ಇವರು ಮೂರು ಮಾದರಿಯಲ್ಲಿ ತೋಟ ಮಾಡಿದವರು ಗದ್ದೆಯಲ್ಲಿ ತೋಟ, ಜವಳು ನೀರಿನಲ್ಲಿ ತೋಟ, ಮಕ್ಕಿ ಗದ್ದೆಯಲ್ಲಿ ತೋಟ ಹೀಗೆ ಹಲವು ಬಗೆಯಲ್ಲಿ ಅನುಭವ ಕoಡ ರೈತ ಶಿರಸಿ ಬಳಿಯ ಮೂಡ್ಗಾರ ಊರಿನ ಗಣಪತಿ ಹೆಗಡೆ. ಇವರು ತಮ್ಮ ಅನುಭವ ಹಂಸ ದೊಂದಿಗೆ ಹಂಚಿಕೊಂಡಿದ್ದಾರೆ.
ಒಂದೊಂದು ಅಡಿಕೆ ಮರದಲ್ಲಿ 3 ರಿಂದ 4 ಗೊನೆ, ತೆಂಗಿನ ಮರ ಗಾತ್ರದ ಅಡಿಕೆ ಮರ, ಬಹಳಷ್ಟು ಮರ ಹೀಗಿದೆ. ಮತ್ತೆ ಒಂದಿಷ್ಟು ತೋಟ ಮೂರು ವರ್ಷವಾದರೂ ಇನ್ನೂ ಈಗ ಮರಗಳು ಎದ್ದಂತೆ ಕಂಡು ಬರುತ್ತಿದೆ. ಮತ್ತೊಂದಿಷ್ಟು ತೋಟ ಎಲ್ಲ ಮರಗಳು ಒಂದೇ ರೀತಿಯಲ್ಲಿದೆ. ಮೂರು ಹಂತದ ತೋಟ ಇವರ ಅನುಭವಕ್ಕೆ ಸಾಕ್ಷಿ. ಬಹಳ ಹಿಂದಿನಿಂದಲೂ ಹೇಳುತ್ತಿರುವ ಪದ್ಧತಿ ಗದ್ದೆಯಲ್ಲಿ ತೋಟ ಮಾಡಿದರೆ ತೋಟ ಏಳುವುದಿಲ್ಲ… ಹಾಗೂ ಜವಳು ಭೂಮಿಯಲ್ಲಿ ತೋಟ ಮಾಡಿದರೆ ಇದು ಕೂಡ ನಿಶ್ಚಿತ ಪರಿಣಾಮ ಬೀರದು…
ಆದರೆ ಇಲ್ಲಿ ನಾವು ಮಾಡುವ ಕೆಲವು ತಪ್ಪುಗಳು ತೋಟದ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಗಣಪತಿ ಹೆಗಡೆ, ಅವರ ಪ್ರಕಾರ ರೈತರು ಮಾಡುವ ತಪ್ಪುಗಳೆಂದರೆ ಅಡಿಕೆ ಸಸಿಗೆ ನೀರು ನಿಲ್ಲುವಂತೆ ಇರಬಾರದು, ನೀರು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಮಾಡಬೇಕು. ಗದ್ದೆಯಲ್ಲಿ ತೋಟ ಮಾಡುವುದಾದರೆ ಹೊಸ ಮೇಲ್ಮಣ್ಣು ಬೇಕು. ತೋಟದಲ್ಲಿಯೇ ಕಣ ಮಾಡಿ ಗುಣಮಟ್ಟದ ಅಡಿಕೆ ಯಿಂದ ಶಶಿ ಬೆಳೆಯಬೇಕು. ಪ್ರತಿವರ್ಷ ತೋಟಕ್ಕೆ ಸುಣ್ಣ ಹಾಕುವುದನ್ನು ತಪ್ಪಿಸುವಂತಿಲ್ಲ. ಹಟ್ಟಿಗೊಬ್ಬರ, ಸ್ಲರಿ, ಕೋಳಿ ಗೊಬ್ಬರವನ್ನು ತಾನು ಬಳಸಿದ್ದೇನೆ ಇದು ತನ್ನ ತೋಟದ ಕೆಲವು ಭಾಗಕ್ಕೆ ಪರಿಣಾಮ ಬೀರಿದೆ.
ಬೆಳವಣಿಗೆ ಕುಂಠಿತ ಕಂಡ ತೋಟಕ್ಕೆ ಇವರು ಅನುಸರಿಸಿದ್ದು ಏನು ಗೊತ್ತಾ? ದರಕು ಮಿಶ್ರಿತ ಭೂಮಿಯ ಮೇಲ್ಪದರದ ಮೇಲ್ಮಣ್ಣು ನೀಡಿದ್ದಾರೆ, ಶಶಿ ಸಾಯಲು ಆರಂಭಿಸಿದ್ದು ಮತ್ತೆ ಚಿಗುರಿ ಕೊಂಡಿದೆ, ತೀರಾ ಬೇಸಿಗೆಯಲ್ಲಿ ನೀರು ಹಾಯಿಸಿದ್ದಾರೆ ಮತ್ತೇನು ವಿಶೇಷ ಆರೈಕೆ ಮಾಡಿಲ್ಲದಿದ್ದರೂ ತೋಟ ಚೆನ್ನಾಗಿ ಫಲ ನೀಡುತ್ತಿದೆ ಖುಷಿಯಿದೆ ಎನ್ನುತ್ತಾರೆ ಗಣಪತಿ ಹೆಗಡೆ. ನಾನೇನು ತಜ್ಞನಲ್ಲ ಮೂರು ಮಾದರಿಯ ಬೆಳವಣಿಗೆಯ ತೋಟ ನಮ್ಮಲ್ಲಿದೆ ನನ್ನ ಅನುಭವವನ್ನು ಹಂಚಿಕೊಂಡಿದ್ದೇನೆ ಅಷ್ಟೇ ಎನ್ನುವುದು ಗಣಪತಿ ಹೆಗಡೆಯವರ ವಿನಂಮ್ರ ಅಭಿಪ್ರಾಯ.
ಅವರು ಹೇಳುವ ಪ್ರಕಾರ ಮುಖ್ಯ ಅಂಶಗಳು
*ಗದ್ದೆಯ ತೋಟಕ್ಕೆ ದರಕು ಮಿಶ್ರಿತ ಭೂಮಿಯ ಮೇಲ್ಪದರದ ಮೇಲ್ಮಣ್ಣು ಬೇಕು
*ಮನೆಯ ಅಕ್ಕಪಕ್ಕದ ದರಕು… ಅದರ ಪುಡಿ ತುಂಬಾ ಅನುಕೂಲ
*ಜವಳು ಭೂಮಿಯ ತೋಟದಲ್ಲಿ ಅಡಿಕೆ ಸಸಿ ಇಂದ ನೀರು ಹರಿದು ಹೋಗುವಂತೆ ಮಾಡಿ
*ಪ್ರತಿವರ್ಷವೂ ಸುಣ್ಣವನ್ನು ಅಡಿಕೆ ತೋಟದ ಪಟ್ಟೆ ಮತ್ತು ಅಡಿಕೆ ಗಿಡಕ್ಕೆ ನೀಡಿ
*ರಾಸಾಯನಿಕ ಗೊಬ್ಬರವೇ ಬೇಕು ಅಂತಿಲ್ಲ, ಹಟ್ಟಿಗೊಬ್ಬರ ಸ್ಲರಿ ನೀರು ಬಿರು ಬೇಸಿಗೆಯಲ್ಲಿ ನೀರಾವರಿ ಇದ್ದರೆ ಸಾಕು
*ತೋಟದಲ್ಲಿ ತಂಪಿಗಾಗಿ ಆದಾಯಕ್ಕಾಗಿ ಬಾಳೆಗಿಡವನ್ನು ಬೆಳೆಸಿ
*ತೋಟಕ್ಕೆ ಮುಚ್ಚಿಗೆ ಕೂಡ ಮುಖ್ಯ
*ಗದ್ದೆಯಲ್ಲಿ ಮಾಡಿದ ತೋಟ ದೊಡ್ಡವಾದ ನಂತರ ಬೇರು ಹುಳುಗಳು ತೊಂದರೆ ಕೊಡಬಹುದು, ಇದಕ್ಕೆ ಅಗತ್ಯವಾದ ಔಷಧ ಬೇಕು
*ಯಾವುದೇ ತೋಟ ವಾದರೂ ದರಕು ಮಿಶ್ರಿತ ಭೂಮಿಯ ಮೇಲ್ಪದರದ ಮಣ್ಣು ಬಹಳ ಅನುಕೂಲಕರ ನನ್ನ ಅಭಿಪ್ರಾಯ ಅನ್ನುತ್ತಾರೆ ಗಣಪತಿ ಹೆಗಡೆ
1 Comments
Good information and suggestions
ReplyDelete