Hot Posts

6/recent/ticker-posts

ನೀವಿರೋ ಜಾಗ ಯಾರದ್ದು ನೋಡೋದು ಸಿಂಪಲ್!

ತಂತ್ರಜ್ಞಾನವನ್ನು ನಾವು ಬಳಸಿಕೊಳ್ಳುವುದರ ಮೇಲಿದೆ. ಸರಕಾರ, ಸರಕಾರ ಅಭಿವೃದ್ಧಿಪಡಿಸಿದ ತಂತ್ರಜ್ಞಾನ ತಿಳಿದುಕೊಂಡರೆ ಉತ್ತಮ. ನೀವು ರಿಯಲ್ ಎಸ್ಟೇಟ್ ಉದ್ದಿಮೆ ನಡೆಸುತ್ತಿದ್ದರೆ ಅಥವಾ ನಿಮ್ಮದೇ ಆದ ಲ್ಯಾಂಡ್ ಒಂದನ್ನು ಖರೀದಿ ಮಾಡಲು ಉತ್ಸುಕರಾಗಿದ್ದರೆ ಆ್ಯಪ್ ನಿಮ್ಮ ಮೊಬೈಲ್ ನಲ್ಲಿ ಇರಲಿ. 

ಭೂಮಿ ಖರೀದಿಸುವಾಗ ಎಷ್ಟು ವಿಚಾರ ಮಾಡಿದರೂ ಸಾಲದು, ಅದೇ ತರಹ ನಿಮ್ಮ ಆಸ್ತಿ ಸಂಬಂಧಪಟ್ಟಂತೆ ವಿವರಗಳನ್ನು ತಿಳಿದಿಟ್ಟುಕೊಳ್ಳುವುದು ಒಳ್ಳೆಯದು. ಈ ಎಲ್ಲ ವಿಷಯಗಳಿಗೆ ಸಂಬಂಧಿಸಿದಂತೆ "ದಿಶಾಂಕ" ಆ್ಯಪ್ ನಿಮಗೆ ತುಂಬಾ ಉಪಯುಕ್ತವಾಗಬಲ್ಲದು. ಇರೋ ಜಾಗ ಯಾರದ್ದು ಯಾರ ಒಡೆತನದಲ್ಲಿದೆ ಎಂಬುದನ್ನು ಮತ್ತು ಎಷ್ಟು ಪ್ರದೇಶವಿದೆ ಎಂಬುದನ್ನು ಪಿನ್ ಟು ಪಿನ್ ಮಾಹಿತಿ ಇದರಿಂದ ನಿಮಗೆ ಸಿಗುತ್ತದೆ.

ಮೊದಲು ಇಲ್ಲಿ ಒತ್ತಿ ನೀವು ಪ್ಲೇಸ್ಟೋರ್ ನಿಂದ ದಿಶಾಂಕ ಆ್ಯಪ್ ಡೌನ್ಲೋಡ್ ಮಾಡಿ. ನಂತರ ಭಾಷೆ ಆಯ್ಕೆ ಮಾಡಿ, ಆಗ ನೀವು ಇರೋ ಜಾಗವನ್ನು ಆರೋ ಮಾರ್ಕ್ ಮೂಲಕ ತೋರಿಸುತ್ತಿರುತ್ತದೆ ಅದನ್ನು ಕ್ಲಿಕ್ ಮಾಡಿ more details ಆಯ್ಕೆ ಒತ್ತಿದ ತಕ್ಷಣ ಆ ಭೂಮಿ ಸರ್ವೇ ನಂಬರ್, ಯಾರ ಒಡೆತನದಲ್ಲಿದೆ ಎಂಬುದು ತಿಳಿದುಬರುತ್ತದೆ. ಅಲ್ಲದೆ ನೀವು ಯಾವುದೇ ಸರ್ವೇ ನಂಬರ್ ನಮೂದಿಸಿ ಕೂಡ ಅದರ ವಿವರ ಪಡೆಯಬಹುದು. 



ಪ್ರತಿಕ್ರಿಯೆ

Post a Comment

2 Comments