ಯೋಗಮಂದಿರದಲ್ಲಿ ಆರೊಹಿ ಭಜನಾ ತರಬೇತಿ ಕಾರ್ಯಾಗಾರ
ಶಿರಸಿಯ ಯೋಗಮಂದಿರದಲ್ಲಿ ಮೇ ತಿಂಗಳ ೨೨ ರಿಂದ ೨೪ ಶಿಕ್ರವಾರದಿಂದ ಭಾನುವಾರದವರೆಗೆ ಮೂರುದಿನಗಳ ಭಜನಾ ತರಬೇತಿ ಕಾರ್ಯಾಗಾರವನ್ನು ಶ್ರೀಮದ್ ಜಗದ್ಗುರು ಶ್ರೀಶ್ರೀಶ್ರೀ ಗಂಗಾಧರೇoದ್ರ ಸರಸ್ವತಿ ಮಹಾಸ್ವಾಮಿಗಳು, ಶ್ರೀ ಸಂಸ್ಥಾನ ಸ್ವರ್ಣವಲ್ಲಿ ಇವರ ಕೃಪಾಶೀರ್ವಾದಗಳೊಂದಿಗೆ,ಆರೋಹಿ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕೇಂದ್ರ, ಶಿರಸಿ ಇವರ ಸಂಘಟನೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಆರೊಹಿ ಸಂಸ್ಥೆಯು ಕಳೆದ ನಾಲ್ಕು ವರ್ಷಗಳಿಂದ ಶಿರಸಿಯನ್ನು ಕೇಂದ್ರವಾಗಿರಿಸಿಕೊAಡು ಅನೇಕ ಸಂಗೀತ ಸಂಬAಧಿತ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ. ನಿರಂತರ ಶಾಸ್ತಿçÃಯ ಸಂಗೀತ ಕಲಿಕಾ ತರಗತಿಗಳು, ಧ್ವನಿಸಂಸ್ಕಾರ ತರಬೇತಿ ಶಿಬಿರಗಳು, ರಾಜ್ಯಮಟ್ಟದ ಖ್ಯಾಲ್ ಗಾಯನ ಸ್ಪರ್ಧೆ ಹಾಗೂ ಶಾಸ್ತಿçಯ ಸಂಗೀತ ಸಮಾರೋಹಗಳನ್ನು ಯಶಸ್ವಿಯಾಗಿ ಸಂಘಟಿಸಿದ್ದು ವಾರ್ಷಿಕವಾಗಿ ಆರೊಹಿ ಸಾಧಕ ಪ್ರಶಸ್ತಿ ಮೂಲಕ ಸಾಧಕರನ್ನು ಗೌರವಿಸುತ್ತಾ ಬಂದಿದೆ. ಸಂಗೀತದ ಮೂಲಕ ಆಧ್ಯಾತ್ಮಿಕÀ ಸಾಧನೆಯ ಮಾರ್ಗವಾದ ಭಜನೆ, ಸಾಮೂಹಿಕ ಗಾಯನದ ತರಬೇತಿಯ ಅತ್ಯಂತ ಅಪರೂಪದ ಹಾಗೂ ಅತ್ಯಗತ್ಯವಾದ ತರಬೇತಿ ಕಾರ್ಯಾಗಾರವನ್ನು ಈ ವರ್ಷ ಸಂಘಟಿಸುತ್ತಿದೆ.
ಶಿಬಿರದಲ್ಲಿ ಭಜನಾ ಮಾರ್ಗಸೂಚಿ, ಧ್ವನಿ ಸಂಸ್ಕಾರ, ರಾಗ ಮತ್ತು ಶೃತಿ ಜ್ಞಾನ, ವಾದ್ಯ ಸಂಗೀತದ ಬಳಕೆ, ಸಾಮೂಹಿಕ ಗಾಯನ, ಭಜನೆ/ಭಕ್ತಿಯ ಮಹತ್ವ ಕುರಿತು ತಿಳಿಸಿಕೊಡಲಾಗುತ್ತದೆ. ಶಿಬಿರಾಂತ್ಯದಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರ ನೀಡಲಾಗುವುದು.
ಶಿಬಿರ ನಿರ್ದೇಶಕರಾಗಿ ಡಾ|| ಹರೀಶ ಹೆಗಡೆ ಕನಕನಹಳ್ಳಿ ಪ್ರಾಚಾರ್ಯರು ,ಸ್ವರಾತ್ಮ ಗುರುಕುಲ, ವಿಷ್ಣುಗುಪ್ತ ವಿಶ್ವವಿದ್ಯಾಲಯ, ಅಶೋಕೆ, ಗೋಕರ್ಣ ಸಂಪನ್ಮೂಲ ವ್ಯಕ್ತಿಗಳಾಗಿ, ಹರಿಕಥೆ ವಿದ್ವಾಂಸರಾದ ನಾರಾಯಣದಾಸರು, ಹೀಪನಳ್ಳಿ, ಸಂಗೀತ ವಿದ್ವಾಂಸರಾದ ಪಂ. ದತ್ತಾತ್ರೇಯ ಗಾಂವ್ಕರ್ ಚಿಟ್ಟೇಪಾಲ್, ಆರೋಹಿ ಸಂಗೀತ ವಿದ್ಯಾಲಯದ ಗುರುಮಾತೆ ವಿದುಷಿ ದೀಪಾ ಶಶಾಂಕ ಭಾಗವಹಿಸಲಿದ್ದಾರೆ ಎಂದು ಸಂಯೋಜಕರಾದ ಶಶಾಂಕ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶುಲ್ಕ ಸಹಿತವಾದ ಈ ಶಿಬಿರಕ್ಕೆ ಹೆಸರು ನೊಂದಾಯಿಸಲು ಕೊನೆಯ ದಿನಾಂಕ ೨೦.೦೫.೨೦೨೬
ಆಗಿದ್ದು ಹೆಚ್ಚಿ ವಿವರಗಳಿಗೆ ೯೪೪೮೯೬೫೪೬೪/ ೯೪೪೮೦೩೭೬೮೪ ದೂರವಾಣಿ ಸಂಖ್ಯೆ ಸಂಪರ್ಕಿಸಿ.
ಆಸಕ್ತರು ಲಿಂಕ್ ಮೂಲಕ ಹೆಸರು ನೋಂದಾಯಿಸಲು ಕೋರಿದೆ
https://docs.google.com/forms/d/e/1FAIpQLScwY4VpwKpok9w9tgQjkm8Lfzzo4HwRnKoV62uuPVnRLEOI6g/viewform?usp=publish-editor

0 Comments