Hot Posts

6/recent/ticker-posts

ಡಾ. ಭಾಸ್ಕರ ಸ್ವಾದಿ ಮೆಮೊರಿಯಲ್ ಲಯನ್ಸ ಪಿ.ಯು. ಕಾಲೇಜಿಗೆ ಶೆ ೯೭ ಫಲಿತಾಂಶ : ೫೯೦ ಅಂಕ ಪಡೆದ ಸೌಖ್ಯ ಕಾಲೇಜಿಗೆ ಪ್ರಥಮ

       

ಉತ್ತರಕನ್ನಡ ಜಿಲ್ಲೆಯ ಮೊಟ್ಟಮೊದಲ  ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಿತ ಶಿರಸಿಯ ಡಾ. ಭಾಸ್ಕರ ಸ್ವಾದಿ ಮೆಮೋರಿಯಲ್ ಲಯನ್ಸ ಪಿ.ಯು. ಕಾಲೇಜಿನ  ಫಲಿತಾಂಶ ಶೇ.೯೬.೬೧ ದಾಖಲಾಗಿದ್ದು ಪರೀಕ್ಷೆಗೆ ಕುಳಿತ ೫೯ ವಿದ್ಯಾರ್ಥಿಗ ಳಲ್ಲಿ ೪೩ ವಿದ್ಯಾರ್ಥಿಗಳು  ಶೆ. ೮೫ಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ.

ದ್ವಿತೀಯ ಪಿ.ಯು ವಾಣಿಜ್ಯ ವಿಭಾಗದಲ್ಲಿ  ಸೌಖ್ಯ ವಿನಾಯಕ ಹೆಗಡೆ  ೫೯೦, (ಶೇ. ೯೮.೩೩)  ಅಂಕ ಹಾಗೂ ಹಿಂದಿ ಹಾಗೂ ಸಂಖ್ಯಾಶಾಸ್ತ ವಿಷಯದಲ್ಲಿ ೧೦೦ಕ್ಕೆ ೧೦೦ ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದರೆ. ಅಚಲಾ  ನಂದೀಶ ದೇವಾಸೂರ ೫೮೩ (ಶೇ. ೯೭.೧೬) ಅಂಕದೊಂದಿಗೆ ದ್ವಿತೀಯ ಸ್ಥಾನ ಹಾಗೂ  ಐಶ್ವರ್ಯ ಶೆಟ್ಟರ  ೫೭೯ (ಶೆ.೯೬.೫) ಅಂಕದೊಂದಿಗೆ ತೃತೀಯ ಸ್ಥಾನ ಪಡೆದಿದ್ದಾರೆ. ಪರೀಕ್ಷೆಗೆ ಹಾಜರಾದ ಎಲ್ಲ ಹನ್ನೊಂದು  ವಿದ್ಯಾರ್ಥಿಗಳು ಶೇ.೬೫ಕ್ಕಿಂತ ಹೆಚ್ಚಿನ ಅಂಕ ಪಡೆದು  ಸಾಧನೆ ಮೆರೆದಿದ್ದಾರೆ. ಶೆ ೯೦ಕ್ಕಿಂತ ಹೆಚ್ಚು ಅಂಕವನ್ನು ೭ ವಿದ್ಯಾರ್ಥಿಗಳು ಪಡೆದಿದ್ದಾರೆ. 

ದ್ವಿತೀಯ ಪಿ.ಯು ವಿಜ್ಞಾನ ವಿಭಾಗದಲ್ಲಿ   ಆರಾಧ್ಯಾ ಆರ್ ಟಿ. ೫೮೫   (ಶೇ. ೯೭.೫) ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದರೆ. ಧನ್ಯಾ ಕಡಪಟ್ಟಿ ೫೭೮  (ಶೆ.೯೬.೩ ) ಅಂಕದೊಂದಿಗೆ ದ್ವಿತೀಯ ಸ್ಥಾನ   ಮಾನಸಾ ಗಾಂವಕರ೫೭೬ ಅಂಕದೊಂದಿಗೆ ತೃತೀಯ ಸ್ಥಾನ ಹಾಗೂ  ಗಣಿತ ವಿಷಯದಲ್ಲಿ ೧೦೦ಕ್ಕೆ ೧೦೦ ಅಂಕ ಪಡೆದಿದ್ದಾರೆ. ಶೆ ೯೫ ಕ್ಕಿಂತ ಹೆಚ್ಚು ಅಂಕವನ್ನು ೬ ವಿದ್ಯಾರ್ಥಿಗಳು, ಶೆ ೯೦ಕ್ಕಿಂತ ಹೆಚ್ಚು ಅಂಕವನ್ನು ೨೫ ವಿದ್ಯಾರ್ಥಿಗಳು ಶೆ.  ೮೫ ಕ್ಕಿಂತ ಹೆಚ್ಚು ಅಂಕವನ್ನು ೩೫ ವಿದ್ಯಾರ್ಥಿಗಳು ಪಡೆದಿದ್ದಾರೆ.

ಗಣಿತದಲ್ಲಿ ೭, ಸಂಖ್ಯಾಶಾಸ್ತದಲ್ಲಿ ೨, ಗಣಕ ವಿಜ್ಞಾನದಲ್ಲಿ ೨, ಸಂಸ್ಕೃತದಲ್ಲಿ ೧, ವ್ಯವಹಾರ ಅಧ್ಯಯನದಲ್ಲಿ ೧, ಭೌತಶಾಸ್ತದಲ್ಲಿ ೧, ಕನ್ನಡದಲ್ಲಿ ೧, ವಿದ್ಯಾರ್ಥಿಗಳು ೧೦೦ಕ್ಕೆ ೧೦೦ ಅಂಕ ಪಡೆದಿದ್ದಾರೆ 

ಸಾಧನೆಗೈದ ವಿದ್ಯಾರ್ಥಿಗಳಿಗೆ ಗಳಿಗೆ, ಇವರ ಸಾಧನೆಗೆ ಬೆನ್ನೆಲುಬಾಗಿ ನಿಂತ ಪಾಲಕರಿಗೆ , ಬೋಧಕ ವೃಂದಕ್ಕೆ   ಶಿರಸಿ ಲಯನ್ಸ ಎಜುಕೇಷನ್ ಸೊಸೈಟಿಯ  ಅಧ್ಯಕ್ಷರು ಹಾಗೂ ಸ  ಸದಸ್ಯರು, ಬೇಸ್ ಎಜುಕೇಷನ್  ಬೆಂಗಳೂರಿನ ತಂಡ, ಲಯನ್ಸ    ಕಾಲೇಜಿನ  ಪ್ರಾಚಾರ್ಯರು , ಬೋಧಕ -ಬೋಧಕೇತರ ವೃಂದ, ಶಿರಸಿ  ಲಯನ್ಸ್  ಕ್ಲಬ್ ಬಳಗ  ಆಶೀರ್ವಾರದಪೂರಕವಾಗಿ ಅಭಿವಂದಿಸಿ, ಶುಭ ಹಾರೈಸಿರುತ್ತಾರೆ.

೨೦೨೫- ೨೬ನೇ ಸಾಲಿನ ಪ್ರಥಮ ಪಿ.ಯು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದ ಪ್ರವೇಶ ಪ್ರಕ್ರಿಯೆ ನಡೆದಿದ್ದು, ಆಸಕ್ತ ಪಾಲಕರು ತಮ್ಮ ಮಕ್ಕಳನ್ನು ಸೇರಿಸ ಬಹುದಾಗಿದೆ.ಉತ್ತರಕನ್ನಡ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಿತ ಕಾಲೇಜು ಶಿರಸಿ ಲಯನ್ಸ ಅಕಾಡೆಮಿ , ಬೇಸ್ ಎಜುಕೇಷನ್ ಬೆಂಗಳೂರು   ಇವರ ಸಹಯೋಗದಲ್ಲಿ ನಡೆಯುತ್ತಿದೆ. ಆಸಕ್ತರು ಕೂಡಲೆ ಕಾರ್ಯಾ ಲಯವನ್ನು ಸಂಪರ್ಕಿಸಲು ಕೋರಿದೆ.

ಪ್ರತಿಕ್ರಿಯೆ

Post a Comment

0 Comments