ಶಿರಸಿ ಬಳಿ ಕಾನಳ್ಳಿ ಊರಿನ ಲೋಕೇಶ ಹೆಗಡೆ ಇವರು ಮನೆಯ ಅಂಗಳದಲ್ಲಿ 3000 ಅಡಿಕೆ ಸಸಿಯನ್ನು ಸಂಪೂರ್ಣ ಸಾವಯವ ರೀತಿಯಲ್ಲಿ ತಯಾರು ಮಾಡಿದ್ದಾರೆ. ಅಡಿಕೆ ಸಸಿಯ ವಿಶೇಷತೆ ಏನೆಂದರೆ ಚಾಲಿಗೂ ಬರುತ್ತದೆ, ಕೆಂಪಡಿಕೆಗೆ ಆಗುತ್ತದೆ.
ಹೇಗೆ ತಯಾರು ಮಾಡ್ತಾರೆ ಗೊತ್ತಾ?
ಕೊಟ್ಟೆಯಲ್ಲಿ ಅಡಿಕೆ ಹಾಕುವಾಗ ಪ್ರತಿ ವರ್ಷ ಫಲ ಬಿಡುವ ಉತ್ತಮ ಅಡಿಕೆ ಮರದ ಅಡಿಕೆ ಕೊನೆ ಬೀಜದ ಅಡಿಕೆ ಬಳಸುತ್ತಾರೆ. ಅಡಿಕೆಯ ಸಿಪ್ಪೆ ತೆಳ್ಳಗಿರಬೇಕು ಎನ್ನುತ್ತಾರೆ. ಕೊಟ್ಟೆಯಲ್ಲಿ ಇವರು ಮಣ್ಣು ಮತ್ತು ದಡ್ಡಿ ಗೊಬ್ಬರ ಮಾತ್ರ ಹಾಕಿ ನಿಯಮಿತವಾಗಿ ನೀರು ಉಣಿಸುತ್ತಾರೆ. ನಂತರದ ದಿನಗಳಲ್ಲಿ ಪ್ರತಿವಾರಕ್ಕೊಮ್ಮೆ ದಡ್ಡಿ ಗೊಬ್ಬರ, ಕೊಟ್ಟಿಗೆ ಯನ್ನು ತೊಳೆದ ನೀರನ್ನು ಹಾಯಿಸುತ್ತಾರೆ. ಇದರ ಜೊತೆ ಜೊತೆ ಇಡೀ ಸಸಿಗೆ ಗೋಮೂತ್ರ ಸಿಂಪಡಣೆ ಮಾಡುತ್ತಾರೆ. ಹೀಗಾದಾಗ ಮಾತ್ರ ಉತ್ತಮ ಗುಣಮಟ್ಟದ ಅಡಿಕೆ ಸಸಿ ತಯಾರಾಗುತ್ತದೆ ಎನ್ನುತ್ತಾರೆ ಲೋಕೇಶ ಹೆಗಡೆ.
ವಿವಿಧೆಡೆಯಿಂದ ಬೇಡಿಕೆ
ಈ ಬಗ್ಗೆ ಹಂಸ ಯುಟ್ಯೂಬ್ ಚಾನೆಲ್ ನಲ್ಲಿ ವಿಡಿಯೋ ಕೂಡ ಪ್ರಸಾರವಾಗಿದೆ. ಕೆಳಗಿರುವ ಲಿಂಕ್ ಅನ್ನು ಕಾಪಿ ಮಾಡಿ ಗೂಗಲ್ ಸರ್ಚ್ ಮಾಡಿ
https://youtu.be/GkVNPxlmA7Y
0 Comments