Hot Posts

6/recent/ticker-posts

ಪ್ರತಿ ಊರಿನಲ್ಲಿ ಯಕ್ಷಗಾನ, ಸಂಗೀತ ಶಾಲೆಗಳು ನಡೆಯಲಿ: ಅನಂತಮೂರ್ತಿ ಹೆಗಡೆ

ಪ್ರತಿ ಊರಿನಲ್ಲಿ ಯಕ್ಷಗಾನ, ಸಂಗೀತ ಶಾಲೆಗಳು ನಡೆಯಲಿ: ಅನಂತಮೂರ್ತಿ ಹೆಗಡೆ 

ಶಿರಸಿ: ತಾಲೂಕಿನ ಹೆಗಡೆಕಕಟ್ಟಾ ಶ್ರೀ ಗಜಾನನ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಮತ್ತು ತಬಲಾ ವಿದ್ಯಾಲಯ ವಾರ್ಷಿಕ ಸಂಗೀತೋತ್ಸವ ನವೆಂಬರ್ 10 ಭಾನುವಾರ ನಡೆಯಿತು. ಸ್ಥಳೀಯ ನಮ್ಮ ಜಿಲ್ಲೆಯ ಸಮಸ್ಯೆಗಳ ಹೋರಾಟದಲ್ಲಿ ತೊಡಗಿಕೊಂಡಿದ್ದೇನೆ ಜಿಲ್ಲೆಗೆ ಒಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂದು ಈಗಾಗಲೇ ಪಾದಯಾತ್ರೆ ಮಾಡಿದ್ದೇನೆ. ನಮಗೀಗ ಬೇಕಾಗಿರುವುದು ಪ್ರತ್ಯೇಕ ಜಿಲ್ಲೆ ಹೋರಾಟ ಶಿರಸಿ ಜಿಲ್ಲೆ ಆದಾಗ ನಮ್ಮ ಶಿರಸಿ ಮತ್ತಷ್ಟು ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಕದಂಬ ಕನ್ನಡ ಜಿಲ್ಲೆ ಹೆಸರಿನಲ್ಲಿ ನಾವು ಒಂದಾಗಿದ್ದೇವೆ ನಾವೆಲ್ಲರೂ ಹೋರಾಟಕ್ಕೆ ಮುಂದಾಗೋಣ ಎಂದು ಸಾಮಾಜಿಕ ಕಾರ್ಯಕರ್ತ ವಿಶ್ವಂಭರ ಪತ್ರಿಕೆ ಸಂಪಾದಕ ಅನಂತಮೂರ್ತಿ ಹೆಗಡೆ ಹೇಳಿದರು. ಅವರು ವಿದ್ಯಾಲಯದ ವಾರ್ಷಿಕ ಸಂಗೀತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ಪ್ರತಿ ಊರಿನಲ್ಲಿ ಸಂಗೀತ ಯಕ್ಷಗಾನ ಶಾಲೆಗಳು ನಡೆಯಬೇಕು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿದಂತಾಗುತ್ತದೆ ಬಹಳ ಹಿಂದೆಯೇ ಈ ಶಾಲೆಯನ್ನು ಸ್ಥಾಪನೆ ಮಾಡಿದ ಹಿರಿಯರು ಅಭಿನಂದನಾರ್ಹರು ಎಂದರು. 

ಮುಖ್ಯ ಅತಿಥಿಗಳಾಗಿ ಆಗಮಿಸಿದ ಹೆಗಡೆಕಟ್ಟಾದ ಪ್ರತಿಯೊಂದು ಸಂಸ್ಕೃತಿಕ, ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಹೆಗಡೆಕಟ್ಟಾ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ ಪಿ ಹೆಗಡೆ ಕೊಟ್ಟೆಗದ್ದೆ ಮಾತನಾಡಿ ಹೆಗಡೆಕಟ್ಟಾ ಮತ್ತು ಸಂಗೀತ ಹೊಂದಾಣಿಕೆಯಾಗುವ ವಿಷಯ. ಸಾಹಿತ್ಯ, ಕಲೆ, ಯಕ್ಷಗಾನ ಎನ್ನುವುದು ಹೆಗಡೆಕಟ್ಟಾ ಭಾಗದಲ್ಲಿ ಹಾಸು ಹೊಕ್ಕಾಗಿದೆ. ಪ್ರಸ್ತುತ ಇಲ್ಲಿ ಸಂಗೀತ ಶಾಲೆ 18 ವರ್ಷಗಳಿಂದ ನಡೆಯುತ್ತಿದೆ ಆದರೆ ಸಂಪನ್ಮೂಲದ ಕೊರತೆ ಇರುವುದು ವಿಷಾದನೀಯ. ನಮ್ಮ ಗ್ರಾಮದಲ್ಲಿ ನಮ್ಮ ಇತಿಮಿತಿಯಲ್ಲಿ ಲಾಭದ ಆಸೆ ಇಲ್ಲದೆ ಅನೇಕರು ಶಾಲೆ ನಡೆಸಿಕೊಂಡು ಬಂದಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ವಿಪಿ ಹೆಗಡೆ ಹನುಮಂತಿ, ಸಂಗೀತ ಶಾಲೆಯ ಶಿಕ್ಷಕ ವಿದ್ವಾನ್ ವಿಘ್ನೇಶ್ವರ ಭಟ್ ಕೊಡೆಗದ್ದೆ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀ ಗಜಾನನ ಪ್ರೌಢಶಾಲೆ ಅಧ್ಯಕ್ಷ ಎಂ ಆರ್ ಹೆಗಡೆ ಹೊನ್ನೆಕಟ್ಟಾ ಮಾತನಾಡಿ ಶಾಲೆಯನ್ನು ನಡೆಸಿಕೊಂಡು ಬರುತ್ತಿರುವ ಎಲ್ಲರ ಶ್ರಮ ಅಭಿನಂದನೀಯ ನಮ್ಮ ಊರಿಗೆ ಹೆಮ್ಮೆಯ ವಿಚಾರ ಎಂದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾಲಯದ ವಿದ್ಯಾರ್ಥಿಗಳಿಂದ, ಶಾಲೆಯ ಶಿಕ್ಷಕ ವಿದ್ವಾನ್ ವಿಘ್ನೇಶ್ವರ ಭಟ್ಟ ಅವರಿಂದ ಸಂಗೀತ ಕಾರ್ಯಕ್ರಮ ಜರಗಿತು. ವಿದ್ಯಾರ್ಥಿಗಳ ಪ್ರಾರ್ಥನೆಯಿಂದ ಕಾರ್ಯಕ್ರಮ ಆರಂಭಗೊಂಡಿತು. ವೇದಿಕೆಯಲ್ಲಿ ಸಂಗೀತ ಶಾಲೆಯ ಶಿಕ್ಷಕ ವಿದ್ವಾನ್ ವಿಘ್ನೇಶ್ವರ ಭಟ್ ಕೊಡೆಗದ್ದೆ, ಶ್ರೀ ಗಜಾನನ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಶೈಲೇಂದ್ರ ಎಮ್ ಎಚ್ ನಿವೃತ್ತ ಶಿಕ್ಷಕ ವಿ ಪಿ ಹೆಗಡೆ ಹನುಮಂತಿ, ಎಂ ವಿ ಹೆಗಡೆ ಹಲಸಿನಕಟ್ಟಾ ಡಿ.ಕೆ.ಹೆಗಡೆ ಜಗಳೆಮನೆ ಉಪಸ್ಥಿತರಿದ್ದರು. ಕೆಡಿಸಿಸಿ ಬ್ಯಾಂಕ್ ಶಿರಸಿ, ಹೆಗಡೆಕಟ್ಟಾ ಸೇವಾ ಸಹಕಾರಿ ಸಂಘ, ಟಿಎಸ್ಎಸ್ ಶಿರಸಿ, ಅಗ್ರಿಕಲ್ಚರ್ ಡೆವಲಪ್ಮೆಂಟ್ ಸೊಸೈಟಿ, ಸುವರ್ಣ ಕೋ ಆಪರೇಟಿವ್ ಬ್ಯಾಂಕ್ ಮತ್ತು ಇನ್ನಿತರ ಸಂಘ ಸಂಸ್ಥೆಗಳು, ಅನಂತಮೂರ್ತಿ ಹೆಗಡೆ ಹಾಗೂ ಊರ ಸಾರ್ವಜನಿಕರು ಕಾರ್ಯಕ್ರಮಕ್ಕೆ ಧನ ಸಹಾಯ ನೀಡುವ ಮೂಲಕ ಪ್ರಾಯೋಜಕತ್ವ ವಹಿಸಿದ್ದರು. ಸ್ವಯಂ ಪ್ರೇರಿತವಾಗಿ ತನು ಮನ ಧನದಿಂದ ಸಹಾಯ ಸಲ್ಲಿಸಿದ ಎಲ್ಲರಿಗೂ ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸಲಾಯಿತು. ಸಂಗೀತ ಶಾಲೆಯ ಬೆನ್ನೆಲುಬಾಗಿ ನಿಂತು ಶಾಲೆಯನ್ನು ಮುನ್ನಡೆಸುತ್ತಿರುವ ನಿವೃತ್ತ ಶಿಕ್ಷಕ ಎಸ್ ಆರ್ ಹೆಗಡೆ ಸರಕುಳಿ ಕಾರ್ಯಕ್ರಮ ನಿರ್ವಹಿಸಿದರು. 

ಪ್ರತಿಕ್ರಿಯೆ

Post a Comment

0 Comments