Hot Posts

6/recent/ticker-posts

ನೋಡುವಂತಿದೆ ಪ್ರಕಾಶ ಭಟ್ಟರ "ಔಷಧೀಯ ಕೃಷಿ"

ಹೀಗೂ ಕೃಷಿ ಮಾಡಬಹುದು ಎನ್ನುವುದಕ್ಕೆ ಪ್ರಕಾಶ ಭಟ್ಟರೇ ಉದಾಹರಣೆ. ಇಂದು ಶಿರಸಿಗರ ಗಮನ ಸೆಳೆಯುವಂತೆ ಮಾಡಿದ್ದು ಅವರ "ಅಶೋಕ ವನ" ಅಂದರೆ ಪೂರ್ತಿ ಔಷಧೀಯ ಸಸ್ಯಗಳೇ ತುಂಬಿರುವ ವನ. ಇಲ್ಲಿ 300 ರಿಂದ 350 ಔಷಧೀಯ ಸಸ್ಯಗಳಿವೆ. ಅವರು 2013 ನೆ ಇಸವಿಯಿಂದಲೆ ಪಟ್ಟ ಶ್ರಮ ಫಲ ನೀಡಲು ಆರಂಭಿಸಿದೆ. ನೀವು ಆಯ ತಪ್ಪಿ ಹೆಜ್ಜೆ ಇಟ್ಟರೂ ಅಲ್ಲಿ ನಿಮ್ಮ ಕಾಲು ಔಷಧೀಯ ಸಸ್ಯದ ಮೇಲೆಯೇ ಇರುತ್ತದೆ ಎಂಬುದು ಗಮನಾರ್ಹ. ಕಂಡ ಕಂಡ ಕಡೆಯಿಂದ ಸಸ್ಯ ತಂದು… ಡ್ರಿಪ್ ಮೂಲಕ ನೀರಾವರಿ ಕಲ್ಪಿಸಿ, ಅಗತ್ಯ ಗೊಬ್ಬರ ನೀಡಿ ಬೆಳೆಸಿದ ಗಿಡಗಳಿಲ್ಲಿ ಸಂತಸದಿಂದ ನಲಿಯುತ್ತಿವೆ. ಮತ್ತೊಬ್ಬರಿಗೆ ಔಷಧವಾಗುತ್ತಿವೆ, ಮತ್ತೆ ಕೆಲವರಿಗೆ ಅಧ್ಯಯನದ ವಸ್ತುವಾಗುತ್ತಿವೆ. ಇದುವರೆಗೆ ಸಾಕಷ್ಟು ಜನರು ಅಶೋಕ ವನಕ್ಕೆ ಭೇಟಿ ನೀಡಿದ್ದಾರೆ.

ಶಿರಸಿ ಸಮೀಪದ ಅಡೇಮನೆ ಊರಿನ ಪ್ರಕಾಶ ಕೃಷ್ಣ ಭಟ್ಟರು ಮುಂದಿನ ಪೀಳಿಗೆಯ ಸಲುವಾಗಿ ಔಷಧೀಯ ಸಸ್ಯಗಳನ್ನು ಸಂರಕ್ಷಿಸುವ ಕಾರ್ಯದಲ್ಲಿ ತೊಡಗಿ ಗಮನ ಸೆಳೆಯುತ್ತಿದ್ದಾರೆ. ಪ್ರಕಾಶ ಭಟ್ಟರ ಔಷಧೀಯ ವನದಲ್ಲಿ ನಾಲ್ಕು ಹಂತದ ಸಸ್ಯಗಳು ಕಾಣಲು ಸಿಗುತ್ತವೆ. ಮೊದಲನೆಯದು ಗಡ್ಡೆಯ ಮಾದರಿ ಅಂದರೆ ಅರಿಶಿನ, ಶುಂಠಿ, ಶತಾವರಿ ಮತ್ತಿತರ ಸಸ್ಯಗಳು. ಎರಡನೆಯದಾಗಿ ಕುಬ್ಜ ಜಾತಿಗೆ ಸೇರಿದ ಗಿಡಗಳು ಅಂದರೆ ಏಲಕ್ಕಿ, ನೆಲನೆಲ್ಲಿ, ಬಳ್ಳಿ ಅರಿಶಿನ, ಗಳಂಗ ಹೀಗೆ. ಮೂರನೆಯದಾಗಿ ಆರರಿಂದ ಏಳು ಅಡಿ ಎತ್ತರ ಬೆಳೆಯುವ ಔಷಧೀಯ ಸಸ್ಯಗಳು ಅಂದರೆ ಕೋಕಂ, ದಾಲ್ಚಿನ್ನಿ, ಲವಂಗ ಜೊತೆಗೆ ನಾಲ್ಕನೇಯದಾಗಿ ಎತ್ತರ ಬೆಳೆಯುವ ಅಗರವುಡ್, ಅಶೋಕ, ನೇರಳೆ ಇತರೆ ಸಸ್ಯಗಳು. ನಾಲ್ಕೂ ಹಂತದ ಮೂರು ನೂರಕ್ಕೂ ಹೆಚ್ಚು ಸಸ್ಯಗಳು ಇವರ ಅಶೋಕ ವನದಲ್ಲಿವೆ. ಪ್ರತಿಯೊಂದು ದೊಡ್ಡ, ಸಣ್ಣ ಮರಗಳಿಗೆ ಕಾಳುಮೆಣಸು ಬಳ್ಳಿಗಳಿವೆ. ಇವರು ವಿಶೇಷವಾಗಿ ಬೇಸಿಗೆಯಲ್ಲಿಯೂ ನೀರು ಬೇಡದ ಸಸ್ಯಪ್ರಬೇಧಗಳನ್ನು ಬೆಳೆಸಿದ್ದಾರೆ.

       ಇಲ್ಲಿರುವುದೆಲ್ಲ ಜೀವರಕ್ಷಕ ಸಸ್ಯಗಳು!
ಇಲ್ಲಿ ನವಗ್ರಹ ವನವೂ ಇದೆ. ಎರಡು ಎಕರೆಗೂ ಹೆಚ್ಚು ಕ್ಷೇತ್ರದಲ್ಲಿ ನೀರಾವರಿಯ ಮೂಲಕ ಸಸ್ಯ ಸಂಪತ್ತನ್ನು ಸಂರಕ್ಷಿಸುತ್ತಿದ್ದಾರೆ. ಪ್ರತಿ ಇಂಚು ಇಂಚಿಗೂ ಇಲ್ಲಿ ಕಾಲಿಗೆ ಸಿಗುತ್ತದೆ ಅಮೂಲ್ಯ ಔಷಧೀಯ ಸಂಪತ್ತು. ಯಾರೇ ಮಾಹಿತಿಗಾಗಿ ಇಲ್ಲಿಗೆ ಭೇಟಿ ನೀಡಿದರೂ ಪ್ರೀತಿಯಿಂದ ವಿವರಣೆ ನೀಡುತ್ತಾರೆ ಭಟ್ಟರು. ವ್ಯವಸ್ಥಿತವಾಗಿ ಬೆಳೆಸಿದರೆ ಕೃಷಿಯಂತೆ ಉತ್ತಮ ಆದಾಯ ಸಾಧ್ಯ. ಬೇರು, ಗಡ್ಡೆ, ಕಾಯಿ, ಎಲೆ ಹೀಗೆ ಇಲ್ಲಿ ಎಲ್ಲವೂ ಅಮೂಲ್ಯವಾಗಿರುವದಲ್ಲದೇ ರೋಗಿಗಳಿಗೆ ಸಂಜೀವಿನಿಯೂ ಹೌದು ಅನ್ನುತ್ತಾರೆ. ಪ್ರಕಾಶ ಭಟ್ಟರು ತಮ್ಮಲ್ಲಿ ಶತಾವರಿ, ದೊಡ್ಡ ನೇರಳೆ, ದಾಲ್ಚಿನ್ನಿ, ಬಜೆ, ಶುಂಠಿ, ಅಂಬೆಕೊoಬು, ನೆಲ ನೆಲ್ಲಿ, ಅಶೋಕ ಸಸ್ಯಗಳನ್ನೂ ಬೆಳೆಸಿದ್ದಾರೆ.


 "ಅಶೋಕ ವನ" ಕುರಿತಂತೆ ಹಂಸ YouTube ಚಾನೆಲ್ ನಲ್ಲಿ ವೀಡಿಯೋ ಕೂಡ ಪ್ರಸಾರವಾಗಿದೆ ಈ ಕೆಳಗಿನ ಲಿಂಕ್ ಅನ್ನು ಕಾಪಿ ಮಾಡಿ ಗೂಗಲ್ ಸರ್ಚ್ ಮಾಡುವುದರ ಮೂಲಕ ವೀಕ್ಷಿಸಬಹುದಾಗಿದೆ

https://youtu.be/VMEeMpUSIls

       ಯೋಗ ವನ ನಿರ್ಮಾಣದ ಕನಸು

ಒಂದು ಆರೋಗ್ಯದಾಯಕ, ಸಂಪ್ರದಾಯ, ಸಂಸ್ಕೃತಿ ಅನುಗುಣವಾಗಿ ವ್ಯವಸ್ಥಿತ ಯೋಗ ವನ ನಿರ್ಮಾಣ ಮಾಡಬೇಕೆಂಬ ಕನಸು ಭಟ್ಟರದ್ದು. ಪರಿಸರದ ಪ್ರಶಸ್ತವಾದ ಸ್ಥಳದಲ್ಲಿ ಏಕಾಗ್ರತೆ ಹೆಚ್ಚುತ್ತದೆ. ಪ್ರಪಂಚದ ಜಂಜಾಟದಲ್ಲಿ ಮುಳುಗಿಹೋದ ಮಾನವ ಇಹದ ನೋವು ಮರೆತು ನಲಿವಿನಲ್ಲಿ ಮನಸ್ಸು ಲೀನ ಗೊಳಿಸುವ ಅವರ ಕಲ್ಪನೆ ಮೆಚ್ಚುವಂತದ್ದು. ಅವರ ನಿರಂತರ ಪರಿಶ್ರಮದ ಸಾಧನೆಗೆ ಅವರನ್ನು ಹಂಸ ಅಭಿನಂದಿಸುತ್ತದೆ. ಔಷಧೀಯ ಕೃಷಿ ಮಾಹಿತಿಗೆ ಪ್ರಕಾಶ ಭಟ್ಟರನ್ನು 9481651332 ಮೊಬೈಲ್ ಸಂಖ್ಯೆ ಮೂಲಕ ಸಂಪರ್ಕಿಸಬಹುದು.

"ಅಶೋಕ ವನ" ಕುರಿತಂತೆ ಹಂಸ YouTube ಚಾನೆಲ್ ನಲ್ಲಿ ವೀಡಿಯೋ ಕೂಡ ಪ್ರಸಾರವಾಗಿದೆ ಈ ಕೆಳಗಿನ ಲಿಂಕ್ ಅನ್ನು ಕಾಪಿ ಮಾಡಿ ಗೂಗಲ್ ಸರ್ಚ್ ಮಾಡುವುದರ ಮೂಲಕ ವೀಕ್ಷಿಸಬಹುದಾಗಿದೆ

https://youtu.be/VMEeMpUSIls


ಪ್ರತಿಕ್ರಿಯೆ

Post a Comment

0 Comments