ಶಿರಸಿ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಡೆಸಿದ ಶಿರಸಿ ಶೈಕ್ಷಣಿಕ ಜಿಲ್ಲಾ ಮಟ್ಟದ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿ ಗುಂಪು ಸ್ಪರ್ಧೆಗಳಲ್ಲೊಂದಾದ ಕವ್ವಾಲಿ ಸ್ಪರ್ಧೆಯಲ್ಲಿ ಹೆಗಡೆಕಟ್ಟಾ ಶ್ರೀ ಗಜಾನನ ಸೆಕೆಂಡರಿ ಸ್ಕೂಲ್ ನ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕು. ದೀಪ್ತಿ ರಘುಪತಿ ಹೆಗಡೆ ಕವ್ವಾಲಿ ಗಾಯಕಿಯಾಗಿ ಭಾಗವಹಿಸಿದರೆ, ಕು. ಸಾತ್ವಿಕ ಮಂಜುನಾಥ ಹೆಗಡೆ, ಕು. ಶ್ರೀಶ ಗಣಪತಿ ಹೆಗಡೆ, ಕು. ರಾಮಚರಣತೇಜ ಮಂಜುನಾಥ ಹೆಗಡೆ ಇವರು ಸಹಗಾಯಕರಾಗಿ ಭಾಗವಹಿಸಿದ್ದರು. ಕು. ಆದರ್ಶ ಶ್ರೀಕೃಷ್ಣ ಭಟ್ಟ ತಬಲಾ ಮತ್ತು ಕು. ಪನ್ನಗ ದಿನೇಶ ಹೆಗಡೆ ಹಾರ್ಮೋನಿಯಂ ಸಾಥ್ ನೀಡಿದ್ದರು. ಈ ವಿದ್ಯಾರ್ಥಿಗಳಿಗೆ ಪ್ರೌಢಶಾಲಾ ಮುಖ್ಯಾಧ್ಯಾಪಕರಾದ ಶ್ರೀಮತಿ ವೀಣಾ ಭಟ್ಟ ಇವರು ಮಾರ್ಗದರ್ಶನ ನೀಡಿದ್ದರು. ಗಜಲ್ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿದ ಕು. ಕೃತಿ ಶ್ರೀಪಾದ ಹೆಗಡೆ ಇವಳು ತೃತೀಯ ಸ್ಥಾನ ಪಡೆದಿರುತ್ತಾಳೆ. ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿಯ ಅಧ್ಯಕ್ಷರು, ಸದಸ್ಯರು, ಮುಖ್ಯಾಧ್ಯಾಪಕರು ಹಾಗೂ ಶಿಕ್ಷಕರು ಅಭಿನಂದಿಸಿ, ಶುಭ ಹಾರೈಸಿದ್ದಾರೆ.

0 Comments