Hot Posts

6/recent/ticker-posts

ನಿಮ್ಮ ಆಧಾರ್ ಕಾರ್ಡ ಬ್ಯಾಂಕ್ ಖಾತೆಗೆ ಲಿಂಕ್ ಆಗಿದೆಯೇ? ನೋಡೋದು ಸುಲಭ

ನಮ್ಮ ಬ್ಯಾಂಕ್ ಆಧಾರ್ ಕಾರ್ಡ್ ಲಿಂಕ್ ಆಗಿದೆಯೋ ಇಲ್ಲವೋ ಎಂಬುದು ಕೆಲವೊಮ್ಮೆ ನಮಗೇ ತಿಳಿದಿರುವುದಿಲ್ಲ. ಇನ್ನು ಮತ್ತೊಂದು ಸಮಸ್ಯೆಯೆಂದರೆ 2-3 ಬ್ಯಾಂಕ್ ಖಾತೆ ಹೊಂದಿದ್ದರೆ ಅವೆಲ್ಲಕ್ಕೂ ಆಧಾರ ಕಾರ್ಡ್ ಲಿಂಕ್ ಆಗಿದೆಯಾ ಕೂಡ ನಮಗೆ ಗೊತ್ತಿರುವುದಿಲ್ಲ. ಈಗ ಕಂಡು ಹಿಡಿಯಲು ಇಲ್ಲಿದೆ ಸುಲಭ ಉಪಾಯ. 

ಇಲ್ಲಿ ಕ್ಲಿಕ್ ಮಾಡಿ UIDAI ಅಧಿಕೃತ ವೆಬ್ಸೈಟ್ಗೆ ಹೋಗಿ. ನಂತರ ಅಲ್ಲಿ ನಿಮ್ಮ 12 ಅಂಕಿಗಳ ಆಧಾರ ಸಂಖ್ಯೆ ನಮೂದಿಸಿ, ಅಲ್ಲಿರುವ ಸೆಕ್ಯೂರಿಟಿ ಕೋಡನ್ನು ಬರೆಯಿರಿ. ನಂತರ send OTP ಬಟನ್ ಕ್ಲಿಕ್ ಮಾಡಿ. ನಿಮ್ಮ ಮೊಬೈಲ್ ಗೆ 6 ಅಂಕಿಗಳ ಕೋಡ್ ಸಂಖ್ಯೆ ಬರುತ್ತದೆ ಇದನ್ನು ನಮೂದಿಸಿ submit ಬಟನ್ ಕ್ಲಿಕ್ ಮಾಡಿದರಾಯಿತು… ಈ ಕೆಳಗಿನಂತೆ ನಿಮಗೆ ನಿಮ್ಮ ಯಾವ ಬ್ಯಾಂಕ್ ಖಾತೆಗೆ ಯಾವ ದಿನಾಂಕದಂದು ಆಧಾರ್ ಸಂಖ್ಯೆ ಲಿಂಕ್ ಆಗಿದೆ ಎಂಬುದು ತಿಳಿದುಬರುತ್ತದೆ. 

ಪ್ರತಿಕ್ರಿಯೆ

Post a Comment

0 Comments