Hot Posts

6/recent/ticker-posts

ಜ.3 ರಂಗಧಾಮದಲ್ಲಿ ನೂಪುರ ನೃತ್ಯಶಾಲೆಯ ವಾರ್ಷಿಕ ನೃತ್ಯೋತ್ಸವ: ನೂಪುರನಾದ 2026

ಶಿರಸಿ: ನೂಪುರ ನೃತ್ಯಶಾಲೆಯ ವಾರ್ಷಿಕ ನೃತ್ಯೋತ್ಸವ ಜನೆವರಿ 3, 2026 ಶನಿವಾರ ದಂದು ಶಿರಸಿಯ ರಂಗಧಾಮ (ನೆಮ್ಮದಿ ಕುಟೀರದ ಆವರಣ)ದಲ್ಲಿ ಸಂಜೆ 5 ಗಂಟೆಯಿಂದ ನಡೆಯಲಿದೆ.

ಕಾರ್ಯಕ್ರಮಕ್ಕೆ ಅತಿಥಿ ಯಾಗಿ ಶ್ರೀಮತಿ ಡಾ| ಅರ್ಚನಾ ಹೆಗಡೆ (PhD in ಸಂಸ್ಕೃತ ಸಾಹಿತ್ಯ)ಇವರು ಆಗಮಿಸಲಿದ್ದಾರೆ.

ನೃತ್ಯಶಾಲೆ ಆರಂಭವಾಗಿ ಇಪ್ಪತ್ತು ವರ್ಷದ ಸಂಭ್ರಮವನ್ನು ನೂಪುರ ನೃತ್ಯಶಾಲೆಯ ಹಳೆಯ ವಿದ್ಯಾರ್ಥಿಗಳು ಹಾಗೂ ಪ್ರಸ್ತುತ ಕಲಿಯುತ್ತಿರುವ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರೆಲ್ಲ ಸೇರಿ ಈ ಕಾರ್ಯಕ್ರಮವನ್ನು ಉದ್ಘಾಟಿಸಿ "ವಿoಶತಿ ಸಂಭ್ರಮ'ವನ್ನು ಆಚರಿಸಲಿದ್ದಾರೆ.

ವಿದುಷಿ ಅನುರಾಧಾ ಹೆಗಡೆ ಹಾಗೂ ವಿದುಷಿ ಕೀರ್ತನಾ ಹೆಗಡೆ ಇವರ ಮಾರ್ಗದರ್ಶನದಲ್ಲಿ ಈ ವರ್ಷದ ವಿಶೇಷ ಆಕರ್ಷಣೆಯಾಗಿ ವಿದ್ಯಾರ್ಥಿಗಳು "ಶಿವಲಿಂಗಾನಂದ - ಲಿಂಗಾಷ್ಟಕo ಆಧಾರಿತ ನೃತ್ಯ " ಪ್ರದರ್ಶಿಸಲಿದ್ದಾರೆ

ಕಾರ್ಯಕ್ರಮ ದ ಹಿನ್ನೆಲೆ ಸಂಗೀತ _ ನಟ್ಟುವಾoಗ ದಲ್ಲಿ ವಿದುಷಿ ಕುಮಾರಿ ಕೀರ್ತನಾ ಹೆಗಡೆ, ಹಾಡುಗಾರಿಕೆಯಲ್ಲಿ ವಿದುಷಿ ಕುಮಾರಿ ಪ್ರಣೀತಾ ಶರ್ಮಾ ಬೆಂಗಳೂರು, ಮೃದಂಗ ದಲ್ಲಿ ವಿದ್ವಾನ್ ಭಾನುಪ್ರಕಾಶ್ ಬೆಂಗಳೂರು, ಕೊಳಲು ವಿದ್ವಾನ್ ಅಶ್ವಿನ್ ಎಲ್, ಬೆಂಗಳೂರು ಸಹಕರಿಸಲಿದ್ದಾರೆ.

ಕಾರ್ಯಕ್ರಮ ನಿರೂಪಣೆ ಯನ್ನು ಶಿಕ್ಷಕರಾದ ಎಂ ಎಸ್ ಗೌಡ ಹಾಗೂ ವಿದುಷಿ ಶ್ರೀಮತಿ ಜಯಶ್ರೀ ಹೆಗಡೆ ನಿರ್ವಹಿಸಲಿದ್ದಾರೆ.

ಪ್ರತಿಕ್ರಿಯೆ

Post a Comment

0 Comments