ಎಸ್ ಎಸ್ ಎಲ್ ಸಿ ಶಿರಸಿ ಲಯನ್ಸ್ ಪ್ರೌಢಶಾಲೆಗೆ 100ಕ್ಕೆ 100 ಫಲಿತಾಂಶ: ಸಮನ್ವಿತಾಗೆ ರಾಜ್ಯಕ್ಕೆ ನಾಲ್ಕನೇ ರ‍್ಯಾಂಕ್
ಶಿರಸಿ: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ 2024-25 ಶೈಕ್ಷಣಿಕ ರ‍್ಷದ ಎಸ್.ಎಸ್.ಎಲ್.ಸಿ ಪರೀಕ್ಷೆ-1 ಫಲಿತಾಂಶ ಪ್ರಕಟವಾಗಿದ್ದು, ಶಿರಸಿಯ ಲಯನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು 100ಕ್ಕೆ 100 ಫಲಿತಾಂಶ ಗಳಿಸಿರುತ್ತಾರೆ.
625 ಕ್ಕೆ 622 ಅಂಕಗಳಿಸಿದ ಸಮನ್ವಿತಾ ವಿನಾಯಕ ತೆಂಬದಮನಿ ರಾಜ್ಯಕ್ಕೆ ನಾಲ್ಕನೇ ರ‍್ಯಾಂಕ್ ಪಡೆದು ಶಾಲೆಗೆ ಪ್ರಥಮ ಸ್ಥಾನಗಳಿಸಿದ್ದಾಳೆ. 615 ಅಂಕ ಗಳಿಸಿರುವ ಶ್ರಾವಣಿ ನಾಗರಾಜ ಮಹಾಲೆ ಶಾಲೆಗೆ ದ್ವಿತೀಯ ಸ್ಥಾನ, 614 ಅಂಕಗಳಿಸಿರುವ ಪ್ರತೀಕ್ಷಾ ರಘುನಾಥ ಶೆಟ್ಟಿ ಶಾಲೆಗೆ ತೃತೀಯ ಸ್ಥಾನ ಪಡೆದಿರುತ್ತಾರೆ.
ಶಾಲೆಯಿಂದ ಪರೀಕ್ಷೆಗೆ ಕುಳಿತ 58 ವಿದ್ಯಾರ್ಥಿಗಳಲ್ಲಿ 95 ಪ್ರತಿಶತಕ್ಕಿಂತ ಅಧಿಕ ಅಂಕಗಳನ್ನು 12 ವಿದ್ಯಾರ್ಥಿಗಳು, 90% ಅಧಿಕ ಅಂಕಗಳನ್ನು 25 ವಿದ್ಯಾರ್ಥಿಗಳು, 85% ಅಧಿಕ ಅಂಕಗಳನ್ನು39 ವಿದ್ಯಾರ್ಥಿಗಳು ಪಡೆದಿದ್ದು, ಅತ್ಯುತ್ತಮ ಶ್ರೇಣಿ, (ಡಿಸ್ಟಿಂಕ್ಷನ್) ಯಲ್ಲಿ 39 ವಿದ್ಯಾರ್ಥಿಗಳು, ಪ್ರಥಮ ವರ್ಗದಲ್ಲಿ 17 ವಿದ್ಯಾರ್ಥಿಗಳು ದ್ವಿತೀಯ ವರ‍್ಗದಲ್ಲಿ ಇಬ್ಬರು ವಿದ್ಯಾರ್ಥಿಗಳು ತೇರ್ಗಡೆಯಾಗಿರುತ್ತಾರೆ. ಶಾಲೆಯ ಪರಿಮಾಣಾತ್ಮಕ ಫಲಿತಾಂಶ 100% ಹಾಗೂ ಗುಣಾತ್ಮಕ ಫಲಿತಾಂಶ 93.71% ಆಗಿದ್ದು, ಉತ್ತಮ ಫಲಿತಾಂಶದ ಸಾಧನೆ ಮೆರೆದಿದೆ. ಂ+ ಶ್ರೇಣಿ 25 ವಿದ್ಯಾರ್ಥಿಗಳು ಶ್ರೇಣಿ 21 ವಿದ್ಯಾರ್ಥಿಗಳು ಪಡೆದಿರುತ್ತಾರೆ. ವಿಷಯವಾರು ಕನ್ನಡ-11 ,ಹಿಂದಿ-3, ಸಂಸ್ಕೃತ-12, ಗಣಿತ-1, ವಿಜ್ಞಾನ-7, ಸಮಾಜ-5 ವಿದ್ಯಾರ್ಥಿಗಳು 100 ಕ್ಕೆ 100 ಅಂಕಗಳನ್ನು ಪಡೆದಿರುತ್ತಾರೆ. ಸತತ ರ‍್ಯಾಂಕ್ ಗಳಿಕೆಯೊಂದಿಗೆ 100ಕ್ಕೆ 100 ಫಲಿತಾಂಸದ ಸಾಧನೆಯನ್ನಿ ಶಿರಸಿ ಲಯನ್ಸ ಶಾಲೆ ಮುಂದುವರೆಸಿದೆ. ವಿದ್ಯಾರ್ಥಿಗಳು ಈ ಸಾಧನೆಗೆ ಆಡಳಿತ ಮಂಡಳಿಯು ಸಾಧಕ ವಿದ್ಯಾರ್ಥಿಗಳನ್ನು ಪಾಲಕರನ್ನು, ಶಿಕ್ಷಕರನ್ನು, ಶಿಕ್ಷಕೇತರ ಸಿಬ್ಬಂದಿಗಳನ್ನು ಅಭಿನಂದಿಸಿದೆ.
0 Comments