಅವರು ತಯಾರಿಸುವ ವಿಧಾನವೆಂದರೆ ತಂಗಿನ ಮಡಿಲು ಸುತ್ತ ಕಟ್ಟಿ ಅದರಲ್ಲಿ ಹಳೆಯ ದರಕು, ಹಸಿ ಅಡಿಕೆಯನ್ನು ಸುಲಿದ ಸಿಪ್ಪೆಯನ್ನು ರಾಶಿ ಹಾಕಿಟ್ಟುಕೊಂಡು ನಂತರ ಎರಡು ಮೂರು ತಿಂಗಳು ಬಿಟ್ಟನಂತರ ತೊಟ್ಟಿಗೆ ಹಾಕುವುದು, ಇದರ ಜೊತೆ ಜೊತೆ ಗೊಬ್ಬರ ಗಿಡವನ್ನು ಕೊಚ್ಚಿ ತೊಟ್ಟಿಗೆ ಹಾಕುವುದು, ಕಹಿಬೇವಿನ ಎಲೆ ಗಿಡವನ್ನು ಮುರಿದು ಹಾಕುವುದು ಹೀಗೆ ತಯಾರಾದ ಎರೆಹುಳು ಗೊಬ್ಬರವನ್ನು ಒಂದು ಬುಟ್ಟಿ ಗೊಬ್ಬರವನ್ನು ಅಂದಾಜು ಹತ್ತರಿಂದ ಹನ್ನೆರಡು ಕೆಜಿ 3 ಅಡಿಕೆ ಮರಕ್ಕೆ ಹಂಚಿ ಹಾಕುತ್ತಾರೆ. 

                  ಗಮನಿಸಬೇಕಾದ ಅಂಶಗಳು


*ಎರೆಹುಳು ಗೊಬ್ಬರ ತಯಾರಾಗಲು ಮೂರು ತಿಂಗಳು ಬೇಕು

*ಗೊಬ್ಬರ ಗಿಡದ ಸೊಪ್ಪು ಹಾಗೂ ಕಹಿಬೇವಿನ ಎಲೆಗಳನ್ನು ಹಾಕಿದಾಗ ಗೊಬ್ಬರದಲ್ಲಿ ಔಷಧಿಯ ಗುಣ ಹೆಚ್ಚುತ್ತದೆ

*ಹಸಿ ಅಡಿಕೆ ಸುಲಿದ ಸಿಪ್ಪೆಯನ್ನು ಎರಡು ಮೂರು ತಿಂಗಳು ಬಿಟ್ಟು ಎರೆಹುಳು ತೊಟ್ಟಿಗೆ ಸೇರಿಸಬೇಕು

*ದರಕು ಹಳೆಯದಾದಷ್ಟು, ಹುಡಿ ಹುಡಿ ಆದಷ್ಟೂ ಎರೆ ಹುಳು ಗೊಬ್ಬರಕ್ಕೆ ತುಂಬಾ ಅನುಕೂಲ 

*ಕೊಟ್ಟಿಗೆ ತೊಳೆದ ಸ್ಲರಿಯನ್ನು ಕೊಟ್ಟಿಗೆ ತೊಳೆದ ನೀರನ್ನು ನಿಯಮಿತವಾಗಿ ತೊಟ್ಟಿಗೆ ಬಿಡಬೇಕು 

*ಸಾಂಪ್ರದಾಯಿಕ ಗೊಬ್ಬರ ಗುಂಡಿಯಿಂದ ತೋಟಕ್ಕೆ ಗೊಬ್ಬರ ಸಾಗಿಸುವ ಕೂಲಿ ಖರ್ಚಿಗಿಂತ ಕಡಿಮೆ ಖರ್ಚಿನಲ್ಲಿ ಎರೆಹುಳು ಗೊಬ್ಬರವನ್ನು ತೋಟಕ್ಕೆ ಸಾಗಿಸಬಹುದು 

ಇದು ತನ್ನ ಅನುಭವದ ಮಾತು ನಾನು ಸಾಂಪ್ರದಾಯಿಕ ಗೊಬ್ಬರ ಗುಂಡಿಯನ್ನು ಮುಚ್ಚುವ ಆಲೋಚನೆಯಲ್ಲಿ ಇದ್ದೇನೆ ನನಗೆ ಎರೆಹುಳು ಗೊಬ್ಬರದಿಂದ ತುಂಬಾ ಅನುಕೂಲವಾಗಿದೆ. ಪ್ರತಿ ರೈತರು ಕೂಡ ಕಡಿಮೆ ಖರ್ಚಿನಲ್ಲಿ ಗೊಬ್ಬರವನ್ನು ತಯಾರು ಮಾಡಿಕೊಳ್ಳಬಹುದು ಎನ್ನುತ್ತಾರೆ ವಿನಾಯಕ ಹೆಗಡೆ.

ಇದನ್ನೂ ಓದಿ  ಅಡಿಕೆ ತೋಟಕ್ಕೆ ಹಸಿರೆಲೆಗೊಬ್ಬರ ಎಂಬ ಆಶಾಕಿರಣ 


ಪ್ರತಿಕ್ರಿಯೆ

Post a Comment

0 Comments