Hot Posts

6/recent/ticker-posts

ತಲೆಕೂದಲು ಉದುರುವಿಕೆ ಮನೆ ಚಿಕಿತ್ಸೆ

ತಲೆಕೂದಲು ಉದುರುವಿಕೆ ಮನೆ ಚಿಕಿತ್ಸೆ 
ಅಪೌಷ್ಟಿಕತೆ, ನೀರಿನ ವ್ಯತ್ಯಾಸ, ಮಾನಸಿಕ ಒತ್ತಡ, ವೈಯಕ್ತಿಕ ಸ್ವಚ್ಛತೆ ಅಭಾವ, ಕೆಲವು ಕಾಯಿಲೆಗಳು ಮೇಲಿಂದ ಮೇಲೆ ಕೇಶವರ್ಧಕ ಇತ್ಯಾದಿ ವಸ್ತುಗಳ ಬದಲಾವಣೆ ಎಲ್ಲ ತಲೆ ಕೂದಲು ಉದುರುವುದಕ್ಕೆ ಕಾರಣವಾಗಬಹುದು

*ಎರಡು ಹಿಡಿ ಆಲದ ಎಲೆಗಳನ್ನು ಸಣ್ಣ ಚೂರುಗಳನ್ನಾಗಿ ಕತ್ತರಿಸಿ 1ಲೀ ಎಳ್ಳೆಣ್ಣೆಯಲ್ಲಿ ಕಾಯಿಸಿ ತಣ್ಣಗಾದ ಮೇಲೆ ಎಣ್ಣೆಯನ್ನು ಶೋಧಿಸಿ ಇಟ್ಟುಕೊಂಡು ತಲೆಗೆ ದಿನಕ್ಕೆ ಒಂದು ಬಾರಿಯಂತೆ ದೀರ್ಘಕಾಲ ಹಚ್ಚಬೇಕು 

*ಒಂದು ಲೀಟರ್ ಕೊಬ್ಬರಿ ಎಣ್ಣೆಗೆ 50ಗ್ರಾಂ ಮೆಂತ್ಯವನ್ನು ಪುಡಿಮಾಡಿ ಸೇರಿಸಿ ಮಿಶ್ರಣವನ್ನು ಎಳೆಯ ಬಿಸಿಲಿನಲ್ಲಿ ಹದಿನೈದು ದಿನಗಳ ಕಾಲ ಇರಿಸಿ, ಪ್ರತಿದಿನ ತಲೆಗೆ ದಿನಕ್ಕೆ ಒಂದು ಬಾರಿಯಂತೆ ದೀರ್ಘಕಾಲ ಹಚ್ಚಬೇಕು 

*ಒಂದು ಚಮಚ ತ್ರಿಫಲ ಚೂರ್ಣ ವನ್ನು ಒಂದು ಲೋಟ ನೀರಿನಲ್ಲಿ ಕಲಸಿ ಸೇವಿಸುವುದು 

*ಒಂದಲಗ, ಆಲದ ಎಲೆ, ಅಂಬಾಡಿ ವೀಳ್ಯದ ಎಲೆ, ಹೊನಗೊನೆ ಸೊಪ್ಪು, ಇವುಗಳನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಪುಡಿಮಾಡಿ ಕೊಬ್ಬರಿ ಎಣ್ಣೆಯಲ್ಲಿ ಹಾಕಿ ಕುದಿಸಿ ತಣಿಸಿ ಬಟ್ಟೆಯಲ್ಲಿ ಶೋಧಿಸಿದ ಎಣ್ಣೆಯನ್ನು ಪ್ರತಿದಿನ ತಲೆಗೆ ದಿನಕ್ಕೆ ಒಂದು ಬಾರಿಯಂತೆ ದೀರ್ಘಕಾಲ ಹಚ್ಚಬೇಕು 

ಕೃಪೆ ಆಧಾರ:
ಹಸಿರು ಸಂರಕ್ಷಣೆ - ಹಸಿರು ಆರೋಗ್ಯ 
(ಮೂಲಿಕಾ ಸಂರಕ್ಷಣೆ ಮತ್ತು ಪ್ರಾಥಮಿಕ ಆರೋಗ್ಯ ರಕ್ಷಣೆ ಕೈಪಿಡಿ)

ಪ್ರತಿಕ್ರಿಯೆ

Post a Comment

0 Comments