ಹೆಗಡೆಕಟ್ಟಾದಲ್ಲಿ ಅಕ್ಟೋಬರ್ 5 ರಂದು “ಶ್ರೀ ಕೃಷ್ಣ ಸಂಧಾನ” ತಾಳಮದ್ದಳೆ
ಶಿರಸಿ: ಶ್ರೀಮತಿ ರಾಧಾ ಗಂಗಾಧರ ಹೆಗಡೆ, ಮರಿಯಜ್ಜನಮನೆ ಮತ್ತು ಕುಟುಂಬದವರು ಹೆಗಡೆಕೇರಿ, ಹೆಗಡೆಕಟ್ಟಾ ಅವರ ಪ್ರಾಯೋಜಕತ್ವದಲ್ಲಿ, ದಿ. ಶ್ರೀಮತಿ ಸುಶೀಲಾ ಮಧುಕೇಶ್ವರ ಹೆಗಡೆ, ಕೊಟ್ಟೆಗದ್ದೆ ಇವರ ಸ್ಮರಣಾರ್ಥ ಶ್ರೀಕೃಷ್ಣ ಸಂಧಾನ ತಾಳಮದ್ದಳೆ ಶ್ರೀ ಗಜಾನನ ಪ್ರೌಢಶಾಲೆಯ ಸುವರ್ಣ ಸುರಭಿ ಸಭಾಭವನದಲ್ಲಿ ದಿನಾಂಕ: 05.10.2025 ಭಾನುವಾರ ಸಂಜೆ 6.00 ಗಂಟೆಗೆ ನಡೆಯಲಿದೆ
ಭಾಗವತರಾಗಿ ಕೇಶವ ಹೆಗಡೆ, ಕೊಳಗಿ ಮೃದಂಗ ಶಂಕರ ಭಾಗವತ, ಯಲ್ಲಾಪುರ ಚಂಡೆ ಪ್ರಸನ್ನ ಭಟ್ಟ, ಹೆಗ್ಗಾರು, ಅರ್ಥದಾರಿಗಳಾಗಿ ವಿದ್ವಾನ್ ಉಮಾಕಾಂತ ಭಟ್ಟ, ಕೆರೆಕೈ ಅಶೋಕ ಭಟ್ಟ, ಉಜಿರೆ, ವಿದ್ವಾನ್ ಗ.ನಾ.ಭಟ್ಟ, ಮೈಸೂರು ಗಣರಾಜ ಕುಂಬ್ಳೆ, ರಾಮಕುಂಜ, ಡಾ, ವಿನಾಯಕ ಭಟ್ಟ, ಗಾಳಿಮನೆ ಇರಲಿದ್ದಾರೆ
0 Comments