Hot Posts

6/recent/ticker-posts

150ವರ್ಷ ಹಳೆಯ ಕಲ್ಲಿನ ದೋಸೆ ಬಂಡಿ, ಹೇಗೆ ದೋಸೆ ಮಾಡ್ತಾರೆ ಗೊತ್ತಾ?

ಸಂಪಿಗೆಮನೆ ನಾರಾಯಣ ಚಂದ್ರಶೇಖರ ಹೆಗಡೆ ಅವರ ಮನೆಯಲ್ಲಿ ಇರುವ ಕಲ್ಲಿನ ದೋಸೆ ಬಂಡಿ. ಕಟ್ಟಿಗೆ ಒಲೆಯ ಮೇಲೆ ತವಾ ಇಟ್ಟು ಮಾಡುವ ದೋಸೆ. ಇದಕ್ಕೆ ನಂಜಿಕೊಳ್ಳಲು ಕಾಯಿಹಾಲು ತುಂಬಾ ರುಚಿ. ಕಲ್ಲಿನ ಬಂಡಿ ಕಾಯಲು ಒಂದರಿಂದ ಒಂದೂವರೆ ಗಂಟೆ ಬೇಕು... ಹಿಟ್ಟು ಸ್ವಲ್ಪ ದಪ್ಪ ಇದ್ದು ಹುಳಿ ಬಂದರೆ ಉತ್ತಮ ಬ್ರೆಡ್ ಅಂತೆ ಆಗುವ ದೋಸೆ ತುಂಬಾ ರುಚಿ , ತಾನಾಗಿಯೇ ಹಿಟ್ಟು ಹರಡಬೇಕು, ನಾಲ್ಕು ಪೀಸ್ ಮಾಡಿ ನಾಲ್ಕು ಜನರು ತಿನ್ನಬಹುದು. ಅಕ್ಕಿಯ ಎರಡರಷ್ಟು ಪ್ರಮಾಣ ಉದ್ದು ಬೇಕು... ಎನ್ನುತ್ತಾರೆ ಸುಮಾ ನಾರಾಯಣ ಹೆಗಡೆ. ಒಂದು ನೂರಾ ಐವತ್ತು ವರ್ಷಕ್ಕೂ ಹಿಂದಿನದು. ಎರಡು ವರ್ಷದ ಹಿಂದೆ ದೋಸೆ ಮಾಡಿದ ನೆನಪಿದೆ. ಬಂಡಿ ಕಾಯ್ದ ನಂತರ ಬೇಗ ಬೇಗ ದೋಸೆ ಮಾಡಬಹುದು ಅನ್ನುವುದು ಮನೆಯವರ ಅಭಿಪ್ರಾಯ.
ಬಹಳ ವರ್ಷಗಳಿಂದಲೂ ನಾವು ನೋಡುತ್ತಿದ್ದೇವೆ ಇದು ತುಂಬಾ ಅಪರೂಪದ ದೋಸೆ ಬಂಡಿ ಇದು ನನ್ನ ಅಜ್ಜ ಕೂಡ ಸಣ್ಣವರಿದ್ದಾಗಲೆ ಇದ್ದಿತ್ತಂತೆ . ಈ ಕಲ್ಲು ಒಡೆಯುವುದಿಲ್ಲ ಎನ್ನುತ್ತಾರೆ ನಾರಾಯಣ ಹೆಗಡೆ.

ಈ ಬಗ್ಗೆ ಹಂಸ YouTube ವಿಡಿಯೋ ಪ್ರಸಾರವಾಗಿದೆ... ಕೆಳಗಿರುವ ಲಿಂಕ್ ಅನ್ನು ಕಾಪಿ ಮಾಡಿ ಗೂಗಲ್ ಸರ್ಚ್ ಮಾಡಿ

https://youtu.be/tvNaZzOtoZk
ಪ್ರತಿಕ್ರಿಯೆ

Post a Comment

0 Comments