Veda bhat dongre
Ph. 9448202304
ಕಳಲೆ -₹165 for 1/2 kg
₹300 for 1 kg
ಕಳಲೆ :- ಕಳಲೆ, ಕಣಿಲೆ, ಬಿದಿರಿನ ಚಿಗುರು, ಎಂದು ಕರೆಯುತ್ತಾರೆ. ಬಿದಿರಿನ ಪುಟ್ಟ -ಪುಟ್ಟ ಸಸಿಗಳನ್ನು ಕಣಿಲೆ ಎನ್ನುತ್ತಾರೆ. ಇದು ಮಳೆಗಾಲದಲ್ಲಿ ಸಾಕಷ್ಟು ಸಿಗುವುದರಿಂದ ಇದರಿಂದ ವಿವಿಧ ಖಾದ್ಯಗಳನ್ನು ತಯಾರಿಸುತ್ತಾರೆ. ಸಾಂಬಾರ್, ಮಜ್ಜಿಗೆ ಹುಳಿ, ಬೋಂಡಾ, ಪಲ್ಯ, ಪಕೋಡ, ಕಾವಲಿ ದೋಸೆ, ಮಾಡುತ್ತಾರೆ. ಕಳಲೆಗೆ ಉಪ್ಪು ಹಾಕಿ ಹಾಳಾಗದಂತೆ ವರ್ಷಕ್ಕಾಗುವಷ್ಟು ಶೇಖರಿಸಿ ಇಡುತ್ತಾರೆ. ಹಳ್ಳಿಯವರಿಗೆ ಸುಲಭದಲ್ಲಿ ಸಿಗುತ್ತದೆ. ಪೇಟೆಯಲ್ಲಿ ಇರುವವರಿಗೆ ಸಿಗುವುದು ಕಷ್ಟ,
ಬಳಸುವ ವಿಧಾನ :- ನಾವು ಕಳಲೆಯನ್ನು ಉಪ್ಪು ಹಾಕಿ ಶೇಖರಿಸಿ ಇಟ್ಟಿದ್ದೇವೆ, ಇದನ್ನು ನಾಳೆ ಬಳಸುವುದಾದರೆ, ಹಿಂದಿನ ದಿನ ರಾತ್ರಿ ನೀರಿನಲ್ಲಿ ನೆನೆಸಿ ಬೆಳಗ್ಗೆಯ ತನಕ ಇಡಬೇಕು, ಹೆಚ್ಚಿಗೆ ಉಪ್ಪಿನ ಅಂಶ ನೀರಿನಲ್ಲಿ ಬಿಟ್ಟುಕೊಂಡು ತೊಳೆಯುವಾಗ ಹೋಗುತ್ತದೆ, ನಂತರ ಅಡುಗೆಗೆ ಬಳಸಬಹುದು. ಆದರೂ ಅಡುಗೆ ಮಾಡುವಾಗ ಉಪ್ಪು ನೋಡಿಕೊಂಡು ಹಾಕಬೇಕು.
ಕಳಲೆಯ ಮಹತ್ವ :- ಕಳಲೆಯಲ್ಲಿ ಹೆಚ್ಚು ಪ್ರೊಟೀನ್, ಕಾರ್ಬೋಹೈಡ್ರೆಟ್, ನಾರಿನಂಶ ಇರುತ್ತದೆ. ಕೊಬ್ಬು ಮತ್ತು ಸಕ್ಕರೆಯ ಪ್ರಮಾಣ ಕಡಿಮೆ ಇರುವುದರಿಂದ ಮಧುಮೇಹಿಗಳಿಗೂ ಉತ್ತಮ ಆಹಾರ. ಜೀವಸತ್ವಗಳು ಮತ್ತು ಖನಿಜಗಳು ಹೇರಳವಾಗಿರುವುದರಿಂದ ರೋಗನಿರೋಧಕ ಶಕ್ತಿ ಮತ್ತು ಸೋಂಕುಗಳು ತಗಲದಂತೆ ರಕ್ಷಣೆ ನೀಡುತ್ತದೆ. ಹಾಗಾಗಿ ಮಳೆಗಾಲ ಮತ್ತು ಚಳಿಗಾಲದಲ್ಲಿ ಇದನ್ನು ತಪ್ಪದೇ ಸೇವಿಸಬೇಕು.ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ
Courier charges extra
Online payment
ಸೂಚನೆ: "ಹಂಸ ಸಂತೆ" ಒಂದು ಸಂವಹನ ಮಧ್ಯಮವಾಗಿದ್ದು ಉತ್ಪನ್ನಗಳ ಗುಣಮಟ್ಟ ಅಥವಾ ಮಾರಾಟಗಾರರು ಅಥವಾ ಖರೀದಿ ದಾರರ ವ್ಯವಹಾರಗಳಿಗೆ ಯಾವುದೇ ಜವಾಬ್ದಾರವಾಗಿರುವುದಿಲ್ಲ
0 Comments