ಶಿರಸಿ: ತಾಲೂಕಿನ ಕಾನಳ್ಳಿಯ ಲೋಕೇಶ ನರಸಿಂಹ ಹೆಗಡೆ ಇವರ ಮನೆಯಂಗಳದಲ್ಲಿ ನವೆಂಬರ್ 14 ಗುರುವಾರ ಮಧ್ಯಾಹ್ನ 3 ಗಂಟೆಗೆ ಹಂಸ ಸೇವಾ ಟ್ರಸ್ಟ್ (ರಿ.) ಹಾಗೂ ಶಿರಸಿಯ ಪಾರಂಪರಿಕ ವೈದ್ಯರ ಸಹಯೋಗದಲ್ಲಿ ಮಾನವ ಆರೋಗ್ಯಕ್ಕೆ ಪೂರಕವಾಗಿರುವ ಔಷಧೀಯ ಸಸ್ಯ ಪರಿಚಯ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಪಾರಂಪರಿಕ ವೈದ್ಯರಾದ ಮಂಜುನಾಥ ಹೆಗಡೆ ಹೂಡ್ಲಮನೆ, ರಾಮಚಂದ್ರ ನಾರಾಯಣ ಹೆಗಡೆ ತಾರೇಹಳ್ಳಿ, ಶ್ರೀಧರ ಹೆಗಡೆ ನಕ್ಷೆ ನಿತ್ಯ ಜೀವನದಲ್ಲಿ ಬರುವ ಕಾಯಿಲೆಗಳಿಗೆ ಹಳ್ಳಿಮದ್ದನ್ನು ಪರಿಚಯಿಸುವ ಸಸ್ಯಗಳ ಪರಿಚಯ ಮಾಡಿಕೊಡಲಿದ್ದಾರೆ. ಹಂಸ ಸೇವಾ ಟ್ರಸ್ಟ್ (ರಿ.)ಟ್ರಸ್ಟಿ ತನುಜಾ ವಿನಾಯಕ ಹೆಗಡೆ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.
0 Comments