ಲಯನ್ಸ ಪಿ.ಯು. ಪ್ರತಿಭಾ ಪ್ರದರ್ಶನ ”ಆರಂಭ” ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಂಡ ‘ಮಹತಿ’
ಶಿರಸಿ: ಪ್ರತಿಷ್ಠಿತ ಡಾ.ಭಾಸ್ಕರ ಸ್ವಾದಿ ಮೆಮೋರಿಯಲ್ ಲಯನ್ಸ ಪಿ.ಯು ಕಾಲೇಜಿನಲ್ಲಿ ನೂತನ ಪ್ರಥಮ ಪಿ.ಯು. ವಿದ್ಯಾರ್ಥಿಗಳನ್ನು ಸ್ವಾಗತಿಸುವ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆಯ ಹಾಗೂ ವಿದ್ಯಾರ್ಥಿ ಪ್ರತಿಭಾಪ್ರದರ್ಶನದ ಕಾರ್ಯಕ್ರಮ “ಆರಂಭ” ಶಿರೋನಾಮೆಯಡಿಯಲ್ಲಿ ಅದ್ದೂರಿಯಾಗಿ ನಡೆಯಿತು.
ವಿದ್ಯಾರ್ಥಿಗಳಿಗೆ ಸಾಧನೆ ಹಾದಿಯಲ್ಲಿ ಸತತ ಪ್ರಯತ್ನ, ಪರಿಶ್ರಮ ಹಾಗೂ ಸ್ಥಿರತೆ, ನಿರಂತರತೆೆ ಅತ್ಯತಗತ್ಯ, ಈ ನಿಟ್ಟಿನಲ್ಲಿ ಕಾರ್ಯ ಸಾಧಿಸಿ ಎಲ್ಲರೂ ಸಾಧಕರಾಗಿ ಎಂದು ಕಾರ್ಯದರ್ಶಿಗಳಾದ ಪ್ರೊ. ರವಿ ನಾಯಕ್ ಶುಭ ಹಾರೈಸಿದರು. ಶಿರಸಿ ಲಯನ್ಸ ಎಜುಕೇಷನ್ ಸೊಸೈಟ ಅಧ್ಯಕ್ಷರಾದ ಪ್ರಭಾಕರ ಹೆಗಡೆ ಕಾರ್ಯಕ್ರಮದ ಕುರಿತು ಮಾತನಾಡಿ ಗಮನಾರ್ಹ ಸಾಧನೆ ಮಾಡುತ್ತಿರುವ ಉಪನ್ಯಾಸಕ ಹಾಗೂ ವಿದ್ಯಾರ್ಥಿ ಬಳಗಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಉಪಾಧ್ಯಕ್ಷ ಕೆ.ಬಿ.ಲೋಕೇಶ ಹೆಗಡೆಯವರು ಕಾಲೇಜು ಆರಮಬವಾದ ಅಲ್ಪ ಸಮಯದಲ್ಲೇ ಸಾಧಿಸಿದ ಪ್ರಗತಿ ಹಾಗೂ ವಿದ್ಯಾರ್ಥಿಗಳ ಪ್ರತಿಭೆ ಕುರಿತು ಸಂತಸ ವ್ಯಕ್ತ ಪಡಿಸಿದರು. ಸಹಕಾರ್ಯದರ್ಶಿಗಳು ಹಾಗೂ ಕಾಲೇಜು ಉಪಸಮೀತಿಯ ಅಧ್ಯಕ್ಷ ವಿನಯ ಹೆಗಡೆ ಬಸವನಕಟ್ಟೆ ಅವರು ಮಾತನಾಡುತ್ತ ವಿದ್ಯಾರ್ಥಿ ವೇತನ ನೀಡುತ್ತಿರುವ ದಾನಿಗಳಾದ ದಿ. ಡಾ. ಭಾಸ್ಕರ ಸ್ವಾದಿ ಜೀವನ ಸಾಧನೆ ಕುರಿತು ತಿಳಿಹೇಳಿ ಅಂತಹ ಮಾದರಿ ವ್ಯಕ್ತಿತ್ವ ಬೆಳೆಸಿಕೊಳ್ಳಿ ಎಂದು ಕರೆ ನೀಡಿದರು.
ಎಸ್.ಎಸ್.ಎಲ್ ಸಿ.ಯಲ್ಲಿ ರಾಜ್ಯಮಟ್ಟದ ರ‍್ಯಾಂಕ್ ವಿಜೇತ ವಿದ್ಯಾರ್ಥಿಗಳಾದ ಪ್ರಣವ ಹೆಗಡೆ, ಅಮೃತಾ ಪಟೇಲ್, ಸತ್ಯ ಪುರದಮಠ ಈ ಸಾಲಿನ ಉಚಿತ ಶಿಕ್ಷಣ ಯೋಜನೆಯಡಿ ಆಯ್ಕೆಯಾಗಿರುವದರ ಕುರಿತು ಸನ್ಮಾನಿಸಲಾಯಿತು. ಡಾ. ಭಾಸ್ಕರ ಸ್ವಾದಿ ಟ್ರಸ್ಟ್ ಮೂಲಕ ವಿದ್ಯಾರ್ಥಿವೇತನ ಯೋಜನೆಗೆ ಆಯ್ಕೆಯಾದ 20 ವಿದ್ಯಾರ್ಥಿಗಳಿಗೆ ಸ್ಕಾಲರ್ ಷಿಪ್ ವಿತರಿಸಲಾಯಿತು. ಪಿ.ಯು. ಕಾಲೇಜಿನ ಸಾಹಿತ್ಯಿಕ, ಸಾಂಸ್ಕೃತಿಕ ದಾಖಲಾರ್ಹ ಸಂಚಿಕೆ ‘ಮಹತಿ’ಯನ್ನು ಅತಿಥಿಗಳು ಬಿಡುಗಡೆ ಮಾಡಿದರು. ಉಪನ್ಯಾಸಕಿ ಶ್ರೀಮತಿ ಭವ್ಯ ಹಳೆಯೂರು ಮಹತಿ ಹೊತ್ತಿಗೆಯ ಕುರಿತು ಸಭೆಗೆ ವಿವರಿಸಿದರು. ಪ್ರಾಚಾರ್ಯ ಶಶಾಂಕ ಹೆಗಡೆ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕಿ ನಮ್ರತಾ ಭಟ್ ವಂದನಾರ್ಪಣೆಗೈದರು.
ವಿದ್ಯಾರ್ಥಿಗಳಾದ ಸೌಖ್ಯಾ, ಐಶ್ವರ್ಯ, ನಿಸರ್ಗ , ಕೀರ್ತಿ ಕಾರ್ಯಕ್ರಮ ನಿರೂಪಿಸಿದರು. ಪ್ರತಿಭಾಪ್ರದರ್ಶನದ ವೇದಿಕೆಯಲ್ಲಿ ವಿದ್ಯಾಲಯದ ವಿದ್ಯಾರ್ಥಿಗಳಿಂದ ಯಕ್ಷಗಾನ, ಕಾವ್ಯ ಚಿತ್ರ, ನೃತ್ಯ, ಸಂಗೀತ, ಹಾಸ್ಯ ಪ್ರಹಸನಗಳು ಪ್ರದರ್ಶನಗೊಂಡವು. ಪಿ.ಯು. ಕಾಲೇಜು ಉಪನ್ಯಾಸಕ ವೃಂದ, ಪಾಲಕರು ಹಾಗು ವಿದ್ಯಾರ್ಥಿಗಳು ಈ ಪ್ರತಿಭಾ ಪ್ರದರ್ಶನಕ್ಕೆ ಸಾಕ್ಷಿಯಾದರು. ದ್ವತಿಯ ಪಿ.ಯು. ವಿದ್ಯಾರ್ಥಿಗಳು ಉಪನ್ಯಾಸಕರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮವನ್ನು ಉತ್ತಮವಾಗಿ ಸಂಘಟಿಸಿದರು.
0 Comments