Hot Posts

6/recent/ticker-posts

ಎಲೆ ಚುಕ್ಕೆ ರೋಗನಿರ್ವಹಣೆ ಬಗ್ಗೆ ಶಿವಮೊಗ್ಗ ವಿಶ್ವವಿದ್ಯಾಲಯ ಏನು ಹೇಳುತ್ತೆ ನೋಡಿ

ಎಲೆ ಚುಕ್ಕೆ ರೋಗ ನಿರ್ವಹಣೆ: ಶಿವಮೊಗ್ಗ ತೋಟಗಾರಿಕೆ ವಿಜ್ಞಾನಗಳ ವಿದ್ಯಾಲಯದ ಸಲಹೆ 

ಅಡಿಕೆ ತೋಟಿಗರನ್ನು ಬಹಳವಾಗಿ ಕಾಡುತ್ತಿರುವ ಎಲೆ ಚುಕ್ಕೆ ರೋಗ ಕುರಿತಂತೆ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ ಇದರ ವಿಜ್ಞಾನಿಗಳು ಇದರಲ್ಲಿ ನಿರ್ವಹಣೆ ಬಗ್ಗೆ ಸಲಹೆ ಮಾರ್ಗದರ್ಶನ ನೀಡಿದ್ದಾರೆ. 

ರೋಗಕಾರಕಗಳು

ಕೊಲ್ಲೆಟೋಟ್ರೈಕಮ್ ಗ್ಲೀಯೋಸ್ಪೆರೈಡ್ಸ್, ಫಿಲ್ಲೊಸ್ಟಿಕ್ಟ ಅರಕೆ ಮತ್ತು ಪೆಸ್ಟಲೋಸಿಯಾಪ್ಲಿಸ್ ಅರಕೆ

ರೋಗದ ಲಕ್ಷಣಗಳು

* ಕೊಲ್ಲೆಟೋಟ್ರೈಕಮ್ ಶಿಲೀಂಧ್ರವು ಸೋಗೆಗಳ ಗರಿಗಳ ಮೇಲೆ ಹಳದಿ ಮತ್ತು ಕಪ್ಪು ಬಣ್ಣದ ಚಿಕ್ಕ ಗಾತ್ರದ ಚುಕ್ಕೆಗಳನ್ನು ಉಂಟು ಮಾಡುತ್ತದೆ. ಹಾಗೂ ಅಂತಹ ಚುಕ್ಕೆಗಳ ಸುತ್ತ ಹಳದಿ ಬಣ್ಣದ ಆವರಣವಿರುತ್ತದೆ. ಮತ್ತು ಇಂತಹ ಗರಿಗಳು ತುದಿಯಿಂದ ಒಣಗಲು ಪ್ರಾರಂಭಿಸುತ್ತವೆ.

ಫಿಲ್ಲೊಕ್ಷ ಶಿಲೀಂಧ್ರವು ಮರಗಳ ಸೋಗೆಗಳ ಮೇಲ್ಬಾಗದಲ್ಲಿ ದೊಡ್ಡ ಗಾತ್ರದ ಬೂದಿ ಮಿಶ್ರಿತ ಬಿಳಿ ಬಣ್ಣದ ಚುಕ್ಕೆಗಳು ಕಂಡು ಬಂದು ಅವುಗಳ ಅಂಚು ಕಂದು ಮತ್ತು ಕಪ್ಪು ಬಣ್ಣದ ಚುಕ್ಕೆಗಳ ರೂಪದಲ್ಲಿ ಕಾಣಿಸುತ್ತದೆ.

ಪೆಸ್ಟಲೋಷಿಯ ಬಾಧಿತ ಗರಿಗಳ ಮೇಲೆ ನಸು ಹಳದಿ ಬಣ್ಣದ ಚುಕ್ಕೆಗಳು ಕಾಣಿಸುತ್ತವೆ.ಈ ಚುಕ್ಕೆಗಳು ಕೆಳಗಿನ ಎಲೆಗಳಿಂದ ಪ್ರಾರಂಭವಾಗಿ ಶೀಘ್ರವಾಗಿ ಒಂದಕ್ಕೊಂದು ಕೂಡಿಕೊಂಡು ಪೂರ್ತಿ ಹೆಡೆಗಳನ್ನು ಆವರಿಸುತ್ತವೆ.

ರೋಗ ಉಲ್ಬಣಗೊಂಡಾಗ ಹೆಡೆಗಳು ಒಣಗಲಾರಂಭಿಸುತ್ತವೆ. ಇಂತಹ ಒಣಗಿದ ಎಲ್ಲಾ ಹೆಡೆಗಳು ಕಾಂಡಕ್ಕೆ ಜೋತು ಬಿದ್ದು ಮರ ಶಕ್ತಿ ಕಳೆದುಕೊಂಡು ಇಳುವರಿ ಕುಂಠಿತಗೊಳ್ಳುತ್ತದೆ.

ರೋಗಕ್ಕೆ ಪೂರಕವಾದ ಅಂಶಗಳು

ಶಿಲೀಂದ್ರವು ರೋಗಗ್ರಸ್ಥ ಗರಿಗಳಲ್ಲಿ ವಾಸಿಸುವುದು, ಮಳೆಹನಿಗಳ ಚಿಮ್ಮುವಿಕೆಯಿಂದ ಶಿಲೀಂಧ್ರದ ಕಣಗಳು ಗಾಳಿಯಲ್ಲಿ ಸೇರಿ ಹೊಸಗರಿಗಳನ್ನು ತಲುಪುತ್ತವೆ. ಹಾಗೆಯೇ ತೇವಭರಿತ ಬಿಸಿಲಿನ ವಾತವರಣ, ಕಡಿಮೆ ಉಷ್ಣಾಂಶ (18' ರಿಂದ 24 ಸೆ)

ಮತ್ತು ಹೆಚ್ಚಿನ ಆದ್ರತೆ (>85 %) ಈ ರೋಗದ ತೀವ್ರತೆ ಮತ್ತು ಹರಡುವಿಕೆಗೆ ಪೂರಕವಾದ ಅಂಶಗಳಾಗಿರುತ್ತವೆ. ಈ ರೋಗವು ವರ್ಷ ಪೂರ್ತಿ ಕಂಡು ಬಂದರು ಸಹ ಮಾರ್ಚ್ ನಿಂದ ಸೆಪ್ಟೆಂಬರ್ ತಿಂಗಳವರೆಗೂ ಹೆಚ್ಚಿನ ಬಾಧೆಯನ್ನು ಉಂಟು ಮಾಡುತ್ತದೆ.

ರೋಗದ ನಿರ್ವಹಣೆ

> ರೋಗಬಾಧಿತ ಒಣಗಿದ ಗರಿಗಳನ್ನು ಕತ್ತರಿಸಿ ತೆಗೆದು ನಾಶಪಡಿಸುವುದರಿಂದ ರೋಗಾಣುವಿನ ಹರಡುವಿಕೆಯನ್ನು

ಪರಿಣಾಮಕಾರಿಯಾಗಿ ತಡೆಯಬಹುದು.

> ತೋಟದಲ್ಲಿ ಬಿಸಿಲು ಬೀಳುವಂತೆ ಮಾಡಲು ಅಂತರ ಬೆಳೆಗಳ ಅಥವಾ ಕಾಡು ಮರಗಳ ಹೆಚ್ಚುವರಿ ರೆಂಬೆಗಳನ್ನು ಕತ್ತರಿಸಿ ತೆಗೆಯುವುದು.

> ಮರಗಳ ಉತ್ತಮ ಬೆಳವಣಿಗೆಗೆ ಕೊಟ್ಟಿಗೆ ಗೊಬ್ಬರದ ಜೊತೆಗೆ ಶಿಫಾರಿತ ಪೋಷಕಾಂಶಗಳಾದ ಸಾರಜನಕ: ರಂಜಕ: ಪೊಟ್ಯಾಶ್ (100:40:140 ಗ್ರಾಂ ಪ್ರತೀ ಮರಕ್ಕೆ) ನೀಡಬೇಕು ಅಥವಾ ಮಣ್ಣು ಪರೀಕ್ಷೆಯ ಆಧಾರದ ಮೇಲೆ ಇತರೆ ಪೋಷಕಾಂಶಗಳನ್ನು ಒದಗಿಸುವುದು.

> ಮಣ್ಣಿನ ರಸಸಾರಕ್ಕೆ ಅನುಗುಣವಾಗಿ ಕೃಷಿ ಸುಣ್ಣವನ್ನು ಮರಗಳಿಗೆ ನೀಡುವುದು.

ಶಿಲೀಂಧ್ರನಾಶಕಗಳ ಬಳಕೆ:

> ಈ ರೋಗದ ತೀವ್ರತೆಯನ್ನು ಕಡಿಮೆಗೊಳಿಸಲು ಮಾರ್ಚ್ ಅಥವಾ ಏಪ್ರಿಲ್ ತಿಂಗಳಿನಲ್ಲಿ ಪ್ರೋಪಿನೆಟ್ (2 ಗ್ರಾಂ) ಅಥವಾ

ಮ್ಯಾಂಕೋಜೆಬ್ (2.5 ಗ್ರಾಂ) ಜೊತೆಗೆ ರಾಳ (1 ಮಿ.ಲೀ) ಪ್ರತೀ ಲೀಟರ್ ನೀರಿನಲ್ಲಿ ಬೆರೆಸಿ ಹಿಂಗಾರ ಮತ್ತು ಸೋಗೆಗಳಿಗೆ ಸಿಂಪಡಿಸುವುದು.

      ರೋಗದ ಲಕ್ಷಣ ಹೊಂದಿರುವ ಅಡಿಕೆ ಎಲೆ

 

ಮಳೆಗಾಲದ ಮುಂಚೆ ಶೇ. 1 ರ ಬೋರ್ಡೋ ದ್ರಾವಣ ಅಥವಾ ಶೇ. 0.3 ರ ತಾಮ್ರದ ಆಕ್ಸಿಕ್ಲೋರೈಡ್ ಶಿಲೀಂದ್ರನಾಶಕಗಳನ್ನು 1 ಮಿ. ಲೀ. ಅಂಟು ದ್ರಾವಣ ಜೊತೆ ಬೆರಸಿ ಎಲ್ಲಾ ಹಿಂಗಾರ ಮತ್ತು ಸೋಗೆಗಳಿಗೆ ಸಿಂಪಡಿಸುವುದು.

ಶೇ. 1 ರ ಬೋರ್ಡೋ ದ್ರಾವಣ ಶಿಲೀಂಧ್ರನಾಶಕವನ್ನು 1 ಮಿ. ಲೀ. ಆಂಟು ದ್ರಾವಣ ಜೊತೆ ಬೆರಸಿ ಮೊದಲ ಸಿಂಪರಣೆಯ 30 ದಿನಗಳ ನಂತರ ಎಲ್ಲಾ ಹಿಂಗಾರ ಮತ್ತು ಸೋಗೆಗಳಿಗೆ ಸಿಂಪಡಿಸುವುದು.

ಶೇ. 1 ರ ಬೋರ್ಡೋ ದ್ರಾವಣ ಶಿಲೀಂಧ್ರನಾಶಕವನ್ನು 1 ಮಿ. ಲೀ. ಅಂಟು ದ್ರಾವಣ ಜೊತೆ ಬೆರಸಿ ಎರಡನೇ ಸಿಂಪರಣೆಯ 30 ದಿನಗಳ ನಂತರ ಎಲ್ಲಾ ಹಿಂಗಾರ ಮತ್ತು ಸೋಗೆಗಳಿಗೆ ಸಿಂಪಡಿಸುವುದು.

A ಸೆಪ್ಟೆಂಬರ್ • ಅಕ್ಟೋಬರ್ ತಿಂಗಳಿನಲ್ಲಿ ಹೆಕ್ಸ್‌ಕೊನಜೋಲ್ ಅಥವಾ 5% ಅಥವಾ ಟೆಯಾಬುಕೋನೊಜೋಲ 2. 38.39 ಎಸ್ ಈ ಅಥವಾ ಪ್ರೊಪಿಕೊನಜೋಲ್ 25% ಇ.ಸಿ. ಅಂತರವ್ಯಾಪಿ ಶಿಲೀಂದ್ರನಾಶಕಗಳನ್ನು 1 ಮಿ. ಲೀ. ಜೊತೆಗೆ ಅಂಟು ದ್ರಾವಣ (1 ಮಿ.ಲೀ.) ಪ್ರತೀ ಲೀಟರ್ ನೀರಿನಲ್ಲಿ ಬೆರಸಿ ಗಿಡದ ಎಲ್ಲಾ ಎಲೆಗಳಿಗೂ ಸಿಂಪರಣೆ ಮಾಡಬೇಕು

> ರೋಗದ ಬಾಧೆಯು ಅಂತರ ಬೆಳೆಯಾದ ಕಾಳುಮೆಣಸು ಬೆಳೆಗೂ ಸಹ ಹರಡುವುದರಿಂದ ಇವುಗಳಿಗೂ ಸಹ ಸಿಂಪರಣೆ ಮಾಡಬೇಕು.

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ ಅವರ ಪ್ರಕಟಣೆ 

       


ಪ್ರತಿಕ್ರಿಯೆ

Post a Comment

0 Comments