Hot Posts

6/recent/ticker-posts

90% ಸ್ವಾಗತಿಸಿದರು, 10% ಇದು ಅಸಾಧ್ಯ ಅಂದರು: ಅನಂತಮೂರ್ತಿ ಹೆಗಡೆ ಮನದಾಳದ ಮಾತು

ಸಮಾಜ ಸೇವೆಯಲ್ಲಿ ಜಿಲ್ಲೆಯಲ್ಲಿ ಮನೆ ಮಾತಾಗಿರುವ ಅನಂತಮೂರ್ತಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ ತಮ್ಮ ಮನದಾಳದ ಮಾತನ್ನು ಹಂಸದೊಂದಿಗೆ ಹಂಚಿಕೊಂಡಿದ್ದಾರೆ.

ನಾನು ನನ್ನ ಜಿಲ್ಲೆಗೆ ಮೆಡಿಕಲ್ ಕಾಲೇಜು ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಘಟ್ಟದ ಮೇಲೆ ಮತ್ತು ಕೆಳಗೆ ಬೇಕಾಗಿದೆ ಅಂತ ಪಾದಯಾತ್ರೆ ಮಾಡುತ್ತೇನೆ ಅಂದಾಗ ನೂರಕ್ಕೆ 90% ಜನ ಸ್ವಾಗತಿಸಿ ಖಂಡಿತ ಮಾಡಿ ಅಂದರು ಸ್ವಾಗತ ಮಾಡಿದರು , ಇನ್ನೂ 10% ಇದು ಅಸಾದ್ಯ , ಅಥವಾ ಚುನಾವಣಾ ಗಿಮಿಕ್ ಅಂದರು… ಕೆಲವು ಜನ ಬಹಳ ಕೇವಲ ವಾಗಿ ಫೇಸ್ ಬುಕ್ ನಲ್ಲಿ ಕಾಮೆಂಟ್ ಮಾಡುವುದನ್ನ ನೋಡಿದ್ದೆನೆ, ಯಾವುದೇ ಕೆಲಸ ಪ್ರಾರಂಭ ಮಾಡಿದರೂ ಸಹ ಮೊದಲು ಅವಮಾನ, ನಂತರ ಅನುಮಾನ ಕೊನೆಗೆ ಸನ್ಮಾನ ಇದ್ದೇ ಇರುತ್ತದೆ ಇದು ನನಗೆ ಬೇಜಾರಿಲ್ಲ ಯಾವುದೇ ಒಂದು ರಾಜಕೀಯ ಗಿಮಿಕ್ ಗಾಗಿ ನಾನು ಇದನ್ನ ಮಾಡುತ್ತಿಲ್ಲ, ಸೇವೆ ಸಲ್ಲಿಸಿದ್ದರ ಹಿಂದೆ ಯಾವುದೇ ದುರುದ್ದೇಶ ಇಲ್ಲ, ಇನ್ನಷ್ಟು ಸೇವೆ ಮಾಡಬೇಕಾದರೆ ಒಂದು ಅಸ್ತಿತ್ವ ಎನ್ನುವುದು ಬೇಕು ಅನ್ನುವ ವಿಚಾರ ಎಲ್ಲರಿಗೂ ಗೊತ್ತಿರುವುದೇ ಆಗಿದೆ. ನನ್ನಲ್ಲಿ ನಿರ್ದಿಷ್ಟ ವಾದ ಆಲೋಚನೆ ಗುರಿ ಇದೆ, ಗುರುವಿನ ಬೆಂಬಲ ಇದೆ ಎಂದು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ ಅನಂತಮೂರ್ತಿ ಹೆಗಡೆ.

            ನನ್ನ ಬಗ್ಗೆ ಇರುವ ಪ್ರಶ್ನೆಗಳು ಸಮಾಜದಲ್ಲಿ

೧) ಮೊದಲ ಪ್ರಶ್ನೆ

ಇಷ್ಟು ದಿನ ಎಲ್ಲಿದ್ದಿರಿ?

ಉತ್ತರ - ಭಾರತಕ್ಕೆ ಸ್ವಾತಂತ್ರ್ಯ ಹೋರಾಟ, ತುರ್ತು ಸಂದರ್ಭದಲ್ಲಿ, ಕಾವೇರಿ ಹೋರಾಟ ದಲ್ಲಿ ಎಲ್ಲಿದ್ದೇ ಎಂದು ಕೇಳಿದರೆ ನಾನೇನು ಹೇಳಲಿ? ಪ್ರಪಂಚದ ಎಲ್ಲ ವಿಚಾರದ ವಿಷಯದ ಹೋರಾಟ ಮಾಡಿಲ್ಲ ಎಂದರೆ ನಾನೇನು" ಹೋರಾಟ ಜೀವಿ" ಯಲ್ಲ ಪಾಪ ಕೆಲವರು ಪ್ರಪಂದಾದ್ಯಂತ ನಡೆಯುವ ಎಲ್ಲ ವಿಷಯಕ್ಕೂ ಹೋರಾಟ ಮಾಡುತ್ತಾರೆ, ನಾನು ಕೇವಲ ಆಯ್ದ ವಿಷಯ ಕ್ಕೆ ಮಾತ್ರ ಹೋರಾಟ ಮಾಡುತ್ತೇನೆ 

ನನ್ನ ಮನೆ ತೋಟ ಇರುವುದು ಬ್ಯಾಗದ್ದೆ ಯಲ್ಲಿ ಆಗಾಗ ಮನೆಗೆ ಬಂದು ಹೋಗುತ್ತಿದ್ದೆ ನಾನು ಮೂಲತಃ ಶಿರಸಿ ಯವನಾದರೂ ಹಲವಾರು ವರ್ಷ ಗಳು ಬೆಂಗಳೂರು ನಲ್ಲಿ ಇದ್ದೆ ಈಗ ಉದ್ಯಮ ಶಿರಸಿ ಯಲ್ಲಿ ಪ್ರಾರಂಭ ಮಾಡಿದ ಮೇಲೆ ಇಲ್ಲಿಯ ಸಂಪರ್ಕ ಜಾಸ್ತಿ ಆಯಿತು ಈಗ ಒಂದು ವರ್ಷ ದಿಂದ ಶಿರಸಿ ನಮ್ಮ ಜಿಲ್ಲೆಯ ಸಮಸ್ಯೆ ನನಗೆ ಅರ್ಥ ವಾಯಿತು

ನನ್ನ ಸಂಪಾದನೆಯ ಒಂದು ಭಾಗ ಹಣವನ್ನ ಚಾರಿಟೇಬಲ್ ಟ್ರಸ್ಟ್ ಮುಖಾಂತರ ದಾನ ಮಾಡುತ್ತ ಬಂದಿದ್ದೇನೆ ಆಗ ನನಗೆ ಇಲ್ಲಿಯ ಆರೋಗ್ಯ ಸಮಸ್ಯೆ ಅರ್ಥ ಆಗಿ ಹೋರಾಟ ಪ್ರಾರಂಭ ಮಾಡಿದೆ

೨) ಎರಡನೇ ಪ್ರಶ್ನೆ 

ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಯಾಕೆ ಬೇಕು ?

ಉತ್ತರ:- ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ವ್ಯಕ್ತಿಗೆ ತಕ್ಷಣ ಚಿಕಿತ್ಸೆ ಕೊಡಿಸಲೂ ಮೂರು ಗಂಟೆ ಪ್ರಯಾಣ ಮಾಡಬೇಕಾಗಿದೆ. ಹೃದಯ ಕಾಯಿಲೆ ಸೇರಿದಂತೆ ಯಾವುದೇ ಗಂಭೀರ ಸ್ವರೂಪದ ಸಮಸ್ಯೆಗೂ ಇಲ್ಲಿ ಸ್ಪಂದನೆ ಸಿಗದು. ತುರ್ತು ಚಿಕಿತ್ಸೆ ಮಾಡಿದರೂ ಮುಂದಿನ ಪ್ರಯಾಣ ಅನಿವಾರ‍್ಯವಾಗಿದೆ. 

ಕಿಡ್ನಿ, ಮೆದುಳು, ನರ , ಗರ್ಭಕೋಶ, ಲಿವರ್, ಹೇಗೆ ಯಾವುದೇ ಖಾಯಿಲೆಗೂ ಜಿಲ್ಲೆಯಿಂದ ಎರಡ್ಮೂರು ಬಸ್ಸುಗಳ ಮೂಲಕ ಮಣಿಪಾಲ, ಮಂಗಳೂರಿಗೆ ಹೆಚ್ಚಿನ ಚಿಕಿತ್ಸೆಗೆ ತೆರಳುವದು ಅನಿವಾರ‍್ಯವಾಗಿದೆ, ಅಪಘಾತ ಆದಾಗ ಏಷ್ಟೋ ಬಾರಿ ಮಾರ್ಗ ಮಧ್ಯೆ ಸಾವು ಸಂಭವಿಸಿದೆ ಇದಕ್ಕೆ ಯಾರು ಹೊಣೆ ?


೩) ಮೂರನೆಯ ಪ್ರಶ್ನೆ

ಮೆಡಿಕಲ್ ಕಾಲೇಜು ಯಾಕೆ ಬೇಕು?

ಉತ್ತರ :- ಎಲ್ಲಿಯ ತನಕ ಮೆಡಿಕಲ್ ಕಾಲೇಜು ಇರುವುದಿಲ್ಲವೋ ಅಲ್ಲಿಯ ತನಕ ವೈದ್ಯರು ಸಿಗುವುದಿಲ್ಲ , ಶಿರಸಿ ಸರ್ಕಾರಿ ಆಸ್ಪತ್ರೆ ಯಲ್ಲಿ ಸುಮಾರು ಒಂದು ವರ್ಷದಿಂದ ಜನರಲ್ ಪಿಜಿಷಿಯನ್ ಇಲ್ಲ , ಎಲ್ಲ ಇರುವ ಆಸ್ಪತ್ರೆ ಯಲ್ಲಿ ವೈದ್ಯರ ಕೊರತೆ ಇದು ಸರಿ ಹೋಗಬೇಕು ಅಂದರೆ ಮೆಡಿಕಲ್ ಕಾಲೇಜು ಪ್ರಾರಂಭ ಆಗಬೇಕು, ಆಗ ನುರಿತ ೫೦ ಮಂದಿ ವೈದ್ಯರು ಶಿಕ್ಷಕ ರಾಗಿ ಬರುತ್ತಾರೆ, ಅವರ ಸೇವೆ ನಮಗೆ ಸಿಗುತ್ತದೆ , ವೈದ್ಯ ವಿದ್ಯಾರ್ಥಿ ಗಳು ನಮಗೆ ಸೇವೆಗೆ ಸಿಗುತ್ತಾರೆ ಅದರಿಂದ ಆಸ್ಪತ್ರೆ ನಡೆಸಬಹುದು, ಇಲ್ಲದೆ ಹೋದರೆ ಯಾವುದೇ ಆಸ್ಪತ್ರೆ ಮಾಡಿ ಪ್ರಯೋಜನ ಇಲ್ಲ

೪) ನಾಲ್ಕನೆಯ ಪ್ರಶ್ನೆ 

ಮಂಗಳೂರಿನಲ್ಲಿ ೮ ಮೆಡಿಕಲ್ ಕಾಲೇಜು ಇದೆ, ಆದರೆ ಈಗ ಹೊಸ ಮೆಡಿಕಲ್ ಕಾಲೇಜು ಸಿಗೋದಿಲ್ಲ ಅಂತ ಹೇಳುತ್ತಾರಲ್ಲ?

ಉತ್ತರ:- ನಮ್ಮದು ಭಟ್ಕಳದಿಂದ ಮುಂಡಗೋಡ ೨೪೦ ಕಿಲೊ ಮೀಟರ್ ಇದೆ ಜನರ ಕಷ್ಟ ನೋಡಿ ಎರಡು ಕೊಡಿ ಎಂಬುದಾಗಿ ಕೇಳುತ್ತೇವೆ ನಿಮಗೆ, ನಮ್ಮ ಕಷ್ಟವನ್ನು ನೋಡಿ ದೆಹಲಿ ಏಮ್ಸ್ ನಂತಹ ಆಸ್ಪತ್ರೆ, ವೈದ್ಯಕೀಯ ವಿಜ್ಞಾನ ಸಂಸ್ಥೆ ಮಾಡಿ ಎಂಬುದಾಗಿ ಕೇಳಿಕೊಳ್ಳುತ್ತೇವೆ

೫) ಐದನೆಯ ಪ್ರಶ್ನೆ

ನಮ್ಮ ಜಿಲ್ಲೆಯಲ್ಲಿ ರೋಗಿಗಳ ಕೊರತೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಇದೆ ಅನ್ನೋದು ಸಮರ್ಥನೆ ಹೇಗೆ ಮಾಡ್ತೀರಾ?

ಉತ್ತರ:- ಮಂಗಳೂರು ಕೆ ಎಸ್ ಹೆಗಡೆ ಆಸ್ಪತ್ರೆಗೆ ಕೇವಲ ಮಂಗಳೂರಿನವರು ಮಾತ್ರ ಬರುತ್ತಾರ? ನಾವು ಒಳ್ಳೆ ಆಸ್ಪತ್ರೆ ಮಾಡಿದರೆ ಹಾವೇರಿ, ಶಿವಮೊಗ್ಗ, ಉತ್ತರ ಕನ್ನಡ, ಧಾರವಾಡ ಎಲ್ಲ ಜಿಲ್ಲೆಯವರು ಬರುತ್ತಾರೆ

೬) ಆರನೇ ಪ್ರಶ್ನೆ

ರೂಪಾಯಿ 200 ಕೋಟಿ ಬೇಕು ಪ್ರಶ್ನೆಗೆ ಉತ್ತರ ಇದೆಯಾ

ಉತ್ತರ:- ಸಂಪೂರ್ಣ ವ್ಯಾಪಾರ ದೃಷ್ಟಿಯಿಂದ ನೋಡುವ ಆಸ್ಪತ್ರೆ ಯಿಂದ ಏನೋ ಪ್ರಯೋಜನವಿಲ್ಲ ವ್ಯಕ್ತಿ ಸತ್ತ ಮೇಲೂ ಶವ ಇಟ್ಟುಕೊಂಡು ಹಣ ಮಾಡುವವರನ್ನು ಕಂಡಿದ್ದೇವೆ ನಮಗೆ ಸರ್ಕಾರಿ ಅಥವಾ ಚಾರಿಟೇಬಲ್ ಟ್ರಸ್ಟ್ ನಡೆಸುವ ಮಂಗಳೂರಿನ ಕೆ ಎಸ್ ಹೆಗಡೆ ತರಹ ಒಳ್ಳೆ ಆಸ್ಪತ್ರೆ ಬೇಕು 200 ಕೋಟಿ ಅಲ್ಲ 500 ಕೋಟಿ ವ್ಯವಸ್ಥೆ ಮಾಡೋಣ…

ಹಾಗಾದರೆ ಏನು ಮಾಡಬೇಕು?

KIADB ಇಂಡಸ್ಟ್ರಿಯಲ್ ತರ ಮಾಡಬೇಕು ಭೂಮಿಯನ್ನ ಸರ್ಕಾರ ಸ್ವಾಧೀನ ಪಡಿಸಿ ಕೊಂಡು, ರಸ್ತೆ ನೀರು ವಿದ್ಯುತ್ ಎಲ್ಲ ಮೂಲಭೂತ ಸೌಕರ್ಯ ನಿರ್ಮಾಣ ಮಾಡಿ ಉದ್ಯಮ ದಾರರಿಗೆ ಕೊಟ್ಟು ೫ ವರ್ಷದ ಒಳಗೆ ಫ್ಯಾಕ್ಟರಿ ಪ್ರಾರಂಭ ಮಾಡುವಂತೆ ಆದೇಶ ಮಾಡುತ್ತದೆ ಆಗ ಉದ್ಯಮದಾರರು ಸಾವಿರಾರು ಕೋಟಿ ಹೂಡಿಕೆ ಮಾಡುತ್ತಾರೆ ಇಲ್ಲಿ ಕೂಡ , ಮೆಡಿಕಲ್ ಕಾಲೇಜು ಅಂಡ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಅನುಮತಿ, ಜಾಗ, ಮೂಲಭೂತ ಸೌಕರ್ಯ ಸರ್ಕಾರ ಒದಗಿಸಿಕೊಟ್ಟರೆ ಹಣವನ್ನ ನಾನು ವ್ಯವಸ್ಥೆ ಮಾಡುತ್ತೇನೆ 


೭) ಏಳನೆಯ ಪ್ರಶ್ನೆ

500 ಕೋಟಿ ಹೇಗೆ ಹಣ ವ್ಯವಸ್ಥೆ ?

ಉತ್ತರ:- ಇತ್ತೀಚೆಗೆ ತಾವು ನೋಡಿರಬಹುದು ಇನ್ಫೋಸಿಸ್ ಸಹ ಸಂಸ್ಥಾಪಕ ನಂದನ್ ನೀಲೇಕಣಿ ಯವರು ಮುಂಬೈ ಐಐಟಿ ಗೆ 341 ಕೋಟಿ ಹಣ ದಾನ ಮಾಡಿದ್ದಾರೆ ಅವರು ನಮ್ಮ ಶಿರಸಿ ಮೂಲದವರು ಅಂತಹ ಮಹಾನುಭಾವರು ಪುಣ್ಯವಂತರು ನಮ್ಮ ದೇಶದಲ್ಲಿ ತುಂಬಾ ಜನ ಇದ್ದರೆ, ಎಲ್ಲ ದೊಡ್ಡ ದೊಡ್ಡ ಕಂಪನಿ ಗಳಲ್ಲಿ CSR ಫಂಡ್ 2% ಇರುತ್ತದೆ

ನಮ್ಮ ಉತ್ತರ ಕನ್ನಡದ ಜನ ಇಡೀ ಪ್ರಪಂಚದಾದ್ಯಂತ ಇದ್ದಾರೆ ಖಂಡಿತ ಸಹಾಯ ಮಾಡುತ್ತಾರೆ ನಾವು ಟ್ರಸ್ಟ್ ಮೂಲಕ ಈ ಜಿಲ್ಲೆಗೆ ಒಳ್ಳೆ ಆಸ್ಪತ್ರೆ ಮಾಡುತ್ತೇವೆ ಎಂದರೆ ಹಲವಾರು ದಾನಿಗಳು ಮುಂದೆ ಬರುತ್ತಾರೆ ಆ ಕೆಲಸ ನಾ ಮಾಡುತ್ತೇನೆ ಸರಕಾರ ದವರು ಜಾಗವನ್ನು ಕೊಟ್ಟು , ಅನುಮತಿ ಮತ್ತು ಮೂಲಭೂತ ಸೌಕರ್ಯ ನಿರ್ಮಾಣ ಮಾಡಬೇಕು ಅಷ್ಟೇ ಮೊದಲೇ ಹೇಳಿದಂತೆ ಆಸ್ಪತ್ರೆ ಚಾರಿಟೇಬಲ್ ಟ್ರಸ್ಟ್ ಮುಖಾಂತರ ಅಥವಾ ಸರ್ಕಾರ - ಟ್ರಸ್ಟ - ಪಬ್ಲಿಕ್ ಸಹಯೋಗದಲ್ಲಿ ನಡೆಸಬೇಕು, ಆಗ ಮಾತ್ರ ಕಡಿಮೆ ದರದಲ್ಲಿ ಚಿಕಿತ್ಸೆ ಸಿಗುವುದು

ಕೊನೆಯ ಮಾತು

ನಾನು ಇದೆಲ್ಲವನ್ನೂ ಯಾವುದೇ ರಾಜಕೀಯ ಉದ್ದೇಶಕ್ಕೆ ಮಾಡುತ್ತಿಲ್ಲ ಹಾಗಂತ ರಾಜಕೀಯ ಕೆಟ್ಟದ್ದಲ್ಲ ಕೆಲವು ರಾಜಕಾರಣಿ ಗಳು ಕೆಟ್ಟವರಿರಬಹುದು, ಎಲ್ಲ ರಂಗ ದಲ್ಲೀ ಕೆಟ್ಟವರು ಒಳ್ಳೆಯವರು ಇದ್ದೆ ಇರುತ್ತಾರೆ ಎಲ್ಲರೂ ಕೆಟ್ಟವರಲ್ಲ ಎಲ್ಲವರೂ ಒಳ್ಳೆಯವರಲ್ಲ ಇದು ಪ್ರಪಂಚದ ನಿಯಮ ಶ್ರೀ ನರೇಂದ್ರ ಮೋದಿ ಯವರೂ ಕೂಡ ರಾಜಕೀಯ ಕೆಟ್ಟದ್ದು ಅಂತ ದೂರವಿದ್ದಿದರೆ ನಮ್ಮ ದೇಶದ ಕಥೆ ಏನಾಗುತ್ತಿತ್ತು ಒಮ್ಮೆ ಯೋಚಸಿ?

ನನ್ನ ಹಣೆಯಲ್ಲಿ ರಾಜಕೀಯ ಯೋಗ ಇದ್ದರೆ, ನನಗೆ ಆ ಯೋಗ್ಯತೆ ಇದ್ದರೆ ಆಗೆ ಆಗುವುದು, ಅದರ ಬಗ್ಗೆ ಜಾಸ್ತಿ ಯೋಚನೆ ಬೇಡ ಈಗ ಹೋರಾಟದ ಬಗ್ಗೆ ಸೇವೆಯ ಬಗ್ಗೆ ಮಾತ್ರ ಗಮನ ಅಷ್ಟೇ "ಮೆಡಿಕಲ್ ಕಾಲೇಜು ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಮ್ಮ ಭಾಗದಲ್ಲಿ ಆಗೆ ಆಗುತ್ತದೆ ಆಗಲೇ ಬೇಕು" ದೈರ್ಯವಾಗಿ ಇರಿ ನಾವಿದ್ದೇವೆ ಇಷ್ಟು ದಿನದ ಲೆಕ್ಕ ಬೇರೆ ಇನ್ನು ಮೇಲಿನ ಲೆಕ್ಕ ಬೇರೆ 

-ಅನಂತ ಮೂರ್ತಿ ಹೆಗಡೆ



ಪ್ರತಿಕ್ರಿಯೆ

Post a Comment

0 Comments