ಸತತ 13 ನೇ ಬಾರಿಗೆ ಚಂದನ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ನೂರಕ್ಕೆ ನೂರರ ಸಾಧನೆ
ಶಿರಸಿ: ಮಾರ್ಚ/ಎಪ್ರಿಲ್ 2025 ರಲ್ಲಿ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶಿರಸಿಯ ನರೇಬೈಲ್‌ನ ಮಿಯಾರ್ಡ್ಸ ಚಂದನ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳು ನೂರಕ್ಕೆ ನೂರರ ಫಲಿತಾಂಶ ಸಾಧಿಸಿ ರಾಜ್ಯ ಮಟ್ಟದ 6 ರ‍್ಯಾಂಕಗಳನ್ನು ಪಡೆದಿದ್ದಾರೆ.
ಇದು ಶಾಲೆಯ ಸತತ 13 ನೇ ಬಾರಿಯ ನೂರಕ್ಕೆ ನೂರರ ಫಲಿತಾಂಶದ ಸಾಧನೆಯಾಗಿರುವುದು ವಿಷೇಶ. ಪರೀಕ್ಷೆಗೆ ಕುಳಿತ 85 ವಿದ್ಯಾರ್ಥಿಗಳಲ್ಲಿ 63 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ಮತ್ತು 22 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ವಾಸವಿ ಸುಬ್ರಾಯ್ ಭಟ್ (623/625 ,99.68%) ಅಂಕ ಪಡೆದು ಶಾಲೆಗೆ ಪ್ರಥಮ ಹಾಗೂ ರಾಜ್ಯಕ್ಕೆ ಮೂರನೇ ಸ್ಥಾನ, ವಸುಂಧರಾ ವಿನಾಯಕ ಹೆಗಡೆ -(621/625,99.36%) ಶಾಲೆಗೆ ದ್ವಿತೀಯ ಹಾಗೂ ರಾಜ್ಯಕ್ಕೆ ಐದನೇ ಸ್ಥಾನ, ಕೀರ್ತಿ ಹೆಗಡೆ (620/625,99.20%) ಶಾಲೆಗೆ ತೃತೀಯ ಹಾಗೂ ರಾಜ್ಯಕ್ಕೆ ಆರನೇ ಸ್ಥಾನ, ಅಮೃತಾ ಜಯದೇವ್ ಪಾಟೀಲ್(617/625,98.72%) ಶಾಲೆಗೆ ನಾಲ್ಕನೇ ಹಾಗೂ ರಾಜ್ಯಕ್ಕೆ ಒಂಬತ್ತನೇ ಸ್ಥಾನ , ಅನನ್ಯ ನಾಗರಾಜ ಪಟಗಾರ್ ಹಾಗೂ ಸತ್ಯ ಗಂಗಾಧರ ಪುರದಮಠ (616/625,98.56%) ಶಾಲೆಗೆ ಐದನೇ ಸ್ಥಾನ ಹಾಗೂ ರಾಜ್ಯಕ್ಕೆ ಹತ್ತನೇ ಸ್ಥಾನ ಪಡೆದಿರುತ್ತಾರೆ.
85 ವಿದ್ಯಾರ್ಥಿಗಳಲ್ಲಿ 49 ವಿದ್ಯಾರ್ಥಿಗಳು ಶೇ. 90ಕ್ಕೂ ಅಂಕ ಪಡೆದು ಉತ್ತೀರ್ಣರಾಗಿರುವದು ವಿಶೇ಼ಷ ಸಾಧನೆ. ಶಾಲೆಯ ಗುಣಾತ್ಮಕ ಫಲಿತಾಂಶ 95.61%..
ದ್ವಿತೀಯ ಭಾಷೆಯಲ್ಲಿ 13 ವಿದ್ಯಾರ್ಥಿಗಳು,ತೃತೀಯ ಭಾಷೆಯಲ್ಲಿ 24 ವಿದ್ಯಾರ್ಥಿಗಳು, ಗಣಿತ ವಿಷಯದಲ್ಲಿ 4 ವಿದ್ಯಾರ್ಥಿಗಳು, ವಿಜ್ಞಾನ ವಿಷಯದಲ್ಲಿ 3 ವಿದ್ಯಾರ್ಥಿಗಳು, ಸಮಾಜ ವಿಜ್ಞಾನದಲ್ಲಿ 8 ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಪಡೆದಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಆಡಳಿತ ಮಂಡಳಿ, ಶಿಕ್ಷಕರು ಮತ್ತು ಪಾಲಕರು ಅಭಿನಂದಿಸಿದ್ದಾರೆ.
0 Comments